ಅಷ್ಟಾವಕ್ರ ಉವಾಚ .. ಆಚಕ್ಷ್ವ ಶೃಣು ವಾ ತಾತ ನಾನಾಶಾಸ್ತ್ರಾಣ್ಯನೇಕಶಃ . ತಥಾಪಿ ನ ತವ ಸ್ವಾಸ್ಥ್ಯಂ ಸರ್ವವಿಸ್ಮರಣಾದ್ ಋತೇ .. ೧೬-೧.. ಮಗು, ನಾನಾ ಶಾಸ್ತ್ರಗಳನ್ನು, ಕೇಳಿದರೂ, ಹೇಳಿದರೂ ಸಹ, ಎಲ್ಲವನ್ನೂ ಮರೆಯುವ ತನಕ ನಿನಗೆ ಶಾಂತಿ ಸಿಗದು. ಭೋಗಂ ಕರ್ಮ ಸಮಾಧಿಂ ವಾ ಕುರು ವಿಜ್ಞ ತಥಾಪಿ ತೇ . ಚಿತ್ತಂ ನಿರಸ್ತಸರ್ವಾಶಮತ್ಯರ್ಥಂ ರೋಚಯಿಷ್ಯತಿ .. ೧೬-೨.. ಓ ಜ್ಞಾನಿಯೇ, ನೀನು ಭೋಗವನ್ನು ಅಥವಾ ಕರ್ಮವನ್ನು ಅಥವಾ ಧ್ಯಾನವನ್ನೇ ಮಾಡುತ್ತಿರು. ಚಿತ್ತವು ಸಂತೋಷಗೊಳ್ಳುವದು ಸರ್ವ ಆಸೆಯನ್ನು ತ್ಯಜಿಸಿದಾಗ ಮಾತ್ರ. ಆಯಾಸಾತ್ಸಕಲೋ ದುಃಖೀ ನೈನಂ ಜಾನಾತಿ ಕಶ್ಚನ . ಅನೇನೈವೋಪದೇಶೇನ ಧನ್ಯಃ ಪ್ರಾಪ್ನೋತಿ ನಿರ್ವೃತಿಂ .. ೧೬-೩.. ಸತತ ಪ್ರಯತ್ನದಿಂದ ಎಲ್ಲರೂ ದುಃಖದಲ್ಲಿರುತ್ತಾರೆ. ಆದರೆ ಈ ಮಾತನ್ನು ಯಾರೂ ಅರಿತಿರುವದಿಲ್ಲ. ಈ ಉಪದೇಶವನ್ನು ಪಡೆದ ಧನ್ಯನು ಮುಕ್ತನಾಗುತ್ತಾನೆ. ವ್ಯಾಪಾರೇ ಖಿದ್ಯತೇ ಯಸ್ತು ನಿಮೇಷೋನ್ಮೇಷಯೋರಪಿ . ತಸ್ಯಾಲಸ್ಯ ಧುರೀಣಸ್ಯ ಸುಖಂ ನಾನ್ಯಸ್ಯ ಕಸ್ಯಚಿತ್ .. ೧೬-೪.. ಕಣ್ಣನ್ನು ಮುಚ್ಚಿ ತೆಗೆದು ಮಾಡಲೂ ಯಾರಿಗೆ ಆಲಸ್ಯವೋ ಅಂತಹ ಆಲಸಿ ಧುರೀಣನಿಗೆ ಸುಖ ಲಭ್ಯ - ಇನ್ಯಾರಿಗೂ ಅಲ್ಲ. ಇದಂ ಕೃತಮಿದಂ ನೇತಿ ದ್ವಂದ್ವೈರ್ಮುಕ್ತಂ ಯದಾ ಮನಃ . ಧರ್ಮಾರ್ಥಕಾಮಮೋಕ್ಷೇಷು ನಿರಪೇಕ್ಷಂ ತದಾ ಭವೇತ್ .. ೧೬-೫.. ಇದು ಮಾಡಲಾಗಿದೆ - ಇದನ್ನು ಮಾಡಿ ಆಗಿಲ್ಲ ಎಂಬ ದ್ವಂದ್ವದಿಂದ ಯಾವಾಗ ಮನಸ್ಸು ಮುಕ್ತವಾಗುವದೋ, ಆಗ ಅದ...