ಅಷ್ಟಾವಕ್ರಗೀತಾ - ೧೭
 ಅಷ್ಟಾವಕ್ರ ಉವಾಚ ..
ತೇನ ಜ್ಞಾನಫಲಂ ಪ್ರಾಪ್ತಂ ಯೋಗಾಭ್ಯಾಸಫಲಂ ತಥಾ .
ತೃಪ್ತಃ ಸ್ವಚ್ಛೇಂದ್ರಿಯೋ ನಿತ್ಯಮೇಕಾಕೀ ರಮತೇ ತು ಯಃ .. ೧೭-೧..
ಯಾರು ಸ್ವಚ್ಛೇಂದ್ರಿಯನೋ, ನಿತ್ಯ ತೃಪ್ತನೋ, ನಿತ್ಯ ಏಕಾಕಿಯಾಗಿ ಸಂತೋಷದಲ್ಲಿರುವನೋ, ಅವನು  ತನ್ನ ಯೋಗಾಭ್ಯಾಸಫಲವನ್ನೂ ಹಾಗೂ ಜ್ಞಾನವನ್ನೂ ಪಡೆಯುತ್ತಾನೆ.
ನ ಕದಾಚಿಜ್ಜಗತ್ಯಸ್ಮಿನ್ ತತ್ತ್ವಜ್ಞೋ ಹಂತ ಖಿದ್ಯತಿ .
ಯತ ಏಕೇನ ತೇನೇದಂ ಪೂರ್ಣಂ ಬ್ರಹ್ಮಾಂಡಮಂಡಲಂ .. ೧೭-೨..
ಆಹಾ, ತತ್ವಜ್ಞನಾದವನು ಎಂದೂ ದುಃಖಿಸುವದಿಲ್ಲ ಯಾಕೆಂದರೆ ಈ ಪ್ರಪಂಚವೆಲ್ಲಾ 'ಅವನಿಂದ' ಆವೃತವಾಗಿದೆ.
ನ ಜಾತು ವಿಷಯಾಃ ಕೇಽಪಿ ಸ್ವಾರಾಮಂ ಹರ್ಷಯಂತ್ಯಮೀ .
ಸಲ್ಲಕೀಪಲ್ಲವಪ್ರೀತಮಿವೇಭಂ ನಿಂಬಪಲ್ಲವಾಃ .. ೧೭-೩..
ಸಲ್ಲಕಿ ಗಿಡದ ಎಲೆಗಳನ್ನು ಪ್ರಿತಿಸುವ ಆನೆ ಬೇವಿನ ಎಲೆಯನ್ನು ಇಷ್ಟಪಡದೆ ಇರುವಂತೆ, ಸ್ವಯಂ ಸಂತುಷ್ಟನಾದವನಿಗೆ ವಿಷಯ ಸುಖಗಳು ಹರ್ಷ ತರುವದಿಲ್ಲ.
ಯಸ್ತು ಭೋಗೇಷು ಭುಕ್ತೇಷು ನ ಭವತ್ಯಧಿವಾಸಿತಃ .
ಅಭುಕ್ತೇಷು ನಿರಾಕಾಂಕ್ಷೀ ತಾದೃಶೋ ಭವದುರ್ಲಭಃ .. ೧೭-೪..
ಯಾರು ಭೋಗಿಸಿಯೂ ಅದರಲ್ಲಿ ನಿರ್ಲಿಪ್ತನೋ, ತಾನು ಭೋಗಿಸದ ವಸ್ತುಗಳಲ್ಲಿ ನಿರಾಸಕ್ತನೋ, ಅಂತಹ ಮನುಷ್ಯನು ಸಿಗುವದು ದುರ್ಲಭ.
ಬುಭುಕ್ಷುರಿಹ ಸಂಸಾರೇ ಮುಮುಕ್ಷುರಪಿ ದೃಶ್ಯತೇ .
ಭೋಗಮೋಕ್ಷನಿರಾಕಾಂಕ್ಷೀ ವಿರಲೋ ಹಿ ಮಹಾಶಯಃ .. ೧೭-೫..
ಈ ಜಗದಲ್ಲಿ ಭುಭುಕ್ಷಗಳೂ ಸಿಗುತ್ತಾರೆ, ಮುಮುಕ್ಷುಗಳೂ ಸಿಗುತ್ತಾರೆ. ಆದರೆ ಯಾರಿಗೆ ಭೋಗದಲ್ಲೂ ನಿರಾಸಕ್ತಿ, ಹಾಗೂ ಮೋಕ್ಷದಲ್ಲೂ ನಿರಾಸಕ್ತಿ ಇರುವದೋ ಅಂತವರು ಸಿಗುವದು ವಿರಳ.
ಧರ್ಮಾರ್ಥಕಾಮಮೋಕ್ಷೇಷು ಜೀವಿತೇ ಮರಣೇ ತಥಾ .
ಕಸ್ಯಾಪ್ಯುದಾರಚಿತ್ತಸ್ಯ ಹೇಯೋಪಾದೇಯತಾ ನ ಹಿ .. ೧೭-೬..
ಧರ್ಮ, ಅರ್ಥ, ಕಾಮ, ಮೋಕ್ಷ, ಜೀವನ, ಮರಣ ಇವು ಎಲ್ಲದರಲ್ಲೂ ಉದಾಸೀನತೆ ತಾಳಿ, ಯಾವದನ್ನೂ ಗೃಹಣ-ತ್ಯಾಗ ಮಾಡದೆ ಇರುವವನನು ಸಿಗುವದು ವಿರಳ.
ವಾಂಛಾ ನ ವಿಶ್ವವಿಲಯೇ ನ ದ್ವೇಷಸ್ತಸ್ಯ ಚ ಸ್ಥಿತೌ .
ಯಥಾ ಜೀವಿಕಯಾ ತಸ್ಮಾದ್ ಧನ್ಯ ಆಸ್ತೇ ಯಥಾ ಸುಖಂ .. ೧೭-೭..
ಅವನಿಗೆ ಈ ವಿಶ್ವದ ನಾಶವಾಗಬೇಕೆಂಬ ವಾಂಛೆ ಇಲ್ಲ, ಅದರ ಇರುವಿಕೆಯ ಬಗ್ಗೆ ದ್ವೇಷವೂ ಇಲ್ಲ.  ಜೀವನದಲ್ಲಿ ಏನೇ ಬಂದರೂ ಸುಖದಿಂದ ಇರುವ ಅವನು ಧನ್ಯನು. 
ಕೃತಾರ್ಥೋಽನೇನ ಜ್ಞಾನೇನೇತ್ಯೇವಂ ಗಲಿತಧೀಃ ಕೃತೀ .
ಪಶ್ಯನ್ ಶೃಣ್ವನ್ ಸ್ಪೃಶನ್ ಜಿಘ್ರನ್ನ್ ಅಶ್ನನ್ನಾಸ್ತೇ ಯಥಾ ಸುಖಂ .. ೧೭-೮..
ಶೂನ್ಯಾ ದೃಷ್ಟಿರ್ವೃಥಾ ಚೇಷ್ಟಾ ವಿಕಲಾನೀಂದ್ರಿಯಾಣಿ ಚ .
ನ ಸ್ಪೃಹಾ ನ ವಿರಕ್ತಿರ್ವಾ ಕ್ಷೀಣಸಂಸಾರಸಾಗರೇ .. ೧೭-೯..
ಯಾರಲ್ಲಿ ಸಂಸಾರಸಾಗರ ಕ್ಷೀಣವಾಗಿದೆಯೋ, ಅವನಿಗೆ ಆಸೆಯೂ ಇಲ್ಲ, ವಿರಕ್ತಿಯೂ ಇಲ್ಲ. ಅವನ ದೃಷ್ಟಿ ಶೂನ್ಯ , ಅವನ ಕಾರ್ಯಗಳು ವೃಥಾ ಕಾರ್ಯಗಳು, ಅವನ ಇಂದ್ರಿಯಗಳು ನಿಷ್ಕ್ರಿಯವಾಗಿವೆ.
ನ ಜಾಗರ್ತಿ ನ ನಿದ್ರಾತಿ ನೋನ್ಮೀಲತಿ ನ ಮೀಲತಿ .
ಅಹೋ ಪರದಶಾ ಕ್ವಾಪಿ ವರ್ತತೇ ಮುಕ್ತಚೇತಸಃ .. ೧೭-೧೦..
ಮುಕ್ತ ಚೇತನ ಮನಸ್ಸು ಎಂತಹ ಅದ್ಭುತ ಸ್ಥಿತಯಲ್ಲಿರುವದು! ಅವನು ಎಚ್ಚೆತ್ತೂ ಇಲ್ಲ, ನಿದ್ರಿಸಿಯೂ ಇಲ್ಲ. ಅವನು ಕಣ್ಣುಗಳು ತೆರೆದೂ ಇಲ್ಲ, ಮುಚ್ಚಿಯೂ ಇಲ್ಲ.
ಸರ್ವತ್ರ ದೃಶ್ಯತೇ ಸ್ವಸ್ಥಃ ಸರ್ವತ್ರ ವಿಮಲಾಶಯಃ .
ಸಮಸ್ತವಾಸನಾ ಮುಕ್ತೋ ಮುಕ್ತಃ ಸರ್ವತ್ರ ರಾಜತೇ .. ೧೭-೧೧..
ಮುಕ್ತನಾದ ಮನುಜನು ಸ್ವಸ್ಥನಾಗಿ, ಎಲ್ಲೆಲ್ಲೂ ರಾರಾಜಿಸುತ್ತಾನೆ. ಶುದ್ಧ ಹೃದಯನಾಗಿ ಆಶಾರಹಿತನಾಗಿ ಎಲ್ಲಲ್ಲೂ ಕಂಡುಬರುತ್ತಾನೆ.
ಪಶ್ಯನ್ ಶೃಣ್ವನ್ ಸ್ಪೃಶನ್ ಜಿಘ್ರನ್ನ್ ಅಶ್ನನ್  ಗೃಹ್ಣನ್ ವದನ್ ವ್ರಜನ್ .
ಈಹಿತಾನೀಹಿತೈರ್ಮುಕ್ತೋ ಮುಕ್ತ ಏವ ಮಹಾಶಯಃ .. ೧೭-೧೨..
ಮುಕ್ತನಾದ ಈ ಮಹಾಶಯನು ನೋಡುತ್ತ, ಕೇಳುತ್ತ, ಸ್ಪರ್ಶಿಸುತ್ತ, ಮೂಸುತ್ತ, ತಿನ್ನುತ್ತ, ಹಿಡಿಯುತ್ತ, ಮಾತಾಡುತ್ತ, ನಡೆಯುತ್ತ (ಇದ್ದರೂ) ಇವು ಯಾವುದರಲ್ಲೂ ಇಚ್ಛೆ ಅಥವಾ ದ್ವೇಷ ಮಾಡುವದಿಲ್ಲ. (ಯಾಕೆಂದರೆ ಅವನ ಮನದ ತುಂಬ ಬ್ರಹ್ಮನೇ ತುಂಬಿದ್ದಾನೆ.)
ನ ನಿಂದತಿ ನ ಚ ಸ್ತೌತಿ ನ ಹೃಷ್ಯತಿ ನ ಕುಪ್ಯತಿ .
ನ ದದಾತಿ ನ ಗೃಹ್ಣಾತಿ ಮುಕ್ತಃ ಸರ್ವತ್ರ ನೀರಸಃ .. ೧೭-೧೩..
ಮುಕ್ತನು ನಿಂದಿಸುವದಿಲ್ಲ, ಸ್ತುತಿಸುವದಿಲ್ಲ, ಹರ್ಷಿಸುವದಿಲ್ಲ, ಕೋಪಗೊಳ್ಳುವದಿಲ್ಲ, ಏನನ್ನೂ ಕೊಡುವದಿಲ್ಲ, ತೆಗೆದುಕೊಳ್ಳುವದಿಲ್ಲ. ಅವನು ಎಲ್ಲದರಲ್ಲಿ ನಿರಾಸಕ್ತ.
ಸಾನುರಾಗಾಂ ಸ್ತ್ರಿಯಂ ದೃಷ್ಟ್ವಾ ಮೃತ್ಯುಂ ವಾ ಸಮುಪಸ್ಥಿತಂ .
ಅವಿಹ್ವಲಮನಾಃ ಸ್ವಸ್ಥೋ ಮುಕ್ತ ಏವ ಮಹಾಶಯಃ .. ೧೭-೧೪..
ಸ್ತ್ರೀಯನ್ನು ನೋಡಿ ಅನುರಾಗದಿಂದ ಯಾರ ಮನ ಚಂಚಲವಾಗುವದಿಲ್ಲವೋ, ಮೃತ್ಯುವನ್ನು ನೋಡಿ ಯಾರ ಮನ ಭಯದಿಂದ ವಿಚಲಿತವಾಗುವದಿಲ್ಲವೋ, ಆ ಮಹಾಶಯ ಮುಕ್ತನು.
ಸುಖೇ ದುಃಖೇ ನರೇ ನಾರ್ಯಾಂ ಸಂಪತ್ಸು ಚ ವಿಪತ್ಸು ಚ .
ವಿಶೇಷೋ ನೈವ ಧೀರಸ್ಯ ಸರ್ವತ್ರ ಸಮದರ್ಶಿನಃ .. ೧೭-೧೫..
ಸುಖದಲ್ಲಿ, ದುಃಖದಲ್ಲಿ, ಗಂಡಸರಲ್ಲಿ, ಹೆಂಗಸರಲ್ಲಿ, ಸಂಪತ್ತು ಬಂದಾಗ, ವಿಪತ್ತು ಬಂದಾಗ, ಯಾವ ಪರಿಸ್ಥಿತಿಯಲ್ಲೂ ವಿಶೇಷವಾಗಿರದೆ ಸಮದರ್ಶಿಯಾಗಿರುವವನೇ ಧೀರನು ಹಾಗೂ ಮುಕ್ತನು.
ನ ಹಿಂಸಾ ನೈವ ಕಾರುಣ್ಯಂ ನೌದ್ಧತ್ಯಂ ನ ಚ ದೀನತಾ .
ನಾಶ್ಚರ್ಯಂ ನೈವ ಚ ಕ್ಷೋಭಃ ಕ್ಷೀಣಸಂಸರಣೇ ನರೇ .. ೧೭-೧೬..
ಜೀವನ್ಮುಕ್ತನಾದವನಿಗೆ ಹಿಂಸೆಯೂ ಇಲ್ಲ, ಕಾರುಣ್ಯವೂ ಇಲ್ಲ, ಉದ್ಧಟತನವೂ ಇಲ್ಲ, ದೀನತೆಯೂ ಇಲ್ಲ, ಆಶ್ಚರ್ಯವೂ ಇಲ್ಲ, ಕ್ಷೋಭೆಯೂ ಇಲ್ಲ.
ನ ಮುಕ್ತೋ ವಿಷಯದ್ವೇಷ್ಟಾ ನ ವಾ ವಿಷಯಲೋಲುಪಃ .
ಅಸಂಸಕ್ತಮನಾ ನಿತ್ಯಂ ಪ್ರಾಪ್ತಾಪ್ರಾಪ್ತಮುಪಾಶ್ನುತೇ .. ೧೭-೧೭..
ಜೀವನ್ಮುಕ್ತನಾದವನು ವಿಷಯದ್ವೇಷಿಯೂ ಅಲ್ಲ, ವಿಷಯಲೋಲುಪನೂ ಅಲ್ಲ. ಎಲ್ಲದರಲ್ಲೂ ನಿರಾಸಕ್ತನು. ಸದಾ ನಿರ್ಲಿಪ್ತ ಮನಸ್ಸಿನಿಂದ ಅವನು ಪ್ರಾಪ್ತವನ್ನೂ ಮತ್ತು ಅಪ್ರಾಪ್ತವನ್ನೂ ಆನಂದಿಸುತ್ತಾನೆ.
ಸಮಾಧಾನಾಸಮಾಧಾನಹಿತಾಹಿತವಿಕಲ್ಪನಾಃ .
ಶೂನ್ಯಚಿತ್ತೋ ನ ಜಾನಾತಿ ಕೈವಲ್ಯಮಿವ ಸಂಸ್ಥಿತಃ .. ೧೭-೧೮..
ಶೂನ್ಯಚಿತ್ತನಾದವನು ಸಮಾಧಾನ, ಅಸಮಾಧಾನ, ಹಿತ, ಅಹಿತ ಇವುಗಳನ್ನು ಯೋಚಿಸುವದೇ ಇಲ್ಲ. ಅವನು ಕೈವಲ್ಯದಲ್ಲಿ ಸ್ಥಿತನಾಗಿರುತ್ತಾನೆ.
ನಿರ್ಮಮೋ ನಿರಹಂಕಾರೋ ನ ಕಿಂಚಿದಿತಿ ನಿಶ್ಚಿತಃ .
ಅಂತರ್ಗಲಿತಸರ್ವಾಶಃ ಕುರ್ವನ್ನಪಿ ಕರೋತಿ ನ .. ೧೭-೧೯..
ಜೀವನ್ಮಕ್ತನು ಮೋಹರಹಿತನು, ನಿರಹಂಕಾರಿಯೂ, ಏನೂ ಇಲ್ಲ ಎಂದು ನಿಶ್ಚಿತನಾಗಿ ತಿಳಿದವನೂ, ಸರ್ವ ಆಸೆ ಕರಗಿಹೋದವನೂ ಆಗಿರುತ್ತಾನೆ. ಅವನು ಏನನ್ನಾದರೂ ಕಾರ್ಯ ಮಾಡುತ್ತಿದ್ದರೂ ಅವುಗಳಿಗೆ ಅಂಟಿಕೊಳ್ಳುವದಿಲ್ಲ.
ಮನಃಪ್ರಕಾಶಸಂಮೋಹಸ್ವಪ್ನಜಾಡ್ಯವಿವರ್ಜಿತಃ .
ದಶಾಂ ಕಾಮಪಿ ಸಂಪ್ರಾಪ್ತೋ ಭವೇದ್ ಗಲಿತಮಾನಸಃ .. ೧೭-೨೦..
ಅಂತಃಕರಣ ಕರಗಿದವನು ಮನಸ್ಸು ಪ್ರಕಾಶ,ಸಂಮೋಹ, ಸ್ವಪ್ನ, ಆಲಸ್ಯ ಎಲ್ಲದರಿಂದ ಮುಕ್ತನಾದ ಸ್ಥಿತಿಯನ್ನು ಹೊಂದಿದವನು. ಅವನು ಜೀವನ್ಮುಕ್ತನು.
Comments
Post a Comment