ಅಷ್ಟಾವಕ್ರಗೀತಾ - ೧
ಅಷ್ಟಾವಕ್ರ ಗೀತೆ ಜನಕ ಮತ್ತು ಅಷ್ಟಾವಕ್ರನ ಸಂವಾದದ ರೂಪದಲ್ಲಿದೆ. ರಾಜಾ ಜನಕ ಅಷ್ಟಾವಕ್ರನನ್ನು ಮುಕ್ತಿಯನ್ನು ಪಡೆಯುವ ಮಾರ್ಗದ ಬಗ್ಗೆ ಕೇಳುತ್ತಾನೆ. ಅಷ್ಟಾವಕ್ರ ಅವನಿಗೆ ಅದನ್ನು ವಿವರಿಸುತ್ತಾನೆ . . ಶ್ರೀ .. ಅಥ ಶ್ರೀಮದಷ್ಟಾವಕ್ರಗೀತಾ ಪ್ರಾರಭ್ಯತೇ . ಜನಕ ಉವಾಚ .. ಕಥಂ ಜ್ಞಾನಮವಾಪ್ನೋತಿ ಕಥಂ ಮುಕ್ತಿರ್ಭವಿಷ್ಯತಿ . ವೈರಾಗ್ಯಂ ಚ ಕಥಂ ಪ್ರಾಪ್ತಮೇತದ್ ಬ್ರೂಹಿ ಮಮ ಪ್ರಭೋ .. 1-1.. ಜನಕ ಹೇಳಿದನು: ಜ್ಞಾನವನ್ನು ಹೇಗೆ ಸಂಪಾದಿಸಬೇಕು? ಮುಕ್ತಿಯನ್ನು ಹೇಗೆ ಪಡೆಯಬೇಕು? ವೈರಾಗ್ಯವನ್ನು ಪಡೆಯುವದು ಹೇಗೆ? ಪ್ರಭೂ, ನನಗೆ ತಿಳಿಸಿಕೊಡಿ. ಅಷ್ಟಾವಕ್ರ ಉವಾಚ .. ಮುಕ್ತಿಮಿಚ್ಛಸಿ ಚೇತ್ತಾತ ವಿಷಯಾನ್ ವಿಷವತ್ತ್ಯಜ . ಕ್ಷಮಾರ್ಜವದಯಾತೋಷಸತ್ಯಂ ಪೀಯೂಷವದ್ ಭಜ .. 1-2.. ಅಷ್ಟಾವಕ್ರ ಹೇಳಿದನು: ನೀನು ಮುಕ್ತಿ ಪಡೆಯಬೇಕೆಂಬ ಆಸೆ ಇದ್ದರೆ ವಿಷಯಗಳನ್ನು(ಕಾಮ, ಕ್ರೋಧ ಇತ್ಯಾದಿ) ವಿಷದಂತೆ ತ್ಯಜಿಸಬೇಕು. ಕ್ಷಮೆ, ದಯೆ ಸತ್ಯ ಮತ್ತು ಸಮಾಧಾನಗಳನ್ನು ಅಮೃತದಂತೆ ಬೆಳೆಸಿಕೊಳ್ಳಬೇಕು. ನ ಪೃಥ್ವೀ ನ ಜಲಂ ನಾಗ್ನಿರ್ನ ವಾಯುರ್ದ್ಯೌರ್ನ ವಾ ಭವಾನ್ . ಏಷಾಂ ಸಾಕ್ಷಿಣಮಾತ್ಮಾನಂ ಚಿದ್ರೂಪಂ ವಿದ್ಧಿ ಮುಕ್ತಯೇ .. 1-3.. ಮುಕ್ತಿ ಪಡೆಯಲು ನೀನು ಭೂಮಿ, ನೀರು, ಬೆಂಕಿ, ಗಾಳಿ, ಆಕಾಶಗಳಿಂದ ತುಂಬಿದವನಲ್ಲ. ಮುಕ್ತಿಯನ್ನು ಗಳಿಸಲು ನೀನು ಇವೆಲ್ಲವುಗಳ ಸಾಕ್ಷಿ ಹಾಗೂ ಚಿತ್ ( ಪ್ರಜ್ಞೆಯ) ರೂಪನು ಎಂಬ ಮಾತನ್ನು ...