ಆತ್ಮಜ್ಞಾನದ ಅವಲೋಕನ ಅಷ್ಟಾವಕ್ರ ಉವಾಚ .. ಅವಿನಾಶಿನಮಾತ್ಮಾನಮೇಕಂ ವಿಜ್ಞಾಯ ತತ್ತ್ವತಃ . ತವಾತ್ಮಜ್ಞಾನಸ್ಯ ಧೀರಸ್ಯ ಕಥಮರ್ಥಾರ್ಜನೇ ರತಿಃ .. 3-1.. ಶಬ್ದಾರ್ಥ: ಅವಿನಾಶಿನಂ =ವಿನಾಶವಿಲ್ಲದವನನ್ನು; ಆತ್ಮಾನಂ =ಆತ್ಮನನ್ನು; ಏಕಂ =ಏಕೈಕನನ್ನು; ವಿಜ್ಞಾಯ =ತಿಳಿದು; ತತ್ತ್ವತಃ =ನಿಜ ಸ್ವರೂಪದಲ್ಲಿ; ತವ =ನಿನ್ನ; ಆತ್ಮಜ್ಞಾನಸ್ಯ =ಆತ್ಮಜ್ಞಾನಿಯ; ಧೀರಸ್ಯ =ಧೀರನ; ಕಥಂ =ಹೇಗೆ; ಅರ್ಥಾರ್ಜನೇ =ಹಣದ(ಅರ್ಥ) ಗಳಿಕೆಯಲ್ಲಿ(ಅರ್ಜನೇ); ರತಿಃ =ಮೋಹ ಅನುವಾದ: ಅವಿನಾಶಿಯಾದ, ಅದ್ವೈತವಾದ ಆತ್ಮವನ್ನು ಅರಿತುಕೊಂಡಮೇಲೆ ಆತ್ಮಜ್ಞಾನಿಯಾದ ಧೀರನು, ಸಂಪತ್ತನ್ನು ಗಳಿಸುವದಲ್ಲಿ ಆಸಕ್ತಿಯನ್ನು ಹೇಗೆ ಇರಿಸಿಕೊಳ್ಳುತ್ತಾನೆ? ವಿವರಣೆ: ಆತ್ಮಜ್ಞಾನವನ್ನು ಹುಡುಕುತ್ತ ಜನಕನು ಅದರ ಜೊತೆಗೇ ರಾಜ್ಯಭಾರವನ್ನೂ ಮಾಡುತ್ತಿದ್ದಾನೆ. ಅದಕ್ಕಾಗಿ ಅಷ್ಟಾವಕ್ರ ಮುನಿಯು ಅವನನ್ನು ಪರೀಕ್ಷಿಸುತ್ತ ಕೇಳುತ್ತಾನೆ - ಆತ್ಮಜ್ಞಾನವನ್ನು ಪಡೆದ ಮೇಲೆಯೂ ಹೇಗೆ ಧನಸಂಪಾದನೆಯಲ್ಲಿ ಆಸಕ್ತಿ ಇರುತ್ತದೆ. ಆತ್ಮಾಜ್ಞಾನಾದಹೋ ಪ್ರೀತಿರ್ವಿಷಯಭ್ರಮಗೋಚರೇ . ಶುಕ್ತೇರಜ್ಞಾನತೋ ಲೋಭೋ ಯಥಾ ರಜತವಿಭ್ರಮೇ .. 3-2.. ಶಬ್ದಾರ್ಥ: ಆತ್ಮ + ಅಜ್ಞಾನಾತ್ =ಆತ್ಮದ ಅಜ್ಞಾನದಿಂದ; ಅಹೋ =ಅಹೋ; ಪ್ರೀತಿಃ =ಪ್ರೀತಿ; ವಿಷಯಭ್ರಮಗೋಚರೇ =ಭ್ರಮೆಯಾದ ವಿಷಯಗಳಲ್ಲಿ; ಶುಕ್ತೇ + ಅಜ್ಞಾನತಃ =ಚಿಪ್...