ಅಷ್ಟಾವಕ್ರಗೀತಾ - ೪

ಆತ್ಮಸಾಕ್ಷಾತ್ಕಾರದ ವೈಭವ

 ಜನಕ ಉವಾಚ ..

ಹಂತಾತ್ಮಜ್ಞಾನಸ್ಯ ಧೀರಸ್ಯ ಖೇಲತೋ ಭೋಗಲೀಲಯಾ .
ನ ಹಿ ಸಂಸಾರವಾಹೀಕೈರ್ಮೂಢೈಃ ಸಹ ಸಮಾನತಾ .. 4-1..

ಆತ್ಮಜ್ಞಾನಿಯಾದ ಧೀರನು ಭೋಗಲೀಲೆಯಲ್ಲಿ ಕ್ರೀಡಿಸುವಂತೆ ಕಂಡರೂ ಸಂಸಾರದ ಭಾರವನ್ನು ಹೊರುವ ಮೂಢರ ಜೊತೆ ಅವನನ್ನು ಹೋಲಿಸಲಾಗುವದಿಲ್ಲ. (ಯಾಕೆಂದರೆ ಅವನು ಭೋಗದಿಂದ ಯಾವ ರೀತಿಯಲ್ಲೂ ಪರಿಣಾಮಿತನಾಗುವದಿಲ್ಲ)

ಯತ್ ಪದಂ ಪ್ರೇಪ್ಸವೋ ದೀನಾಃ ಶಕ್ರಾದ್ಯಾಃ ಸರ್ವದೇವತಾಃ .
ಅಹೋ ತತ್ರ ಸ್ಥಿತೋ ಯೋಗೀ ನ ಹರ್ಷಮುಪಗಚ್ಛತಿ .. 4-2..

ಯಾವ ಸ್ಥಿತಿಯನ್ನು ಹೊಂದಲು ಇಂದ್ರ(ಶಕ್ರ)ನನ್ನು ಒಳಗೊಂಡು ದೇವತೆಗಳೆಲ್ಲ  ಅತ್ಯುತ್ಸುಕರಾಗಿರುತ್ತಾರೋ, ಆ ಸ್ಥಿತಿಯನ್ನು ಹೊಂದಿಯೂ ಕೂಡ ಯೋಗಿಯು ಹರ್ಷವನ್ನು ಹೊಂದುವದಿಲ್ಲ.

ತಜ್ಜ್ಞಸ್ಯ ಪುಣ್ಯಪಾಪಾಭ್ಯಾಂ ಸ್ಪರ್ಶೋ ಹ್ಯಂತರ್ನ ಜಾಯತೇ .
ನ ಹ್ಯಾಕಾಶಸ್ಯ ಧೂಮೇನ ದೃಶ್ಯಮಾನಾಪಿ ಸಂಗತಿಃ .. 4-3..

ಹೊಗೆ ಆಕಾಶವನ್ನೇ ತಲುಪಿದಂತೆ ಕಂಡರೂ ಅದು ದೂರವೇ ಇರುವಂತೆ,  ಜ್ಞಾನಿಗೆ ಪಾಪ ಪುಣ್ಯಗಳಾವವವೂ ತಟ್ಟುವದಿಲ್ಲ. 

ಆತ್ಮೈವೇದಂ ಜಗತ್ಸರ್ವಂ ಜ್ಞಾತಂ ಯೇನ ಮಹಾತ್ಮನಾ .
ಯದೃಚ್ಛಯಾ ವರ್ತಮಾನಂ ತಂ ನಿಷೇದ್ಧುಂ ಕ್ಷಮೇತ ಕಃ .. 4-4..

ಈ ಜಗತ್ತೆಲ್ಲವನ್ನು ಸ್ವಯಂ ಆತ್ಮವೇ ಎಂದು ತಿಳಿದ ಮಹಾತ್ಮನನ್ನು, ತನ್ನಿಚ್ಛೆಯಂತೆ ಜೀವಿಸುವದನ್ನು ಯಾರು ತಾನೇ ತಡೆಯಬಲ್ಲರು.

ಆಬ್ರಹ್ಮಸ್ತಂಬಪರ್ಯಂತೇ ಭೂತಗ್ರಾಮೇ ಚತುರ್ವಿಧೇ .
ವಿಜ್ಞಸ್ಯೈವ ಹಿ ಸಾಮರ್ಥ್ಯಮಿಚ್ಛಾನಿಚ್ಛಾವಿವರ್ಜನೇ .. 4-5..

ಬ್ರಹ್ಮನಿಂದ ಒಳಗೊಂಡು ಹುಲ್ಲುಕಡ್ಡಿಯವರೆಗಿನ  ಚತುರ್ವಿಧದ ಜೀವಿಗಳಲ್ಲಿ, ಯಾರಿಗಾದರೂ ಇಚ್ಛೆ ಅನಿಚ್ಛೆಗಳನ್ನು ಮೀರುವ ಸಾಮರ್ಥ್ಯವಿದ್ದರೆ ಅದು ಜ್ಞಾನಿಗೆ (ಆತ್ಮಜ್ಞಾನಿಗೆ) ಮಾತ್ರ. 

ಆತ್ಮಾನಮದ್ವಯಂ ಕಶ್ಚಿಜ್ಜಾನಾತಿ ಜಗದೀಶ್ವರಂ .
ಯದ್ ವೇತ್ತಿ ತತ್ಸ ಕುರುತೇ ನ ಭಯಂ ತಸ್ಯ ಕುತ್ರಚಿತ್ .. 4-6..

ತಾನು ಅದ್ವೈತನು, ತಾನು ಜಗದೀಶ್ವರನಿಂದ ಬೇರೆಯಲ್ಲ ಎಂದು ಅರಿತವರು ಬಹಳ ವಿರಳ. ಅಂತವರು ತಮಗೆ ತಿಳಿದಂತೆ ವರ್ತಿಸುತ್ತಾರೆ ಮತ್ತು ಅವರಿಗೆ ಯಾವ ಭಯವೂ ಇರುವದಿಲ್ಲ. 

 ಸಂಪೂರ್ಣ ಕೃತಿಯನ್ನು ಡೌನ್ ಲೋಡ್ ಮಾಡಿ.

 


 

Comments

Popular posts from this blog

ಅಷ್ಟಾವಕ್ರಗೀತಾ - ೧

ಅಷ್ಟಾವಕ್ರಗೀತಾ - ೩

ಅಷ್ಟಾವಕ್ರಗೀತಾ - ೨