ಅಷ್ಟಾವಕ್ರಗೀತಾ-೭
ಜನಕನ ಸಾಕ್ಷಾತ್ಕಾರ
ಜನಕ ಉವಾಚ -
ಮಯ್ಯನಂತಮಹಾಂಭೋಧೌ ವಿಶ್ವಪೋತ ಇತಸ್ತತಃ .
ಭ್ರಮತಿ ಸ್ವಾಂತವಾತೇನ ನ ಮಮಾಸ್ತ್ಯಸಹಿಷ್ಣುತಾ .. 7-1..
ನಾನೆಂಬ ಅನಂತ ಮಹಾಸಾಗರದಲ್ಲಿ ವಿಶ್ವವೆಂಬ ಹಡಗು ತನ್ನದೇ ಗಾಳಿಯಿಂದ ಅಲ್ಲಿ ಇಲ್ಲಿ ಓಲಾಡುತ್ತದೆ. ಆದರೆ ಅದರಿಂದ ನಾನು ವಿಚಲಿತನಾಗುವದಿಲ್ಲ.
ಮಯ್ಯನಂತಮಹಾಂಭೋಧೌ ಜಗದ್ವೀಚಿಃ ಸ್ವಭಾವತಃ .
ಉದೇತು ವಾಸ್ತಮಾಯಾತು ನ ಮೇ ವೃದ್ಧಿರ್ನ ಚ ಕ್ಷತಿಃ .. 7-2..
ನಾನೆಂಬ ಅನಂತ ಮಹಾಸಾಗರದಲ್ಲಿ ಜಗತ್ತೆಂಬ ಅಲೆಗಳು ಉದಯಿಸಿ ಅಸ್ತವಾಗುತ್ತಲಿದ್ದರೂ ನನಗೆ ವೃದ್ಧಿ ಅಥವಾ ಕ್ಷಯವಿಲ್ಲ.
ಮಯ್ಯನಂತಮಹಾಂಭೋಧೌ ವಿಶ್ವಂ ನಾಮ ವಿಕಲ್ಪನಾ .
ಅತಿಶಾಂತೋ ನಿರಾಕಾರ ಏತದೇವಾಹಮಾಸ್ಥಿತಃ .. 7-3..
ನಾನೆಂಬ ಮಹಾಸಾಗರದಲ್ಲಿ ವಿಶ್ವ ಎಂಬದು ಒಂದು ಕಲ್ಪನೆ. ಅತಿ ಶಾಂತನೂ ನಿರಾಕಾರನೂ ಆದ ನಾನು ಅದರಲ್ಲೇ ಇರುತ್ತೇನೆ.
ನಾತ್ಮಾ ಭಾವೇಷು ನೋ ಭಾವಸ್ತತ್ರಾನಂತೇ ನಿರಂಜನೇ .
ಇತ್ಯಸಕ್ತೋಽಸ್ಪೃಹಃ ಶಾಂತ ಏತದೇವಾಹಮಾಸ್ಥಿತಃ .. 7-4..
ನಾನು ಯಾವ ವಸ್ತುಗಳಲ್ಲೂ ಇಲ್ಲ ನನ್ನಲ್ಲಿ ವಸ್ತುಗಳೂ ಇಲ್ಲ - ಯಾಕೆಂದರೆ ನಾನು ಅನಂತ ಮತ್ತು ನಿಷ್ಕಳಂಕನು. ನಾನು ನಿರಾಸಕ್ತನು ಮತ್ತು ಆಸೆಯಿಲ್ಲದವನೂ, ಶಾಂತನೂ ಆಗದ್ದೇನೆ. ಇದರಲ್ಲೆ ಸ್ಥಿತನಾಗಿದ್ದೇನೆ.
ಅಹೋ ಚಿನ್ಮಾತ್ರಮೇವಾಹಮಿಂದ್ರಜಾಲೋಪಮಂ ಜಗತ್ .
ಇತಿ ಮಮ ಕಥಂ ಕುತ್ರ ಹೇಯೋಪಾದೇಯಕಲ್ಪನಾ .. 7-5..
ನಾನು ಕೇವಲ ಚಿತ್(ಪ್ರಜ್ಞೆ) ಮಾತ್ರನು. ಜಗತ್ತು ಇಂದ್ರಜಾಲದಂತೇ ಮಾಯಾಜಾಲ. ಹೀಗಿರುವಾಗ (ಇದನ್ನು ತಿಳಿದಿರುವ) ನನಗೆ ಹೇಗೆ ತಾನೇ ಇದನ್ನು ಸ್ವೀಕರಿಸಬೇಕು, ಇದನ್ನು ತಿರಸ್ಕರಿಸಬೇಕು ಎಂಬ ಭಾವನೆ ಇರುತ್ತದೆ?
ಸಂಪೂರ್ಣ ಕೃತಿಯನ್ನು ಡೌನ್ ಲೋಡ್ ಮಾಡಿ.
Comments
Post a Comment