Skip to main content

Posts

Showing posts from January, 2025

ಅಷ್ಟಾವಕ್ರಗೀತಾ - ೧

.. ಶ್ರೀ .. ಅಥ ಶ್ರೀಮದಷ್ಟಾವಕ್ರಗೀತಾ ಪ್ರಾರಭ್ಯತೇ . ಜನಕ ಉವಾಚ .. ಕಥಂ ಜ್ಞಾನಮವಾಪ್ನೋತಿ ಕಥಂ ಮುಕ್ತಿರ್ಭವಿಷ್ಯತಿ . ವೈರಾಗ್ಯಂ ಚ ಕಥಂ ಪ್ರಾಪ್ತಮೇತದ್ ಬ್ರೂಹಿ ಮಮ ಪ್ರಭೋ .. 1-1.. ಶಬ್ದಾರ್ಥ ಪ್ರಾರಭ್ಯತೇ = ಆರಂಭವಾಗುತ್ತದೆ ಜನಕ ಉವಾಚ = ಜನಕನು ಹೇಳಿದನು ಕಥಂ = ಹೇಗೆ ಜ್ಞಾನಮ್ + ಅವಾಪ್ನೋತಿ = ಜ್ಞಾನವನ್ನು ಪಡೆಯಬೇಕು ಮುಕ್ತಿ = ಮೋಕ್ಷ ಭವಿಷ್ಯತಿ = ಆಗುತ್ತದೆ ವೈರಾಗ್ಯ = ವೈರಾಗ್ಯ ಚ =ಮತ್ತು ಪ್ರಾಪ್ತಂ + ಏತತ್ = ಪಡೆಯತಕ್ಕದ್ದು , ಇದನ್ನು ಬ್ರೂಹಿ =ಹೇಳು ಮಮ =ನನ್ನ. ಪ್ರಭೋ = ಪ್ರಭುವೇ ಅನುವಾದ   ಜನಕ ಹೇಳಿದನು. ಜ್ಞಾನವನ್ನು ಹೇಗೆ ಸಂಪಾದಿಸಬೇಕು? ಮುಕ್ತಿಯನ್ನು ಹೇಗೆ ಪಡೆಯಬೇಕು? ವೈರಾಗ್ಯವನ್ನು ಪಡೆಯುವದು ಹೇಗೆ? ಪ್ರಭೂ, ಇದನ್ನು ನನಗೆ ತಿಳಿಸಿಕೊಡಿ. ಜನಕನು ನಮ್ಮೆಲ್ಲರ ಮನಸ್ಸಿನಲ್ಲಿರುವ ಪ್ರಶ್ನೆಯನ್ನೇ ಕೇಳುತ್ತಿದ್ದಾನೆ - ಜ್ಞಾನ ಪಡೆಯುವದು ಹೇಗೆ - ಅಧ್ಯಾತ್ಮ ಜ್ಞಾನ - ಕಬ್ಬಿಣದ ಕಡಲೆ - ಅದನ್ನು ತಿಳಿಯುವದು ಹೇಗೆ? ನಂತರ ಮೋಕ್ಷ ಪಡೆಯುವದು ಹೇಗೆ? ಈ ಸುಖ-ದುಃಖಗಳಿಂದ, ಹುಟ್ಟು-ಸಾವುಗಳಿಂದ, ಜರಾ-ಮೃತ್ಯುಗಳಿಂದ ಹೇಗೆ ಪಾರಾಗುವದು? ನಾನು-ನನ್ನದು ಎಂಬ ಆಶಾ-ಪಾಶದಿಂದ ಹೊರ ಬರುವದು ಹೇಗೆ? ಅಷ್ಟಾವಕ್ರ ಉವಾಚ .. ಮುಕ್ತಿಮಿಚ್ಛಸಿ ಚೇತ್ತಾತ ವಿಷಯಾನ್ ವಿಷವತ್ತ್ಯಜ . ಕ್ಷಮಾರ್ಜವದಯಾತೋಷಸತ್ಯಂ ಪೀಯೂಷವದ್ ಭಜ .. 1-2.. ಶಬ್ದಾರ್ಥ ಮುಕ್ತಿಂ = ಮು...

ಅಷ್ಟಾವಕ್ರಗೀತಾ - ೨

ಆತ್ಮಸಾಕ್ಷಾತ್ಕಾರದ ಆನಂದ ಅಷ್ಟಾವಕ್ರನಿಂದ ಆತ್ಮಜ್ಞಾನ ಪಡೆದ ಜನಕನು ತನ್ನ ಹರ್ಷವನ್ನು ಈ ಕೆಳಗಿನ ಸಾಲುಗಳಲ್ಲಿ ವ್ಯಕ್ತಪಡಿಸುತ್ತಾನೆ.  ಜನಕ ಉವಾಚ .. ಅಹೋ ನಿರಂಜನಃ ಶಾಂತೋ ಬೋಧೋಽಹಂ ಪ್ರಕೃತೇಃ ಪರಃ . ಏತಾವಂತಮಹಂ ಕಾಲಂ ಮೋಹೇನೈವ ವಿಡಂಬಿತಃ .. 2-1.. ಶಬ್ದಾರ್ಥ:  ಅಹೋ =ಓಹೋ    ನಿರಂಜನ =ನಿರ್ವಿಕಾರಿ    ಶಾಂತಃ =ಶಾಂತನು  ಬೋಧಃ + ಅಹಂ =ಪ್ರಜ್ಞೆ ನಾನು  ಪ್ರಕೃತೇಃ =ಪ್ರಕೃತಿಗಿಂತ  ಪರಃ =ಆಚೆ    ಏತಾವಂತಂ =ಇಷ್ಟು ಬಹಳ ಅಹಂ =ನಾನು ಕಾಲಂ =ಕಾಲ  ಮೋಹೇನ + ಏವ =ಮೋಹದಿಂದಲೇ  ವಿಡಂಬಿತಃ =ಮೋಸ ಹೋಗಿದ್ದೆ  ಅನುವಾದ: ಅಹೋ, ನಾನು ನಿಷ್ಕಳಂಕ, ಶಾಂತ ಮತ್ತು ಈ ಪ್ರಕೃತಿಯನ್ನು ಮೀರಿದ ಜ್ಞಾನವಾಗಿರುವೆ. (ಇದನ್ನು ತಿಳಿಯದೆ) ಇಷ್ಟು ದಿನ ಭ್ರಮೆಯಿಂದ ಮೋಸ ಹೋಗಿದ್ದೆ. ಯಥಾ ಪ್ರಕಾಶಯಾಮ್ಯೇಕೋ ದೇಹಮೇನಂ ತಥಾ ಜಗತ್ . ಅತೋ ಮಮ ಜಗತ್ಸರ್ವಮಥವಾ ನ ಚ ಕಿಂಚನ .. 2-2.. ಶಬ್ದಾರ್ಥ: ಯಥಾ =ಹೇಗೆ ಪ್ರಕಾಶಯಾಮಿ + ಏಕಃ =ಒಬ್ಬನೇ ಪ್ರಕಾಶಿಸುತ್ತೇನೆ  ದೇಹಮ್ + ಏನಂ =ಈ ದೇಹಮ್  ತಥಾ =ಹಾಗೇ ಜಗತ್ =ಜಗತ್ತನ್ನು ಅತಃ =ಹಾಗಾಗಿ ಮಮ =ನನ್ನ ಜಗತ್ + ಸರ್ವಂ =ಇಡೀ ಜಗತ್ತು  ನ =ಅಲ್ಲ  ಚ =ಹಾಗೂ ಕಿಂಚನ =ಯಾವದೂ ಅಲ್ಲ ಅನುವಾದ: ಹೇಗೆ ನಾನು ಈ ಶರೀರವನ್ನು ಪ್ರಕಾಶಿಸುತ್ತೇನೋ - ಹಾಗೆಯೆ ನಾನು ಈ ಜಗತ್ತನ್ನೂ ಪ್ರಕಾಶಿಸುತ್ತೇನೆ. ಹಾಗಾಗಿ ...

ಅಷ್ಟಾವಕ್ರಗೀತಾ - ೩

ಆತ್ಮಜ್ಞಾನದ ಅವಲೋಕನ ಅಷ್ಟಾವಕ್ರ ಉವಾಚ .. ಅವಿನಾಶಿನಮಾತ್ಮಾನಮೇಕಂ ವಿಜ್ಞಾಯ ತತ್ತ್ವತಃ . ತವಾತ್ಮಜ್ಞಾನಸ್ಯ ಧೀರಸ್ಯ ಕಥಮರ್ಥಾರ್ಜನೇ ರತಿಃ .. 3-1..  ಶಬ್ದಾರ್ಥ: ಅವಿನಾಶಿನಂ =ವಿನಾಶವಿಲ್ಲದವನನ್ನು;   ಆತ್ಮಾನಂ =ಆತ್ಮನನ್ನು;   ಏಕಂ =ಏಕೈಕನನ್ನು;  ವಿಜ್ಞಾಯ =ತಿಳಿದು;  ತತ್ತ್ವತಃ =ನಿಜ ಸ್ವರೂಪದಲ್ಲಿ;  ತವ =ನಿನ್ನ;  ಆತ್ಮಜ್ಞಾನಸ್ಯ =ಆತ್ಮಜ್ಞಾನಿಯ;  ಧೀರಸ್ಯ =ಧೀರನ;  ಕಥಂ =ಹೇಗೆ;  ಅರ್ಥಾರ್ಜನೇ =ಹಣದ(ಅರ್ಥ) ಗಳಿಕೆಯಲ್ಲಿ(ಅರ್ಜನೇ);  ರತಿಃ =ಮೋಹ ಅನುವಾದ: ಅವಿನಾಶಿಯಾದ, ಅದ್ವೈತವಾದ ಆತ್ಮವನ್ನು ಅರಿತುಕೊಂಡಮೇಲೆ ಆತ್ಮಜ್ಞಾನಿಯಾದ ಧೀರನು, ಸಂಪತ್ತನ್ನು ಗಳಿಸುವದಲ್ಲಿ ಆಸಕ್ತಿಯನ್ನು ಹೇಗೆ ಇರಿಸಿಕೊಳ್ಳುತ್ತಾನೆ? ವಿವರಣೆ: ಆತ್ಮಜ್ಞಾನವನ್ನು ಹುಡುಕುತ್ತ ಜನಕನು ಅದರ ಜೊತೆಗೇ ರಾಜ್ಯಭಾರವನ್ನೂ ಮಾಡುತ್ತಿದ್ದಾನೆ. ಅದಕ್ಕಾಗಿ ಅಷ್ಟಾವಕ್ರ ಮುನಿಯು ಅವನನ್ನು ಪರೀಕ್ಷಿಸುತ್ತ ಕೇಳುತ್ತಾನೆ - ಆತ್ಮಜ್ಞಾನವನ್ನು ಪಡೆದ ಮೇಲೆಯೂ ಹೇಗೆ ಧನಸಂಪಾದನೆಯಲ್ಲಿ ಆಸಕ್ತಿ ಇರುತ್ತದೆ.  ಆತ್ಮಾಜ್ಞಾನಾದಹೋ ಪ್ರೀತಿರ್ವಿಷಯಭ್ರಮಗೋಚರೇ . ಶುಕ್ತೇರಜ್ಞಾನತೋ ಲೋಭೋ ಯಥಾ ರಜತವಿಭ್ರಮೇ .. 3-2.. ಶಬ್ದಾರ್ಥ: ಆತ್ಮ + ಅಜ್ಞಾನಾತ್ =ಆತ್ಮದ ಅಜ್ಞಾನದಿಂದ; ಅಹೋ =ಅಹೋ; ಪ್ರೀತಿಃ =ಪ್ರೀತಿ; ವಿಷಯಭ್ರಮಗೋಚರೇ =ಭ್ರಮೆಯಾದ ವಿಷಯಗಳಲ್ಲಿ; ಶುಕ್ತೇ + ಅಜ್ಞಾನತಃ =ಚಿಪ್...

ಅಷ್ಟಾವಕ್ರಗೀತಾ - ೪

ಆತ್ಮಸಾಕ್ಷಾತ್ಕಾರದ ವೈಭವ  ಜನಕ ಉವಾಚ .. ಹಂತಾತ್ಮಜ್ಞಾನಸ್ಯ ಧೀರಸ್ಯ ಖೇಲತೋ ಭೋಗಲೀಲಯಾ . ನ ಹಿ ಸಂಸಾರವಾಹೀಕೈರ್ಮೂಢೈಃ ಸಹ ಸಮಾನತಾ .. 4-1.. ಓಹ್, ಆತ್ಮಜ್ಞಾನಿಯಾದ ಧೀರನು ಭೋಗಲೀಲೆಯಲ್ಲಿ ಕ್ರೀಡಿಸುವಂತೆ ಕಂಡರೂ ಸಂಸಾರದ ಭಾರವನ್ನು ಹೊರುವ ಮೂಢರ ಜೊತೆ ಅವನನ್ನು ಹೋಲಿಸಲಾಗುವದಿಲ್ಲ. (ಯಾಕೆಂದರೆ ಅವನು ಭೋಗದಿಂದ ಯಾವ ರೀತಿಯಲ್ಲೂ ಪರಿಣಾಮಿತನಾಗುವದಿಲ್ಲ) ಈ ಅಧ್ಯಾಯದಲ್ಲಿ ಜನಕನು ಅಷ್ಟಾವಕ್ರನ ಮಾತಿಗೆ ಉತ್ತರಿಸುತ್ತಿದ್ದಾನೆ  ಯತ್ ಪದಂ ಪ್ರೇಪ್ಸವೋ ದೀನಾಃ ಶಕ್ರಾದ್ಯಾಃ ಸರ್ವದೇವತಾಃ . ಅಹೋ ತತ್ರ ಸ್ಥಿತೋ ಯೋಗೀ ನ ಹರ್ಷಮುಪಗಚ್ಛತಿ .. 4-2.. ಯಾವ ಸ್ಥಿತಿಯನ್ನು ಹೊಂದಲು ಇಂದ್ರ(ಶಕ್ರ)ನನ್ನು ಒಳಗೊಂಡು ದೇವತೆಗಳೆಲ್ಲ ದೀನರಾಗಿ ಹಾತೊರೆಯುತ್ತಾರೋ, ಆ ಸ್ಥಿತಿಯನ್ನು ಹೊಂದಿಯೂ ಕೂಡ ಯೋಗಿಯು ಹರ್ಷವನ್ನು ಹೊಂದುವದಿಲ್ಲ.  ಆತ್ಮ ಸಾಕ್ಷಾತ್ಕಾರವನ್ನು ಪಡೆಯಲು ದೇವತೆಗಳು ಸಹ ಹಾತೊರೆಯುತ್ತಾರೆ ಹಾಗೂ ಅದು ದೊರೆಯದೇ ಅಸಂತುಷ್ಟರಾಗುತ್ತಾರೆ.  ತಜ್ಜ್ಞಸ್ಯ   ಪುಣ್ಯಪಾಪಾಭ್ಯಾಂ ಸ್ಪರ್ಶೋ ಹ್ಯಂತರ್ನ ಜಾಯತೇ . ನ ಹ್ಯಾಕಾಶಸ್ಯ ಧೂಮೇನ ದೃಶ್ಯಮಾನಾಪಿ ಸಂಗತಿಃ .. 4-3.. ಹೊಗೆಯು ಆಕಾಶವನ್ನು ಸ್ಪರ್ಶ್ರಿಸುತ್ತಿರುವಂತೆ ಕಂಡರೂ ಅದು ಆಕಾಶದಿಂದ ದೂರವೇ ಇರುವಂತೆ,  ಜ್ಞಾನಿಗೆ ಪಾಪ ಪುಣ್ಯಗಳಾವವವೂ ತಟ್ಟುವದಿಲ್ಲ.  ಆತ್ಮೈವೇದಂ ಜಗತ್ಸರ್ವಂ ಜ್ಞಾತಂ ಯೇನ ಮಹಾತ್ಮನಾ . ಯದೃಚ್ಛಯಾ ವರ್ತಮಾನಂ ತಂ ನಿಷೇದ್ಧುಂ ಕ್ಷ...

ಅಷ್ಟಾವಕ್ರ ಗೀತಾ - ೫

ಲಯದ ಉಪದೇಶ ಅಷ್ಟಾವಕ್ರ ಉವಾಚ .. ನ ತೇ ಸಂಗೋಽಸ್ತಿ ಕೇನಾಪಿ ಕಿಂ ಶುದ್ಧಸ್ತ್ಯಕ್ತುಮಿಚ್ಛಸಿ . ಸಂಘಾತವಿಲಯಂ ಕುರ್ವನ್ನೇವಮೇವ ಲಯಂ ವ್ರಜ .. 5-1.. ಅಷ್ಟಾವಕ್ರನು ಜನಕನಿಗೆ ಮೋಕ್ಷದ ಮಾರ್ಗವನ್ನು ತಿಳಿಸಿ ಹೇಳುತ್ತಾ ಹೀಗೆ ಹೇಳುತ್ತಾನೆ- ನೀನು ಶುದ್ಧನು, ನಿನಗೆ ಯಾವುದರ ಸಂಗವೂ ಇಲ್ಲ   ಹೀಗಿರುವಾಗ ಏನನ್ನು ತಾನೇ ತ್ಯಜಿಸಲು ಇಚ್ಛಿಸುವೆ? ನೀನು ಶರೀರ-ಮನ-ಅಹಂಕಾರಗಳ ಮೋಹವನ್ನು ನಾಶವಾಗಿಸಿ ಲಯವನ್ನು, ಮುಕ್ತಿಯನ್ನು ಹೊಂದು ಉದೇತಿ ಭವತೋ ವಿಶ್ವಂ ವಾರಿಧೇರಿವ ಬುದ್ಬುದಃ . ಇತಿ ಜ್ಞಾತ್ವೈಕಮಾತ್ಮಾನಮೇವಮೇವ ಲಯಂ ವ್ರಜ .. 5-2.. ಸಾಗರದಿಂದ ಅಲೆಗಳು ಉದಯಿಸಿದಂತೆ, ಈ ವಿಶ್ವವೆಲ್ಲ ನಿನ್ನಿಂದಲೇ ಉದ್ಭವವಾಗುತ್ತದೆ. ಇದನ್ನು ತಿಳಿದು, ನೀನೇ ಆತ್ಮನೆಂದು ತಿಳಿದು, ಲಯವನ್ನು (ಮೋಕ್ಷವನ್ನು) ಹೊಂದು. ಪ್ರತ್ಯಕ್ಷಮಪ್ಯವಸ್ತುತ್ವಾದ್ ವಿಶ್ವಂ ನಾಸ್ತ್ಯಮಲೇ ತ್ವಯಿ . ರಜ್ಜುಸರ್ಪ ಇವ ವ್ಯಕ್ತಮೇವಮೇವ ಲಯಂ ವ್ರಜ .. 5-3.. ಹಗ್ಗ ಸರ್ಪದಂತೆ ಕಾಣುವಂತೆ, ಪ್ರತ್ಯಕ್ಷವೆನಿಸಿದರೂ ಅವಸ್ತುವಾದದ್ದರಿಂದ (ಮಿಥ್ಯೆಯಾದದ್ದರಿಂದ) ಈ ವಿಶ್ವವು ಅಮಲನಾದ(ಶುದ್ಧನಾದ) ನಿನ್ನೊಳಗೆ ಇಲ್ಲ. ಇದನ್ನು ಅರಿತು ಲಯವನ್ನು ಹೊಂದು. ಸಮದುಃಖಸುಖಃ ಪೂರ್ಣ ಆಶಾನೈರಾಶ್ಯಯೋಃ ಸಮಃ . ಸಮಜೀವಿತಮೃತ್ಯುಃ ಸನ್ನೇವಮೇವ ಲಯಂ ವ್ರಜ .. 5-4.. ನೀನಗೆ ಸುಖ-ದುಃಖಗಳು ಸಮಾನ. ಆಶಾ-ನಿರಾಶೆಗಳು ಸಮಾನ. ಜೀವನ-ಮೃತ್ಯುಗಳು ಸಮಾನ. ಈ ರೀತಿಯವನಾಗಿರುವ ನೀನು ಆತ್ಮದಲ್ಲಿ ಲಯವನ್ನು ಹೊಂದು....

ಅಷ್ಟಾವಕ್ರಗೀತಾ- ೬

ಯತಾರ್ಥ ಜ್ಞಾನೋಪದೇಶ ಜನಕ ಉವಾಚ- ಆಕಾಶವದನಂತೋಽಹಂ ಘಟವತ್ ಪ್ರಾಕೃತಂ ಜಗತ್ . ಇತಿ ಜ್ಞಾನಂ ತಥೈತಸ್ಯ ನ ತ್ಯಾಗೋ ನ ಗ್ರಹೋ ಲಯಃ .. 6-1.. ಜನಕ ಹೇಳಿದನು : ನಾನು ಆಕಾಶದಂತೆ ಅನಂತನು. ಈ ಪ್ರಾಕೃತಿಕ ಜಗತ್ತಾದರೋ ಮಡಿಕೆಯಂತೆ. ಇದನ್ನು ಅರಿಯುವದೇ ಜ್ಞಾನ. (ಹಾಗಾಗಿ) ಈ ಜಗತ್ತನ್ನು ಗೃಹಿಸುವದು, ತ್ಯಜಿಸುವದು ಅಥವಾ ನಾಶ ಮಾಡುವ ಪ್ರಶ್ನೆಯೇ ಇಲ್ಲ. ಹಿಂದಿನ ಅಧ್ಯಾಯದಲ್ಲಿ ಅಷ್ಟಾವಕ್ರನು ಲಯವಾಗುವದರ ಬಗ್ಗೆ ಹೇಳಿದ್ದಕ್ಕೆ ಇದು ಜನಕರಾಜನ ಉತ್ತರ. ಮಹೋದಧಿರಿವಾಹಂ ಸ ಪ್ರಪಂಚೋ ವೀಚಿಸನ್ನಿಭಃ . ಇತಿ ಜ್ಞಾನಂ ತಥೈತಸ್ಯ ನ ತ್ಯಾಗೋ ನ ಗ್ರಹೋ ಲಯಃ .. 6-2.. ಮಹೋದಧಿ=ಮಹಾಸಾಗರ    ವೀಚಿಸನ್ನಿಭಃ=ಅಲೆಯಂತೆ  ನಾನು ಮಹಾಸಾಗರದಂತೆ ಅನಂತನು, ಪ್ರಪಂಚವೋ ಆ ಸಾಗರದ ಅಲೆಯಂತೆ ಕ್ಷಣಿಕ. ಇದೇ ಜ್ಞಾನ. ಹಾಗಾಗಿ ಈ ಆತ್ಮವನ್ನು ಗೃಹಿಸುವದೂ ಅಲ್ಲ, ತ್ಯಜಿಸುವದೂ ಅಲ್ಲ, ಬದಲಾಗಿ ಅದರಲ್ಲೇ ಲಯವಾಗುವದೇ ಸರಿ. ಸಾಗರವು ಚಿರ, ಶಾಶ್ವತ, ಅನಂತ. ಅದರಲ್ಲಿ ಅಲೆಗಳು ಎದ್ದು, ಚಲಿಸಿ, ಮಾಯವಾಗುತ್ತವೆ. ಹಾಗೆಯೇ ಆತ್ಮ ಶಾಶ್ವರ. ಈ ವಿಶ್ವದ ಸಂಗತಿಗಳು ಅದರಲ್ಲಿ ಬಂದು ನಂತರ ನಾಶವಾಗುತ್ತವೆ. ಹೀಗಿರುವಾಗ ಯಾವುದನ್ನು ಯಾಕೆ ತ್ಯಾಗ ಮಾಡಬೇಕು ಅಥವಾ ಗ್ರಹಿಸಬೇಕು ಅಥವಾ ಯಾವುದರಲ್ಲಿ ಲಯವಾಗಬೇಕು? ಅಹಂ ಸ ಶುಕ್ತಿಸಂಕಾಶೋ ರೂಪ್ಯವದ್ ವಿಶ್ವಕಲ್ಪನಾ . ಇತಿ ಜ್ಞಾನಂ ತಥೈತಸ್ಯ ನ ತ್ಯಾಗೋ ನ ಗ್ರಹೋ ಲಯಃ .. 6-3.. ನಾನು ಚಿಪ್ಪು, ಈ ವಿಶ್ವದ ಕಲ್ಪನೆ ಬೆಳ್ಳಿಯಂತೆ. ...

ಅಷ್ಟಾವಕ್ರಗೀತಾ-೭

 ಜನಕನ ಸಾಕ್ಷಾತ್ಕಾರ ಜನಕ ಉವಾಚ -  ಮಯ್ಯನಂತಮಹಾಂಭೋಧೌ ವಿಶ್ವಪೋತ ಇತಸ್ತತಃ . ಭ್ರಮತಿ ಸ್ವಾಂತವಾತೇನ ನ ಮಮಾಸ್ತ್ಯಸಹಿಷ್ಣುತಾ .. 7-1.. ನಾನೆು ಅನಂತ ಮಹಾಸಾಗರದಂತೆ ವಿಶ್ವವೆಂಬದು ಹಡಗಂತೆ. ಅದು ತನ್ನ ಗಾಳಿಯಿಂದ ಅಲ್ಲಿ ಇಲ್ಲಿ ಓಲಾಡುತ್ತದ್ದರೂ ಸಾಗರಕ್ಕೆ ಏನೂ ಆಗುವದಿಲ್ಲ. ಹಾಗೆಯೇ ವಿಶ್ವದ ಸಂಗತಿಗಳಿಂದ ನಾನು ವಿಚಲಿತನಾಗುವದಿಲ್ಲ.      ಮಯ್ಯನಂತಮಹಾಂಭೋಧೌ ಜಗದ್ವೀಚಿಃ ಸ್ವಭಾವತಃ . ಉದೇತು ವಾಸ್ತಮಾಯಾತು ನ ಮೇ ವೃದ್ಧಿರ್ನ ಚ ಕ್ಷತಿಃ .. 7-2.. ನಾನೆಂಬ ಅನಂತ ಮಹಾಸಾಗರದಲ್ಲಿ ಜಗತ್ತೆಂಬ ಅಲೆಗಳು ಉದಯಿಸಿ ಅಸ್ತವಾಗುತ್ತಲಿದ್ದರೂ ನನಗೆ ವೃದ್ಧಿ ಅಥವಾ ಕ್ಷಯವಿಲ್ಲ. ಸಾಗರದಲ್ಲಿ ಅಲೆಗಳು ಏಳುತ್ತವೆ ಹಾಗೂ ಮತ್ತೆ ನೀರಿನಲ್ಲಿ ಸೇರಿ ವಿಲೀನವಾಗುತ್ತವೆ. ಅದರಿಂದ ಸಾಗರದಲ್ಲಿ ಬದಲಾವಣೆಯಾಗುವದಿಲ್ಲ. ಹಾಗೆಯೇ ಜಗತ್ತಿನಲ್ಲಿ ಜೀವಿಗಳು ಅಲೆಯಂತೆ ಉದಯಿಸಿ ಬೆಳೆದು ನಾಶವಾದರೂ ಆತ್ಮಕ್ಕೆ ಯಾವುದೇ ರೀತಿಯ ಪರಿಣಾಮವಾಗುವದಿಲ್ಲ.  ಮಯ್ಯನಂತಮಹಾಂಭೋಧೌ ವಿಶ್ವಂ ನಾಮ ವಿಕಲ್ಪನಾ . ಅತಿಶಾಂತೋ ನಿರಾಕಾರ ಏತದೇವಾಹಮಾಸ್ಥಿತಃ .. 7-3.. ನಾನೆಂಬ ಮಹಾಸಾಗರದಲ್ಲಿ ವಿಶ್ವ ಎಂಬದು ಒಂದು ಕಲ್ಪನೆ. ಅತಿ ಶಾಂತನೂ ನಿರಾಕಾರನೂ ಆದ ನಾನು ಅದರಲ್ಲೇ(ಆ ಜ್ಞಾನದಲ್ಲೇ) ಇರುತ್ತೇನೆ. ನಾತ್ಮಾ ಭಾವೇಷು ನೋ ಭಾವಸ್ತತ್ರಾನಂತೇ ನಿರಂಜನೇ . ಇತ್ಯಸಕ್ತೋಽಸ್ಪೃಹಃ ಶಾಂತ ಏತದೇವಾಹಮಾಸ್ಥಿತಃ .. 7-4.. ನಾನು ಯಾವ ವಸ್ತುಗಳಲ್ಲೂ ಇಲ್ಲ ನ...

ಅಷ್ಟಾವಕ್ರಗೀತಾ-೮

  ಬಂಧನ ಮತ್ತು ಮುಕ್ತಿ ಅಷ್ಟಾವಕ್ರ ಉವಾಚ -  ತದಾ ಬಂಧೋ ಯದಾ ಚಿತ್ತಂ ಕಿಂಚಿದ್ ವಾಂಛತಿ ಶೋಚತಿ . ಕಿಂಚಿನ್ ಮುಂಚತಿ ಗೃಹ್ಣಾತಿ ಕಿಂಚಿದ್ ಹೃಷ್ಯತಿ ಕುಪ್ಯತಿ .. 8-1..   ಯಾವಾಗ ಮನಸ್ಸು ಏನನ್ನಾದರೂ ಆಸೆ ಪಡುವದೋ,  ಏನನ್ನಾದರೂ ಕುರಿತು ಶೋಕ  ಪಡುವದೋ ,  ಏನನ್ನಾದರೂ ಪಡೆಯುವದೋ,  ಏನನ್ನಾದರೂ ತ್ಯಜಿಸಿವದೋ,  ಏನನ್ನಾದರೂ ಕುರಿತು ಸಂತೋಷ ಪಡುವದೋ,  ಏನನ್ನಾದರೂ ಕುರಿತು ದುಃಖಿಸುವದೋ, ಆಗ ಆತ್ಮಕ್ಕೆ ಬಂಧನ ಉಂಟಾಗುತ್ತದೆ .   ತದಾ ಮುಕ್ತಿರ್ಯದಾ ಚಿತ್ತಂ ನ ವಾಂಛತಿ ನ ಶೋಚತಿ . ನ ಮುಂಚತಿ ನ ಗೃಹ್ಣಾತಿ ನ ಹೃಷ್ಯತಿ ನ ಕುಪ್ಯತಿ .. 8-2..   ಯಾವಾಗ ಮನಸ್ಸು ಏನನ್ನೂ  ಆಸೆ ಪಡುವದಿಲ್ಲವೋ,  ಏನನ್ನು  ಕುರಿತೂ ಶೋಕ  ಪಡುವದಿಲ್ಲವೋ ,  ಏನನ್ನೂ  ಪಡೆಯುವದಿಲ್ಲವೋ,  ಏನನ್ನೂ  ತ್ಯಜಿಸಿವದಿಲ್ಲವೋ,  ಏನನ್ನು ಕುರಿತು ಸಂತೋಷಪಡುವದಿಲ್ಲವೋ,  ಏನನ್ನೂ  ಕುರಿತು ದುಃಖಿಸುವದಿಲ್ಲವೋ, ಆಗ ಆತ್ಮಕ್ಕೆ ಮುಕ್ತಿ   ದೊರೆಯುತ್ತದೆ.   ತದಾ ಬಂಧೋ ಯದಾ ಚಿತ್ತಂ ಸಕ್ತಂ ಕಾಸ್ವಪಿ ದೃಷ್ಟಿಷು . ತದಾ ಮೋಕ್ಷೋ ಯದಾ ಚಿತ್ತಮಸಕ್ತಂ ಸರ್ವದೃಷ್ಟಿಷು .. 8-3..   ಯಾವಾಗ ಮನಸ್ಸು ಯಾವುದಾದರೂ ದೃಷ್ಟಿಯಲ್ಲಿ ಅಥವಾ ಜಡ ವಸ್ತುವಿನಲ್ಲಿ  ಆಸಕ್ತನಾಗುವದೋ, ಆಗ ಆತ್ಮ ಬಂಧನಕ್ಕೊಳಗಾಗ...

ಅಷ್ಟಾವಕ್ರಗೀತಾ - ೯

  ವೈರಾಗ್ಯ ಅಷ್ಟಾವಕ್ರ ಉವಾಚ- ಕೃತಾಕೃತೇ ಚ ದ್ವಂದ್ವಾನಿ ಕದಾ ಶಾಂತಾನಿ ಕಸ್ಯ ವಾ . ಏವಂ ಜ್ಞಾತ್ವೇಹ ನಿರ್ವೇದಾದ್ ಭವ ತ್ಯಾಗಪರೋಽವ್ರತೀ .. 9-1..   ಈ ಕೆಲಸ ಮಾಡಬೇಕಾದದ್ದು, ಈ ಕೆಲಸ ಮಾಡಬಾರದ್ದು ಎಂಬ ದ್ವಂದ್ವ ಎಂದಿಗೂ ಕೊನೆಯಾಗದು, ಯಾರಿಗೂ ಕೊನೆಯಾಗದು. ಇದನ್ನು ಅರಿತು ನೀನು ತ್ಯಾಗಪರನಾಗಿ, ವಿರಕ್ತನಾಗಿ, ನಿರಾಸಕ್ತನಾಗು. ಕಸ್ಯಾಪಿ ತಾತ ಧನ್ಯಸ್ಯ ಲೋಕಚೇಷ್ಟಾವಲೋಕನಾತ್ . ಜೀವಿತೇಚ್ಛಾ ಬುಭುಕ್ಷಾ ಚ ಬುಭುತ್ಸೋಪಶಮಂ ಗತಾಃ .. 9-2..   ಯಾರಲ್ಲಿ ಈ ಲೋಕದ ಚೇಷ್ಟೆಗಳನ್ನು ನೋಡಿ (ಅವುಗಳ ನಿರರ್ಥಕತೆಯನ್ನು ಅರಿತು), ಜೀವಿಸುವ ಇಚ್ಛೆ, ಜೀವನವನ್ನು ಭೋಗಿಸುವ ಇಚ್ಛೆ ಮತ್ತು ಜ್ಞಾನದ ಇಚ್ಛೆ ಇವೆಲ್ಲವೂ ನಶಿಸುವದೋ, ಅಂತವನೇ ಧನ್ಯನು. ಅನಿತ್ಯಂ ಸರ್ವಮೇವೇದಂ ತಾಪತ್ರಿತಯದೂಷಿತಂ . ಅಸಾರಂ ನಿಂದಿತಂ ಹೇಯಮಿತಿ ನಿಶ್ಚಿತ್ಯ ಶಾಮ್ಯತಿ .. 9-3..   ಈ ಜಗದಲ್ಲಿ ಕಾಣುವದೆಲ್ಲ ಅಶಾಶ್ವತ ಮತ್ತು ಮೂರು ಬಗೆಯ ನೋವಿನಿಂದ ತುಂಬಿರುವದು, ನಿಂದನೀಯ, ಸಾರವಿಲ್ಲದ್ದು, ಹೇಯವಾದದ್ದು ಎನ್ನುವ ಸತ್ಯ ತಿಳಿದಾಗ ನೀನು ಶಾಂತನಾಗುವೆ. ಕೋಽಸೌ ಕಾಲೋ ವಯಃ ಕಿಂ ವಾ ಯತ್ರ ದ್ವಂದ್ವಾನಿ ನೋ ನೃಣಾಂ . ತಾನ್ಯುಪೇಕ್ಷ್ಯ ಯಥಾಪ್ರಾಪ್ತವರ್ತೀ ಸಿದ್ಧಿಮವಾಪ್ನುಯಾತ್ .. 9-4..    ಮನುಜನಿಗೆ ಯಾವ ವಯಸ್ಸಿನಲ್ಲಿ ಅಥವಾ ಯಾವ ಕಾಲದಲ್ಲಿ ಸುಖ-ದುಃಖಗಳ, ಒಳಿತು-ಕೆಡುಕುಗಳ ದ್ವಂದ್ವ ಇರವದಿಲ್ಲ? ಅವುಗಳನ್...

ಅಷ್ಟಾವಕ್ರ ಗೀತಾ - ೧೦

 ಪ್ರಶಾಂತತೆ ಅಷ್ಟಾವಕ್ರ  ಉವಾಚ- ವಿಹಾಯ ವೈರಿಣಂ ಕಾಮಮರ್ಥಂ ಚಾನರ್ಥಸಂಕುಲಂ . ಧರ್ಮಮಪ್ಯೇತಯೋರ್ಹೇತುಂ ಸರ್ವತ್ರಾನಾದರಂ ಕುರು .. 10-1..  ವೈರಿಗಳಾದ ಕಾಮ, ಅನರ್ಥಗಳ ಸಂಕುಲವಾದ ಅರ್ಥ(ಧನ-ಕನಕ) ಮತ್ತು ಇವೆರಡಕ್ಕೂ ಹೇತುವಾದ ಧರ್ಮ (ಸತ್ಕರ್ಮ) ಈ ಮೂರನ್ನೂ ತ್ಯಜಿಸಿ, ಎಲ್ಲದರಲ್ಲೂ ಉದಾಸೀನತೆ ತೋರಿಸು.  (ನಾವು ಕರ್ಮ ಮಾಡುವದು ಸಂಪತ್ತು ಪಡೆಯಲು ಮತ್ತು ಸುಖ ಪಡೆಯಲು. ಆ ಕರ್ಮವೇ ಕಾಮ, ಅರ್ಥಗಳ ಗಳಿಕೆಗೆ  ಕಾರಣ. ಹಾಗಾಗಿ ಆ ಕರ್ಮವನ್ನೂ  ತ್ಯಜಿಸಬೇಕು. ಮೋಕ್ಷ ಪ್ರಾಪ್ತಿಗಾಗಿ ಧರ್ಮಾರ್ಥಕಾಮಗಳೆಲ್ಲವನ್ನೂ ತ್ಯಜಿಸಿ ಅವುಗಳ ಬಗ್ಗೆ ನಿರಾಸಕ್ತಿ ಹೊಂದಬೇಕು.)    ಸ್ವಪ್ನೇಂದ್ರಜಾಲವತ್ ಪಶ್ಯ ದಿನಾನಿ ತ್ರೀಣಿ ಪಂಚ ವಾ . ಮಿತ್ರಕ್ಷೇತ್ರಧನಾಗಾರದಾರದಾಯಾದಿಸಂಪದಃ .. 10-2..  ಮೂರು-ನಾಲ್ಕು ದಿನ ಬಾಳುವ ಮಿತ್ರ, ಭೂಮಿ, ಧನ, ಮನೆ, ಮಡದಿ ಈ ಐದೂ ಮೋಹಗಳನ್ನೂ ಸ್ವಪ್ನದಂತೆ, ಮಾಯಾಜಾಲದಂತೆ ನೋಡು (ಅವುಗಳನ್ನು ತ್ಯಜಿಸು).  ಯತ್ರ ಯತ್ರ ಭವೇತ್ತೃಷ್ಣಾ ಸಂಸಾರಂ ವಿದ್ಧಿ ತತ್ರ ವೈ . ಪ್ರೌಢವೈರಾಗ್ಯಮಾಶ್ರಿತ್ಯ ವೀತತೃಷ್ಣಃ ಸುಖೀ ಭವ .. 10-3..  ಎಲ್ಲೆಲ್ಲಿ ಕಾಮನೆಗಳು ಉಂಟಾಗುವದೋ, ಅಲ್ಲೆಲ್ಲ ಜಗದ ಮಾಯೆಯಿದೆ ಎಂದು ತಿಳಿ. ದೃಢ ವೈರಾಗ್ಯವನ್ನು ಅವಲಂಬಿಸಿ ಆಸೆಯಿಲ್ಲದವನಾಗಿ ಸುಖಿಯಾಗು.  ತೃಷ್ಣಾಮಾತ್ರಾತ್ಮಕೋ ಬಂಧಸ್ತನ್ನಾಶೋ ಮೋಕ್ಷ ಉಚ್ಯತೇ . ಭವಾಸಂಸಕ್ತಿಮಾತ್ರೇಣ ಪ್ರ...

ಅಷ್ಟಾವಕ್ರಗೀತಾ - ೧೧

ಜ್ಞಾನ  ಈ ಅಧ್ಯಾಯದಲ್ಲಿ ಅಷ್ಟಾವಕ್ರನು ಹೇಗೆ ಆತ್ಮಜ್ಞಾನ ಪಡೆದ ನಂತರ ಮನುಷ್ಯನು ಹೇಗೆ ಶಾಂತನು ಹಾಗೂ ಸುಖಿಯಾಗುತ್ತಾನೆ ಎಂದು ವಿವರಿಸುತ್ತಾನೆ. ಎಲ್ಲವನ್ನೂ ನಿರ್ಮಿಸಿದ ಆ ದೇವರು ಎಲ್ಲದರಲ್ಲೂ ಅಡಕವಾಗಿದ್ದಾನೆ. ಈ ಸತ್ಯವನ್ನು ಅರಿತಮೇಲೆ ಮನುಷ್ಯ ಎಲ್ಲಾ ಆಸೆಗಳನ್ನೂ ತೋರೆದು ಶಾಂತನಾಗುತ್ತಾನೆ. ವಸ್ತುಗಳ ಕ್ಷಣಿಕತೆಯನ್ನು ಅರಿತು ಅವುಗಳ ಮೇಲಿನ ಮೋಹವನ್ನು ತ್ಯಜಿಸುತ್ತಾನೆ. ಈ ಬಣ್ಣಬಣ್ಣದ ಪ್ರಪಂಚ ನಿಜವಾಗಿ ನೋಡಿದರೆ ಬರೀ ಶೂನ್ಯ ಎಂಬ ಸತ್ಯ ಅರಿತು ಸುಖಿಯಾಗುತ್ತಾನೆ. ಅಷ್ಟಾವಕ್ರ ಉವಾಚ ..   ಭಾವಾಭಾವವಿಕಾರಶ್ಚ ಸ್ವಭಾವಾದಿತಿ ನಿಶ್ಚಯೀ . ನಿರ್ವಿಕಾರೋ ಗತಕ್ಲೇಶಃ ಸುಖೇನೈವೋಪಶಾಮ್ಯತಿ .. 11-1..   ಇರುವುದು, ಇಲ್ಲದಿರುವದು ಇತ್ಯಾದಿ ಬದಲಾವಣೆಗಳು ವಸ್ತುಗಳ ಸ್ವಭಾವ ಎಂದು ತಿಳಿದವನು, ನಿರ್ವಿಕಾರನಾಗಿ, ದುಃಖರಹಿತನಾಗಿ ಸುಖ-ಸಮಾಧಾನವನ್ನು ಹೊಂದುತ್ತಾನೆ. ಜಗತ್ತಿನ ಸರ್ವ ವಸ್ತುಗಳೂ ಅಶಾಶ್ವತ, ಕ್ಷಣಿಕ ಎಂದು ಮನನ ಮಾಡಿಕೊಂಡುವನು ಐಹಿಕ ವಸ್ತುಗಳ ಬಗ್ಗೆ ಆಸೆ ಪಡುವದಿಲ್ಲ - ಅವು ಸಿಗದಾಗ ದುಃಖ ಪಡುವದೂ ಇಲ್ಲ. ಸುಖ-ಶಾಂತಿ ಹೊಂದುತ್ತಾನೆ.   ಈಶ್ವರಃ ಸರ್ವನಿರ್ಮಾತಾ ನೇಹಾನ್ಯ ಇತಿ ನಿಶ್ಚಯೀ . ಅಂತರ್ಗಲಿತಸರ್ವಾಶಃ ಶಾಂತಃ ಕ್ವಾಪಿ ನ ಸಜ್ಜತೇ .. 11-2..   ಈಶ್ವರನು ಸಕಲವನ್ನೂ ನಿರ್ಮಿಸಿದವನು. ಅವನ ಹೊರತು ಇಲ್ಲಿ ಏನೂ ಇಲ್ಲ ಎಂದು ನಿಶ್ಚಯವಾಗಿ ತಿಳಿದವನು, ಎಲ್ಲ ಆಸೆಗಳನ್ನು ತ್ಯಜಿಸಿ, ಯಾವುದಕ್ಕೂ ಅಂಟ...

ಅಷ್ಟಾವಕ್ರಗೀತಾ-೧೨

 ಜನಕನ ಸ್ಥಿತಿ  ಜನಕ ಉವಾಚ ..  ಕಾಯಕೃತ್ಯಾಸಹಃ ಪೂರ್ವಂ ತತೋ ವಾಗ್ವಿಸ್ತರಾಸಹಃ . ಅಥ ಚಿಂತಾಸಹಸ್ತಸ್ಮಾದ್ ಏವಮೇವಾಹಮಾಸ್ಥಿತಃ .. 12-1.. ಜನಕನು ಆತ್ಮಜ್ಞಾನದ ನಂತರದ ತನ್ನ ಅನುಭೂತಿಗಳನ್ನು ವರ್ಣಿಸುತ್ತ ಹೀಗೆ ಹೇಳುತ್ತಾನೆ- ಮೊದಲು ನಾನು ಕಾರ್ಯಕೃತ್ಯಗಳ ಬಗ್ಗೆ ನಿರಾಸಕ್ತನಾದೆ. ನಂತರ ಅತಿ ಮಾತುಕತೆಯ ಬಗ್ಗೆ ನಿರಾಸಕ್ತನಾದೆ. ನಂತರ ಯೋಚನೆ ಬಗ್ಗೆ ನಿರಾಸಕ್ತನಾದೆ. ಈಗ ನಾನು ಈ ಸ್ಥಿತಿಯಲ್ಲಿ ಇದ್ದೇನೆ. (ಮಾತು, ಕೃತಿ, ಚಿಂತೆ ಇವಲ್ಲವುಗಳಿಂದ ನಿರ್ಲಿಪ್ತನಾಗಿದ್ದೇನೆ) ಪ್ರೀತ್ಯಭಾವೇನ ಶಬ್ದಾದೇರದೃಶ್ಯತ್ವೇನ ಚಾತ್ಮನಃ . ವಿಕ್ಷೇಪೈಕಾಗ್ರಹೃದಯ ಏವಮೇವಾಹಮಾಸ್ಥಿತಃ .. 12-2.. ಶಬ್ದ ಇತ್ಯಾದಿ ಬಾಹ್ಯ ವಿಷಯಗಳಿಗೇ ಪ್ರೀತಿಯ ಅಭಾವದಿಂದ, ಆತ್ಮವು ಅನುಭವಕ್ಕೆ ಸಿಗದು ಎಂಬ ಸತ್ಯವನ್ನು ಅರಿತು, ಮನಸ್ಸನ್ನು ಏಕಾಗ್ರವಾಗಿಸಿ ನಾನು ಈ ಸ್ಥಿತಿಯಲ್ಲಿ ಇದ್ದೇನೆ.  ಸಮಾಧ್ಯಾಸಾದಿವಿಕ್ಷಿಪ್ತೌ ವ್ಯವಹಾರಃ ಸಮಾಧಯೇ . ಏವಂ ವಿಲೋಕ್ಯ ನಿಯಮಮೇವಮೇವಾಹಮಾಸ್ಥಿತಃ .. 12-3.. . ಸಮಾಧಿ ಸ್ಥಿತಿ ಪಡೆಯಲು ಪ್ರಯತ್ನ ಪಡಬೇಕು ಯಾಕೆಂದರೆ ಬೇರೆ, ಬೇರೆ ಕವಚಗಳು ಮನಸ್ಸನ್ನು ಗೊಂದಲಗೊಳಿಸುತ್ತವೆ . (ನಾನು ಈ ಶರೀರ, ನಾನು ಈ ಮನಸ್ಸು ಇತ್ಯಾದಿ ಮಿಥ್ಯಾಕವಚಗಳು ಸಮಾಧಿ ಪಡೆಯಲು ಅಡ್ಡಿ ಉಂಟುಮಾಡುತ್ತವೆ). ಈ ನಿಯಮವನ್ನು ನೋಡಿ, ಅರಿತು, ನಾನು ಈ ಸ್ಥಿತಿಯಲ್ಲಿ ಇದ್ದೇನೆ.  ಹೇಯೋಪಾದೇಯವಿರಹಾದ್ ಏವಂ ಹರ್ಷವಿಷಾದಯೋಃ . ಅಭಾವಾ...

ಅಷ್ಟಾವಕ್ರಗೀತೆ - ೧೩

ಸಂತೋಷ ಜನಕ ಉವಾಚ-  ಅಕಿಂಚನಭವಂ ಸ್ವಾಸ್ಥ್ಯಂ ಕೌಪೀನತ್ವೇಽಪಿ ದುರ್ಲಭಂ . ತ್ಯಾಗಾದಾನೇ ವಿಹಾಯಾಸ್ಮಾದಹಮಾಸೇ ಯಥಾಸುಖಂ .. ೧೩-೧..  ರಾಜಾ ಜನಕನು ತನ್ನ ಸ್ಥಿತಿಯನ್ನು ವಿವರಿಸುತ್ತ ಹೀಗೆ ಮುಂದುವರಿಸುತ್ತಾನೆ. (ಆತ್ಮದ ಹೊರತು)ಇನ್ನೇನೂ ಇಲ್ಲ ಎಂಬ ಭಾವನೆ, ಆ ವೈರಾಗ್ಯ, ಕೌಪೀನಧಾರಿಯಾದರೂ (ಎಲ್ಲ ತ್ಯಜಿಸಿ ಕೌಪೀನ ಮಾತ್ರ ಧರಿಸಿದರೂ) ದೊರಕುವದು ದುರ್ಲಭ. ಆದ್ದರಿಂದ ನಾನು ತ್ಯಾಗವನ್ನೂ, ಸ್ವೀಕರಿಸುವದನ್ನೂ ಎರಡನ್ನು ಬಿಟ್ಟು ಸುಖದಿಂದಿದ್ದೇನೆ. ಕುತ್ರಾಪಿ ಖೇದಃ ಕಾಯಸ್ಯ ಜಿಹ್ವಾ ಕುತ್ರಾಪಿ ಖಿದ್ಯತೇ . ಮನಃ ಕುತ್ರಾಪಿ ತತ್ತ್ಯಕ್ತ್ವಾ ಪುರುಷಾರ್ಥೇ ಸ್ಥಿತಃ ಸುಖಂ .. ೧೩-೨..  ಎಲ್ಲೋ ಒಂದೆಡೆ ಶರೀರದ ಬಾಧೆ (ಸಾಧನೆ ಮಾಡುವಾಗ), ಇನ್ನೆಲ್ಲೋ ಒಂದು ಕಡೆ ನಾಲಿಗೆಯ ಬಾಧೆ (ಶಾಸ್ತ್ರಗಳ ವಾಚನ ಮಾಡುವಾಗ), ಮತ್ತೆಲ್ಲೋ ಒಂದೆಡೆ ಮನಸ್ಸಿನ ಬಾಧೆ (ಧ್ಯಾನ ಮಾಡುವಾಗ), ಈ ಎಲ್ಲ ಬಾಧೆಗಳನ್ನೂ ತ್ಯಜಿಸಿ ನಾನು ಪುರುಷಾರ್ಥದಲ್ಲಿ ಸುಖವಾಗಿದ್ದೇನೆ. ಮನಸ್ಸು, ಶರೀರಗಳನ್ನು ತಪಸ್ಸಿನಲ್ಲಿ ತೊಡಗಿಸಿದಾಗ ನೋವು, ಬಾಧೆಗಳು ಸಹಜ. ಆದರೆ ಅವೆಲ್ಲವೂ ನನಗಲ್ಲ ಎಂಬ ನಿರಾಳತೆಯಿಂದ ಸುಖದಲ್ಲಿ ಇರುತ್ತೇನೆ. ಕೃತಂ ಕಿಮಪಿ ನೈವ ಸ್ಯಾದ್ ಇತಿ ಸಂಚಿಂತ್ಯ ತತ್ತ್ವತಃ . ಯದಾ ಯತ್ಕರ್ತುಮಾಯಾತಿ ತತ್ ಕೃತ್ವಾಸೇ ಯಥಾಸುಖಂ .. ೧೩-೩..  ತತ್ವಶ: ನೋಡಿದರೆ, ಯಾವ ಕರ್ಮವೂ ಆತ್ಮನಿಂದ ಕೃತವಲ್ಲ (ಎಲ್ಲ ಶರೀರ, ಮನ, ಬುದ್ಧಿಗಳು ಮಾಡಿದ್ದು - ಆತ್ಮವಲ್ಲ...

ಅಷ್ಟಾವಕ್ರಗೀತೆ - ೧೪

 ಶಾಂತಿ ಜನಕ ಉವಾಚ-  ಪ್ರಕೃತ್ಯಾ ಶೂನ್ಯಚಿತ್ತೋ ಯಃ ಪ್ರಮಾದಾದ್ ಭಾವಭಾವನಃ . ನಿದ್ರಿತೋ ಬೋಧಿತ ಇವ ಕ್ಷೀಣಸಂಸ್ಮರಣೋ ಹಿ ಸಃ .. ೧೪-೧.. ಯಾರು ವಿಷಯಗಳಲ್ಲಿ ಸ್ವಭಾವತಃ ಶೂನ್ಯಚಿತ್ತನಾಗಿ, ರಾಗ-ದ್ವೇಷಗಳಿಂದ ಮುಕ್ತನಾಗಿರುತ್ತಾನೋ, ಅವನು ಪ್ರಮಾದವಶಾತ್ ವಿಷಯ ರಾಗ ದ್ವೇಷಗಳ ಬಗ್ಗೆ ಯೋಚಿಸಿದರೂ,   ನಿದ್ರಿತನಾದವನಾದರೂ ಜಾಗೃತನಂತೆ ಅವನು ಆ ರಾಗ-ದ್ವೇಷಗಳಿಂದ ಪರಿಣಾಮಿತನಾಗುವದಿಲ್ಲ. ಕ್ವ ಧನಾನಿ ಕ್ವ ಮಿತ್ರಾಣಿ ಕ್ವ ಮೇ ವಿಷಯದಸ್ಯವಃ . ಕ್ವ ಶಾಸ್ತ್ರಂ ಕ್ವ ಚ ವಿಜ್ಞಾನಂ ಯದಾ ಮೇ ಗಲಿತಾ ಸ್ಪೃಹಾ .. ೧೪-೨.. ನನ್ನಲ್ಲಿ ಆಸೆಗಳು ನಾಶವಾಗಿ ಹೋದ ಮೇಲೆ, ಧನವೆಲ್ಲಿ, ಮಿತ್ರರೆಲ್ಲಿ, ಲೌಕಿಕ ಆಸೆಗಳ ರೂಪದ ಕಳ್ಳರೆಲ್ಲಿ, ಶಾಸ್ತ್ರವೆಲ್ಲಿ, ಜ್ಞಾನ-ವಿಜ್ಞಾನವೆಲ್ಲಿ? (ಆತ್ಮಸಾಕ್ಷಾತ್ಕಾರವಾದ ಮೇಲೆ ನನಗೆ ಇವು ಯಾವುದರಲ್ಲೂ ಆಸಕ್ತಿಯೇ ಉಳಿದಿಲ್ಲ.)  ವಿಜ್ಞಾತೇ ಸಾಕ್ಷಿಪುರುಷೇ ಪರಮಾತ್ಮನಿ ಚೇಶ್ವರೇ . ನೈರಾಶ್ಯೇ ಬಂಧಮೋಕ್ಷೇ ಚ ನ ಚಿಂತಾ ಮುಕ್ತಯೇ ಮಮ .. ೧೪-೩.. ಸಾಕ್ಷಿಪುರುಷನಾದ, ಪರಮಾತ್ಮನಾದ ಈಶ್ವರನನ್ನು ಅರಿತ ಮೇಲೆ, ನನಗೆ ಮೋಕ್ಷದಲ್ಲಿ ಆಸಕ್ತಿಯಿಲ್ಲ. ಮುಕ್ತಿ ದೊರಕಬೇಕೆಂಬ ಚಿಂತೆ ಕೂಡ ಇಲ್ಲ. ಎಲ್ಲಾ ಆಸೆಗಳಂತೆ ಮುಕ್ತಿ ದೊರಕಬೇಕೆಂಬುದೂ ಆಸೆಯೇ. ಆದರೆ ಪರಮಾತ್ಮನನ್ನು ಅರಿತಮೇಲೆ ನನಗೆ ಮುಕ್ತಿಯ ಬಯಕೆಯೂ ಇಲ್ಲ.  ಅಂತರ್ವಿಕಲ್ಪಶೂನ್ಯಸ್ಯ ಬಹಿಃ ಸ್ವಚ್ಛಂದಚಾರಿಣಃ . ಭ್ರಾಂತಸ್ಯೇವ ದಶಾಸ್ತಾಸ್ತಾಸ್ತಾದೃಶಾ ಏವ ...

ಅಷ್ಟಾವಕ್ರಗೀತೆ -೧೫

ಆತ್ಮ ಜ್ಞಾನ   ಅಷ್ಟಾವಕ್ರ ಉವಾಚ .. ಯಥಾತಥೋಪದೇಶೇನ ಕೃತಾರ್ಥಃ ಸತ್ತ್ವಬುದ್ಧಿಮಾನ್ . ಆಜೀವಮಪಿ ಜಿಜ್ಞಾಸುಃ ಪರಸ್ತತ್ರ ವಿಮುಹ್ಯತಿ .. ೧೫-೧.. ಶುದ್ಧ ಬುದ್ಧಿವಂತನು ಹೇಗೋ ಹೇಗೋ ಮಾಡಿದ ಅಲ್ಪ ಸ್ವಲ್ಪ ಉಪದೇಶದಿಂದಲಾದರೂ, ಆತ್ಮಸಾಕ್ಷಾತ್ಕಾರ ಪಡೆಯುತ್ತಾನೆ. ಆದರೆ (ರಜೋ-ತಮೋ ಗುಣಗಳಿಂದ ಪೀಡಿತನಾದ) ಇತರನು ಆಜೀವಪರ್ಯಂತ ಕಷ್ಟಪಟ್ಟರೂ ಅವನಿಗೆ ಆತ್ಮದ ತತ್ವ ತಿಳಿಯದೇ, ಬರಿದೇ ದಿಗ್ಭ್ರಮೆಗೊಳ್ಳುತ್ತಾನೆ. ಮೋಕ್ಷೋ ವಿಷಯವೈರಸ್ಯಂ ಬಂಧೋ ವೈಷಯಿಕೋ ರಸಃ . ಏತಾವದೇವ ವಿಜ್ಞಾನಂ ಯಥೇಚ್ಛಸಿ ತಥಾ ಕುರು .. ೧೫-೨.. ವಿಷಯಾಸಕ್ತಿ ಮೋಕ್ಷದ ಪರಮ ವೈರಿ. ಭೋಗಾಸಕ್ತಿಯೇ ಬಂಧನಕ್ಕೆ ಕಾರಣ. ಇದನ್ನು ತಿಳಿದು, ನಿನ್ನ ಇಚ್ಛೆಯಂತೆ ಮಾಡು. ವಾಗ್ಮಿಪ್ರಾಜ್ಞಾಮಹೋದ್ಯೋಗಂ ಜನಂ ಮೂಕಜಡಾಲಸಂ . ಕರೋತಿ ತತ್ತ್ವಬೋಧೋಽಯಮತಸ್ತ್ಯಕ್ತೋ ಬುಭುಕ್ಷಭಿಃ .. ೧೫-೩.. ಈ ತತ್ವಬೋಧವು ವಾಗ್ಮಿ, ಪ್ರಾಜ್ಞ, ಉದ್ಯಮಶೀಲ ಜನರನ್ನು ಮೌನಿಗಳಾಗಿ, ಜಡರನ್ನಾಗಿ, ನಿಷ್ಕ್ರಿಯರನ್ನಾಗಿ ಮಾಡುತ್ತದೆ. (ಆತ್ಮ ಸಾಕ್ಷಾತ್ಕಾರವಾದ ಮೇಲೆ ಇನ್ನೇನೂ ಸಾಧಿಸಲು,  ಮಾತನಾಡಲು, ಕ್ರಿಯೆ ಮಾಡಲು ಉಳಿಯುವದಿಲ್ಲ. ಅದಕ್ಕಾಗಿ ಅಂತಹ ಜ್ಞಾನಿಯು ಬಾಹ್ಯದಲ್ಲಿ ಮೂಕನಾಗಿ, ನಿಷ್ಕ್ರಿಯನಾಗಿ, ಜಡನಾಗುತ್ತಾನೆ). ಅದಕ್ಕಾಗಿಯೇ ಬುಭುಕ್ಷಗಳು (ಭೋಗಾಸಕ್ತರು) ಈ ಜ್ಞಾನವನ್ನು ದೂರವಿಡುತ್ತಾರೆ.  ನ ತ್ವಂ ದೇಹೋ ನ ತೇ ದೇಹೋ ಭೋಕ್ತಾ ಕರ್ತಾ ನ ವಾ ಭವಾನ್ . ಚಿದ್ರೂಪೋಽಸಿ ಸದಾ ಸಾಕ್ಷೀ...

ಅಷ್ಟಾವಕ್ರಗೀತಾ - ೧೬

 ಅಷ್ಟಾವಕ್ರ ಉವಾಚ .. ಆಚಕ್ಷ್ವ ಶೃಣು ವಾ ತಾತ ನಾನಾಶಾಸ್ತ್ರಾಣ್ಯನೇಕಶಃ . ತಥಾಪಿ ನ ತವ ಸ್ವಾಸ್ಥ್ಯಂ ಸರ್ವವಿಸ್ಮರಣಾದ್ ಋತೇ .. ೧೬-೧.. ಮಗು, ನಾನಾ ಶಾಸ್ತ್ರಗಳನ್ನು, ಕೇಳಿದರೂ, ಹೇಳಿದರೂ ಸಹ,  ಎಲ್ಲವನ್ನೂ ಮರೆಯುವ ತನಕ ನಿನಗೆ ಶಾಂತಿ ಸಿಗದು. ಭೋಗಂ ಕರ್ಮ ಸಮಾಧಿಂ ವಾ ಕುರು ವಿಜ್ಞ ತಥಾಪಿ ತೇ . ಚಿತ್ತಂ ನಿರಸ್ತಸರ್ವಾಶಮತ್ಯರ್ಥಂ ರೋಚಯಿಷ್ಯತಿ .. ೧೬-೨.. ಓ ಜ್ಞಾನಿಯೇ, ನೀನು ಭೋಗವನ್ನು ಅಥವಾ ಕರ್ಮವನ್ನು ಅಥವಾ ಧ್ಯಾನವನ್ನೇ ಮಾಡುತ್ತಿರು. ಚಿತ್ತವು ಸಂತೋಷಗೊಳ್ಳುವದು ಸರ್ವ ಆಸೆಯನ್ನು ತ್ಯಜಿಸಿದಾಗ ಮಾತ್ರ. ಆಯಾಸಾತ್ಸಕಲೋ ದುಃಖೀ ನೈನಂ ಜಾನಾತಿ ಕಶ್ಚನ . ಅನೇನೈವೋಪದೇಶೇನ ಧನ್ಯಃ ಪ್ರಾಪ್ನೋತಿ ನಿರ್ವೃತಿಂ .. ೧೬-೩.. ಸತತ ಪ್ರಯತ್ನದಿಂದ ಎಲ್ಲರೂ ದುಃಖದಲ್ಲಿರುತ್ತಾರೆ. ಆದರೆ ಈ ಮಾತನ್ನು ಯಾರೂ ಅರಿತಿರುವದಿಲ್ಲ. ಈ ಉಪದೇಶವನ್ನು ಪಡೆದ ಧನ್ಯನು ಮುಕ್ತನಾಗುತ್ತಾನೆ. ವ್ಯಾಪಾರೇ ಖಿದ್ಯತೇ ಯಸ್ತು ನಿಮೇಷೋನ್ಮೇಷಯೋರಪಿ . ತಸ್ಯಾಲಸ್ಯ ಧುರೀಣಸ್ಯ ಸುಖಂ ನಾನ್ಯಸ್ಯ ಕಸ್ಯಚಿತ್ .. ೧೬-೪.. ಕಣ್ಣನ್ನು ಮುಚ್ಚಿ ತೆಗೆದು ಮಾಡಲೂ ಯಾರಿಗೆ ಆಲಸ್ಯವೋ ಅಂತಹ ಆಲಸಿ ಧುರೀಣನಿಗೆ ಸುಖ ಲಭ್ಯ - ಇನ್ಯಾರಿಗೂ ಅಲ್ಲ. ಇದಂ ಕೃತಮಿದಂ ನೇತಿ ದ್ವಂದ್ವೈರ್ಮುಕ್ತಂ ಯದಾ ಮನಃ . ಧರ್ಮಾರ್ಥಕಾಮಮೋಕ್ಷೇಷು ನಿರಪೇಕ್ಷಂ ತದಾ ಭವೇತ್ .. ೧೬-೫..  ಇದು ಮಾಡಲಾಗಿದೆ - ಇದನ್ನು ಮಾಡಿ ಆಗಿಲ್ಲ ಎಂಬ ದ್ವಂದ್ವದಿಂದ ಯಾವಾಗ ಮನಸ್ಸು ಮುಕ್ತವಾಗುವದೋ, ಆಗ ಅದ...