ಅಷ್ಟಾವಕ್ರಗೀತಾ-೮
ಬಂಧನ ಮತ್ತು ಮುಕ್ತಿ
ಅಷ್ಟಾವಕ್ರ ಉವಾಚ -
ತದಾ ಬಂಧೋ ಯದಾ ಚಿತ್ತಂ ಕಿಂಚಿದ್ ವಾಂಛತಿ ಶೋಚತಿ .
ಕಿಂಚಿನ್ ಮುಂಚತಿ ಗೃಹ್ಣಾತಿ ಕಿಂಚಿದ್ಧೃಷ್ಯತಿ ಕುಪ್ಯತಿ .. 8-1..
ಯಾವಾಗ ಮನಸ್ಸು ಏನನ್ನಾದರೂ ಆಸೆ ಪಡುವದೋ, ಏನನ್ನಾದರೂ ಕುರಿತು ಶೋಕ ಪಡುವದೋ, ಏನನ್ನಾದರೂ ಪಡೆಯುವದೋ, ಏನನ್ನಾದರೂ ತ್ಯಜಿಸಿವದೋ, ಏನನ್ನಾದರೂ ಕುರಿತು ಸಂತೋಷ ಪಡುವದೋ, ಏನನ್ನಾದರೂ ಕುರಿತು ದುಃಖಿಸುವದೋ, ಆಗ ಆತ್ಮಕ್ಕೆ ಬಂಧನ ಉಂಟಾಗುತ್ತದೆ.
ತದಾ ಮುಕ್ತಿರ್ಯದಾ ಚಿತ್ತಂ ನ ವಾಂಛತಿ ನ ಶೋಚತಿ .
ನ ಮುಂಚತಿ ನ ಗೃಹ್ಣಾತಿ ನ ಹೃಷ್ಯತಿ ನ ಕುಪ್ಯತಿ .. 8-2..
ಯಾವಾಗ ಮನಸ್ಸು ಏನನ್ನೂ ಆಸೆ ಪಡುವದಿಲ್ಲವೋ, ಏನನ್ನು ಕುರಿತೂ ಶೋಕ ಪಡುವದಿಲ್ಲವೋ, ಏನನ್ನೂ ಪಡೆಯುವದಿಲ್ಲವೋ, ಏನನ್ನೂ ತ್ಯಜಿಸಿವದಿಲ್ಲವೋ, ಏನನ್ನು ಕುರಿತು ಸಂತೋಷಪಡುವದಿಲ್ಲವೋ, ಏನನ್ನೂ ಕುರಿತು ದುಃಖಿಸುವದಿಲ್ಲವೋ, ಆಗ ಆತ್ಮಕ್ಕೆ ಮುಕ್ತಿ ದೊರೆಯುತ್ತದೆ.
ತದಾ ಬಂಧೋ ಯದಾ ಚಿತ್ತಂ ಸಕ್ತಂ ಕಾಸ್ವಪಿ ದೃಷ್ಟಿಷು .
ತದಾ ಮೋಕ್ಷೋ ಯದಾ ಚಿತ್ತಮಸಕ್ತಂ ಸರ್ವದೃಷ್ಟಿಷು .. 8-3..
ಯಾವಾಗ ಮನಸ್ಸು ಯಾವುದಾದರೂ ದೃಷ್ಟಿಯಲ್ಲಿ ಅಥವಾ ಜಡ ವಸ್ತುವಿನಲ್ಲಿ ಆಸಕ್ತನಾಗುವದೋ, ಆಗ ಆತ್ಮ ಬಂಧನಕ್ಕೊಳಗಾಗುತ್ತದೆ. ಯಾವಾಗ ಮನಸ್ಸು ಎಲ್ಲದರಲ್ಲೂ ನಿರಾಸಕ್ತಿ ತಾಳುವದೋ, ಆಗ ಮೋಕ್ಷ ದೊರಕುತ್ತದೆ.
ಯದಾ ನಾಹಂ ತದಾ ಮೋಕ್ಷೋ ಯದಾಹಂ ಬಂಧನಂ ತದಾ .
ಮತ್ವೇತಿ ಹೇಲಯಾ ಕಿಂಚಿನ್ಮಾ ಗೃಹಾಣ ವಿಮುಂಚ ಮಾ .. 8-4..
'ನಾನು' ಎಂಬ ಮೋಹವನ್ನು ಬಿಟ್ಟರೆ ಮೋಕ್ಷ, "ನಾನು" ಎಂಬ ಮೋಹವಿದ್ದರೆ ಬಂಧನ. ಇದನ್ನು ಯೋಚಿಸಿ (ಮನನ ಮಾಡಿಕೊಂಡು) ಸುಲಭವಾಗಿ ಯಾವುದನ್ನೂ ಗ್ರಹಣ ಮಾಡಬೇಡ ಅಥವಾ ಯಾವುದನ್ನೂ ತ್ಯಜಿಸಬೇಡ.
ಸಂಪೂರ್ಣ ಕೃತಿಯನ್ನು ಡೌನ್ ಲೋಡ್ ಮಾಡಿ.
Comments
Post a Comment