ವೈರಾಗ್ಯ ಅಷ್ಟಾವಕ್ರ ಉವಾಚ- ಕೃತಾಕೃತೇ ಚ ದ್ವಂದ್ವಾನಿ ಕದಾ ಶಾಂತಾನಿ ಕಸ್ಯ ವಾ . ಏವಂ ಜ್ಞಾತ್ವೇಹ ನಿರ್ವೇದಾದ್ ಭವ ತ್ಯಾಗಪರೋಽವ್ರತೀ .. 9-1.. ಈ ಕೆಲಸ ಮಾಡಬೇಕಾದದ್ದು, ಈ ಕೆಲಸ ಮಾಡಬಾರದ್ದು ಎಂಬ ದ್ವಂದ್ವ ಎಂದಿಗೂ ಕೊನೆಯಾಗದು, ಯಾರಿಗೂ ಕೊನೆಯಾಗದು. ಇದನ್ನು ಅರಿತು ನೀನು ತ್ಯಾಗಪರನಾಗಿ, ವಿರಕ್ತನಾಗಿ, ನಿರಾಸಕ್ತನಾಗು. ಕಸ್ಯಾಪಿ ತಾತ ಧನ್ಯಸ್ಯ ಲೋಕಚೇಷ್ಟಾವಲೋಕನಾತ್ . ಜೀವಿತೇಚ್ಛಾ ಬುಭುಕ್ಷಾ ಚ ಬುಭುತ್ಸೋಪಶಮಂ ಗತಾಃ .. 9-2.. ಯಾರಲ್ಲಿ ಈ ಲೋಕದ ಚೇಷ್ಟೆಗಳನ್ನು ನೋಡಿ (ಅವುಗಳ ನಿರರ್ಥಕತೆಯನ್ನು ಅರಿತು), ಜೀವಿಸುವ ಇಚ್ಛೆ, ಜೀವನವನ್ನು ಭೋಗಿಸುವ ಇಚ್ಛೆ ಮತ್ತು ಜ್ಞಾನದ ಇಚ್ಛೆ ಇವೆಲ್ಲವೂ ನಶಿಸುವದೋ, ಅಂತವನೇ ಧನ್ಯನು. ಅನಿತ್ಯಂ ಸರ್ವಮೇವೇದಂ ತಾಪತ್ರಿತಯದೂಷಿತಂ . ಅಸಾರಂ ನಿಂದಿತಂ ಹೇಯಮಿತಿ ನಿಶ್ಚಿತ್ಯ ಶಾಮ್ಯತಿ .. 9-3.. ಈ ಜಗದಲ್ಲಿ ಕಾಣುವದೆಲ್ಲ ಅಶಾಶ್ವತ ಮತ್ತು ಮೂರು ಬಗೆಯ ನೋವಿನಿಂದ ತುಂಬಿರುವದು, ನಿಂದನೀಯ, ಸಾರವಿಲ್ಲದ್ದು, ಹೇಯವಾದದ್ದು ಎನ್ನುವ ಸತ್ಯ ತಿಳಿದಾಗ ನೀನು ಶಾಂತನಾಗುವೆ. ಕೋಽಸೌ ಕಾಲೋ ವಯಃ ಕಿಂ ವಾ ಯತ್ರ ದ್ವಂದ್ವಾನಿ ನೋ ನೃಣಾಂ . ತಾನ್ಯುಪೇಕ್ಷ್ಯ ಯಥಾಪ್ರಾಪ್ತವರ್ತೀ ಸಿದ್ಧಿಮವಾಪ್ನುಯಾತ್ .. 9-4.. ಮನುಜನಿಗೆ ಯಾವ ವಯಸ್ಸಿನಲ್ಲಿ ಅಥವಾ ಯಾವ ಕಾಲದಲ್ಲಿ ಸುಖ-ದುಃಖಗಳ, ಒಳಿತು-ಕೆಡುಕುಗಳ ದ್ವಂದ್ವ ಇರವದಿಲ್ಲ? ಅವುಗಳನ್...