Skip to main content

Posts

Showing posts from February, 2025

ಅಷ್ಟಾವಕ್ರ

ಅಷ್ಟಾವಕ್ರಗೀತೆ ಅದ್ವೈತ ಸಿದ್ಧಾಂತದ ಪ್ರಮುಖ ಗ್ರಂಥವಾಗಿದೆ. ಇದನ್ನು ಅಷ್ಟಾವಕ್ರಮುನಿಯು ಮಿಥಿಲೆಯ ರಾಜನಾದ ಜನಕನಿಗೆ ಉಪದೇಶ ಮಾಡಿದನು.   ಬಹುಶಃ ಇದರ ರಚನೆ ಭಗವದ್ಗೀತೆಯ ನಂತರ ಅಂದರೆ ಕ್ರಿ. ಪೂ. ೪೦೦-೩೦೦ ರಲ್ಲಿ ಆಗಿರಬಹುದು. ಅಷ್ಟಾವಕ್ರ ಋಷಿ ಯಾರೆಂಬುದರ ಬಗ್ಗೆ ಹೀಗೊಂದು ಕತೆ ಇದೆ. ಅರುಣಿ ಋಷಿಗೆ ಸುಜಾತಾ ಎಂಬ ಮಗಳಿದ್ದಳು. ಅವಳು ಕಹೋಡ ಎಂಬವನನ್ನು ಮದುವೆಯಾದಳು. ಗಂಡ-ಹೆಂಡತಿಯರಿಬ್ಬರೂ ಸದಾ ವೇದಶಾಸ್ತ್ರಗಳ ಅಧ್ಯಯನದಲ್ಲಿ ನಿರತರಾಗಿರುತ್ತಿದ್ದರು.  ಆದರೆ ಹೊಟ್ಟೆಪಾಡು ಬೇಕಲ್ಲ. ಕಹೋಡ ದಿನವಿಡೀ ಕಷ್ಟಪಟ್ಟು ಕೆಲಸ ಮಾಡುತ್ತಿದ್ದ, ನಂತರ ರಾತ್ರಿ ವೇದಾಧ್ಯಯನ ಮಾಡುತ್ತಿದ್ದ. ರಾತ್ರಿ ಬಹಳ ವೇಳೆಯವರೆಗೆ ಶ್ಲೋಕಗಳನ್ನು ಗಟ್ಟಿಯಾಗಿ ಓದುತ್ತಿರುತ್ತಿದ್ದ.  ಅವನ ಗರ್ಭಿಣಿ ಪತ್ನಿ ಸುಜಾತಾ, ಪಕ್ಕದಲ್ಲಿ ಕುಳಿತು, ತನ್ನ ಪತಿ ಶ್ಲೋಕಗಳನ್ನು ಹೇಳುತ್ತಿರುವುದನ್ನು ಕೇಳುತ್ತಿದ್ದಳು. ಅವಳ ಹೊಟ್ಟೆಯಲ್ಲಿರುವ ಮಗುವೂ ಕೇಳುತ್ತಿತ್ತು. ಸುಜಾತಾ ಎಂಟು ತಿಂಗಳ ಗರ್ಭಿಣಿಯಾಗಿದ್ದಾಗ, ಒಂದು ರಾತ್ರಿ ಅವಳ ಹೊಟ್ಟೆಯೊಳಗಿನಿಂದ ಒಂದು ಧ್ವನಿ ಕಹೋಡನಿಗೆ ಹೇಳಿತು: "ಅಪ್ಪಾ, ದಯವಿಟ್ಟು ಗಮನವಿರಲಿ - ನೀವು ಈ ಶ್ಲೋಕವನ್ನು ತಪ್ಪಾಗಿ ಉಚ್ಚರಿಸುತ್ತಿದ್ದೀರಾ."   ಇದನ್ನು ಕೇಳಿದ ಕಹೋಡನಿಗೆ ಸಿಟ್ಟು ನೆತ್ತಿಗೇರಿತು. ಹಿಂದೆ ಮುಂದೆ ಯೋಚಿಸದೆ, ಇನ್ನೂ ಹುಟ್ಟಿರದ ತನ್ನ ಸ್ವಂತ ಮಗುವಿಗೇ "ನೀನು ಅಷ್ಟಾವಕ್ರನಾಗಿ ಜನಿಸು" ಎಂದು ಶಾಪ ...