Skip to main content

Posts

Showing posts with the label 15

ಅಷ್ಟಾವಕ್ರಗೀತೆ -೧೫

ಆತ್ಮ ಜ್ಞಾನ   ಅಷ್ಟಾವಕ್ರ ಉವಾಚ .. ಯಥಾತಥೋಪದೇಶೇನ ಕೃತಾರ್ಥಃ ಸತ್ತ್ವಬುದ್ಧಿಮಾನ್ . ಆಜೀವಮಪಿ ಜಿಜ್ಞಾಸುಃ ಪರಸ್ತತ್ರ ವಿಮುಹ್ಯತಿ .. ೧೫-೧.. ಶುದ್ಧ ಬುದ್ಧಿವಂತನು ಹೇಗೋ ಹೇಗೋ ಮಾಡಿದ ಅಲ್ಪ ಸ್ವಲ್ಪ ಉಪದೇಶದಿಂದಲಾದರೂ, ಆತ್ಮಸಾಕ್ಷಾತ್ಕಾರ ಪಡೆಯುತ್ತಾನೆ. ಆದರೆ (ರಜೋ-ತಮೋ ಗುಣಗಳಿಂದ ಪೀಡಿತನಾದ) ಇತರನು ಆಜೀವಪರ್ಯಂತ ಕಷ್ಟಪಟ್ಟರೂ ಅವನಿಗೆ ಆತ್ಮದ ತತ್ವ ತಿಳಿಯದೇ, ಬರಿದೇ ದಿಗ್ಭ್ರಮೆಗೊಳ್ಳುತ್ತಾನೆ. ಮೋಕ್ಷೋ ವಿಷಯವೈರಸ್ಯಂ ಬಂಧೋ ವೈಷಯಿಕೋ ರಸಃ . ಏತಾವದೇವ ವಿಜ್ಞಾನಂ ಯಥೇಚ್ಛಸಿ ತಥಾ ಕುರು .. ೧೫-೨.. ವಿಷಯಾಸಕ್ತಿ ಮೋಕ್ಷದ ಪರಮ ವೈರಿ. ಭೋಗಾಸಕ್ತಿಯೇ ಬಂಧನಕ್ಕೆ ಕಾರಣ. ಇದನ್ನು ತಿಳಿದು, ನಿನ್ನ ಇಚ್ಛೆಯಂತೆ ಮಾಡು. ವಾಗ್ಮಿಪ್ರಾಜ್ಞಾಮಹೋದ್ಯೋಗಂ ಜನಂ ಮೂಕಜಡಾಲಸಂ . ಕರೋತಿ ತತ್ತ್ವಬೋಧೋಽಯಮತಸ್ತ್ಯಕ್ತೋ ಬುಭುಕ್ಷಭಿಃ .. ೧೫-೩.. ಈ ತತ್ವಬೋಧವು ವಾಗ್ಮಿ, ಪ್ರಾಜ್ಞ, ಉದ್ಯಮಶೀಲ ಜನರನ್ನು ಮೌನಿಗಳಾಗಿ, ಜಡರನ್ನಾಗಿ, ನಿಷ್ಕ್ರಿಯರನ್ನಾಗಿ ಮಾಡುತ್ತದೆ. (ಆತ್ಮ ಸಾಕ್ಷಾತ್ಕಾರವಾದ ಮೇಲೆ ಇನ್ನೇನೂ ಸಾಧಿಸಲು,  ಮಾತನಾಡಲು, ಕ್ರಿಯೆ ಮಾಡಲು ಉಳಿಯುವದಿಲ್ಲ. ಅದಕ್ಕಾಗಿ ಅಂತಹ ಜ್ಞಾನಿಯು ಬಾಹ್ಯದಲ್ಲಿ ಮೂಕನಾಗಿ, ನಿಷ್ಕ್ರಿಯನಾಗಿ, ಜಡನಾಗುತ್ತಾನೆ). ಅದಕ್ಕಾಗಿಯೇ ಬುಭುಕ್ಷಗಳು (ಭೋಗಾಸಕ್ತರು) ಈ ಜ್ಞಾನವನ್ನು ದೂರವಿಡುತ್ತಾರೆ.  ನ ತ್ವಂ ದೇಹೋ ನ ತೇ ದೇಹೋ ಭೋಕ್ತಾ ಕರ್ತಾ ನ ವಾ ಭವಾನ್ . ಚಿದ್ರೂಪೋಽಸಿ ಸದಾ ಸಾಕ್ಷೀ...