ಅಷ್ಟಾವಕ್ರಗೀತಾ - ೧೬
ಅಷ್ಟಾವಕ್ರ ಉವಾಚ ..
ಆಚಕ್ಷ್ವ ಶೃಣು ವಾ ತಾತ ನಾನಾಶಾಸ್ತ್ರಾಣ್ಯನೇಕಶಃ .
ತಥಾಪಿ ನ ತವ ಸ್ವಾಸ್ಥ್ಯಂ ಸರ್ವವಿಸ್ಮರಣಾದ್ ಋತೇ .. ೧೬-೧..
ಮಗು, ನಾನಾ ಶಾಸ್ತ್ರಗಳನ್ನು, ಕೇಳಿದರೂ, ಹೇಳಿದರೂ ಸಹ,  ಎಲ್ಲವನ್ನೂ ಮರೆಯುವ ತನಕ ನಿನಗೆ ಶಾಂತಿ ಸಿಗದು. 
ಭೋಗಂ ಕರ್ಮ ಸಮಾಧಿಂ ವಾ ಕುರು ವಿಜ್ಞ ತಥಾಪಿ ತೇ .
ಚಿತ್ತಂ ನಿರಸ್ತಸರ್ವಾಶಮತ್ಯರ್ಥಂ ರೋಚಯಿಷ್ಯತಿ .. ೧೬-೨..
ಓ ಜ್ಞಾನಿಯೇ, ನೀನು ಭೋಗವನ್ನು ಅಥವಾ ಕರ್ಮವನ್ನು ಅಥವಾ ಧ್ಯಾನವನ್ನೇ ಮಾಡುತ್ತಿರು. ಚಿತ್ತವು ಸಂತೋಷಗೊಳ್ಳುವದು ಸರ್ವ ಆಸೆಯನ್ನು ತ್ಯಜಿಸಿದಾಗ ಮಾತ್ರ.
ಆಯಾಸಾತ್ಸಕಲೋ ದುಃಖೀ ನೈನಂ ಜಾನಾತಿ ಕಶ್ಚನ .
ಅನೇನೈವೋಪದೇಶೇನ ಧನ್ಯಃ ಪ್ರಾಪ್ನೋತಿ ನಿರ್ವೃತಿಂ .. ೧೬-೩..
ಸತತ ಪ್ರಯತ್ನದಿಂದ ಎಲ್ಲರೂ ದುಃಖದಲ್ಲಿರುತ್ತಾರೆ. ಆದರೆ ಈ ಮಾತನ್ನು ಯಾರೂ ಅರಿತಿರುವದಿಲ್ಲ. ಈ ಉಪದೇಶವನ್ನು ಪಡೆದ ಧನ್ಯನು ಮುಕ್ತನಾಗುತ್ತಾನೆ.
ವ್ಯಾಪಾರೇ ಖಿದ್ಯತೇ ಯಸ್ತು ನಿಮೇಷೋನ್ಮೇಷಯೋರಪಿ .
ತಸ್ಯಾಲಸ್ಯ ಧುರೀಣಸ್ಯ ಸುಖಂ ನಾನ್ಯಸ್ಯ ಕಸ್ಯಚಿತ್ .. ೧೬-೪..
ಕಣ್ಣನ್ನು ಮುಚ್ಚಿ ತೆಗೆದು ಮಾಡಲೂ ಯಾರಿಗೆ ಆಲಸ್ಯವೋ ಅಂತಹ ಆಲಸಿ ಧುರೀಣನಿಗೆ ಸುಖ ಲಭ್ಯ - ಇನ್ಯಾರಿಗೂ ಅಲ್ಲ.
ಇದಂ ಕೃತಮಿದಂ ನೇತಿ ದ್ವಂದ್ವೈರ್ಮುಕ್ತಂ ಯದಾ ಮನಃ .
ಧರ್ಮಾರ್ಥಕಾಮಮೋಕ್ಷೇಷು ನಿರಪೇಕ್ಷಂ ತದಾ ಭವೇತ್ .. ೧೬-೫..
 ಇದು ಮಾಡಲಾಗಿದೆ - ಇದನ್ನು ಮಾಡಿ ಆಗಿಲ್ಲ ಎಂಬ ದ್ವಂದ್ವದಿಂದ ಯಾವಾಗ ಮನಸ್ಸು ಮುಕ್ತವಾಗುವದೋ, ಆಗ ಅದು ಧರ್ಮಾರ್ಥ ಕಾಮ ಮೋಕ್ಷಗಳಲ್ಲಿ ನಿರಾಸಕ್ತವಾಗುತ್ತದೆ.
ವಿರಕ್ತೋ ವಿಷಯದ್ವೇಷ್ಟಾ ರಾಗೀ ವಿಷಯಲೋಲುಪಃ .
ಗ್ರಹಮೋಕ್ಷವಿಹೀನಸ್ತು ನ ವಿರಕ್ತೋ ನ ರಾಗವಾನ್ .. ೧೬-೬..
ಯಾರು ವಿಷಯದ್ವೇಷಿಯೋ ಅವನು ವಿರಕ್ತನು, ಯಾರು ವಿಷಯಲೋಲುಪನೋ ಅವನು ರಾಗೋನ್ಮತ್ತ. ಯಾರಿಗೆ ನಂಟು ಅಥವಾ ನಿರ್ಲಿಪ್ತತೆ ಎರಡೂ ಇಲ್ಲವೋ, ಅವನು ವಿರಕ್ತನೂ ಅಲ್ಲ, ರಾಗವಾನನೂ ಅಲ್ಲ.
ಹೇಯೋಪಾದೇಯತಾ ತಾವತ್ಸಂಸಾರವಿಟಪಾಂಕುರಃ .
ಸ್ಪೃಹಾ ಜೀವತಿ ಯಾವದ್ ವೈ ನಿರ್ವಿಚಾರದಶಾಸ್ಪದಂ .. ೧೬-೭..
ಎಲ್ಲಿಯವರೆಗೆ ತೃಷ್ಣೆ ಜೀವಿತವಾಗಿರುವದೋ, ಎಲ್ಲಿಯವರೆಗೆ ವಿಚಾರರಹಿತವಾದ ದೆಸೆ ಇರುವದೋ, ಅಲ್ಲಿಯವರೆಗೆ ಸಂಸಾರ ವೃಕ್ಷದ ಚಿಗುರು ಬೆಳೆಯುತ್ತಲೇ ಇರುವದು ಹಾಗೂ ಸ್ವೀಕಾರ, ತಿರಸ್ಕಾರಗಳು ಕೂಡ ಇರುವವು. ತೃಷೆ ನಾಶವಾದ ಮೇಲೆ ಇವಾವೂ ಇರುವದಿಲ್ಲ.
ಪ್ರವೃತ್ತೌ ಜಾಯತೇ ರಾಗೋ ನಿರ್ವೃತ್ತೌ ದ್ವೇಷ ಏವ ಹಿ .
ನಿರ್ದ್ವಂದ್ವೋ ಬಾಲವದ್ ಧೀಮಾನ್ ಏವಮೇವ ವ್ಯವಸ್ಥಿತಃ .. ೧೬-೮..
ಮಾನವನು ಕಾರ್ಯ ಪ್ರವೃತ್ತನಾದಾಗ ರಾಗ ಉತ್ಪನ್ನವಾಗುತ್ತದೆ. ಅವನು ನಿಷ್ಕ್ರಿಯನಾಗಿ ಕುಳಿತಾಗ ದ್ವೇಷ ಉತ್ಪನ್ನವಾಗುತ್ತದೆ. (ಆತ್ಮಜ್ಞಾನಿಯು) ಜ್ಞಾನಿಯಾದವನು ಇವೆರಡರಿಂದಲೂ ದೂರವಾಗಿ, ಮಗುವಿನಂತೆ ನಿರ್ದ್ವಂದ್ವನಾಗಿ ಸ್ಥಿತನಾಗಿರುತ್ತಾನೆ.
ಹಾತುಮಿಚ್ಛತಿ ಸಂಸಾರಂ ರಾಗೀ ದುಃಖಜಿಹಾಸಯಾ .
ವೀತರಾಗೋ ಹಿ ನಿರ್ದುಃಖಸ್ತಸ್ಮಿನ್ನಪಿ ನ ಖಿದ್ಯತಿ .. ೧೬-೯..
ರಾಗಿಯಾದವನು ದುಃಖವನ್ನು ತಪ್ಪಿಸಿಕೊಳ್ಳಲು ಸಂಸಾರವನ್ನೇ ತ್ಯಜಿಸಲು ಇಚ್ಛಿಸುತ್ತಾನೆ. ಆದರೆ ರಾಗರಹಿತನಾದವನು ಸಂಸಾರದಲ್ಲಿದ್ದರೂ ಖೇದವನ್ನು ಹೊಂದುವದಿಲ್ಲ. 
ಯಸ್ಯಾಭಿಮಾನೋ ಮೋಕ್ಷೇಽಪಿ ದೇಹೇಽಪಿ ಮಮತಾ ತಥಾ .
ನ ಚ ಜ್ಞಾನೀ ನ ವಾ ಯೋಗೀ ಕೇವಲಂ ದುಃಖಭಾಗಸೌ .. ೧೬-೧೦..
ಯಾರಿಗೆ ಮೋಕ್ಷದ ಬಗ್ಗೆ ಅಭಿಮಾನ-ಜಂಭವಿರುವದೋ, ದೇಹದ ಬಗ್ಗೆ ಮೋಹವಿರುವದೋ, ಅಂತವನು ಜ್ಞಾನಿಯೂ ಅಲ್ಲ, ಯೋಗಿಯೂ ಅಲ್ಲ. ಕೇವಲ ದುಃಖಿ ಮಾತ್ರ.
ಹರೋ ಯದ್ಯುಪದೇಷ್ಟಾ ತೇ ಹರಿಃ ಕಮಲಜೋಽಪಿ ವಾ .
ತಥಾಪಿ ನ ತವ ಸ್ವಾಥ್ಯಂ ಸರ್ವವಿಸ್ಮರಣಾದೃತೇ .. ೧೬-೧೧..
ಎಲ್ಲವನ್ನೂ (ರಾಗ-ಮೋಹ-ದ್ವೇಷಗಳನ್ನು) ತ್ಯಜಿಸುವತನಕ, ಮರೆಯುವತನಕ, ನಿನಗೆ ಹರನಾಗಲೀ, ಹರಿಯಾಗಲೀ, ಅಥವಾ ಕಮಲಜನಾಗಲೀ(ಬ್ರಹ್ಮ) ನಿನಗೆ ಉಪದೇಶಿಸಿದರೂ ಶಾಂತಿ ದೊರಕದು.
Comments
Post a Comment