ಬಂಧನ ಮತ್ತು ಮುಕ್ತಿ ಅಷ್ಟಾವಕ್ರ ಉವಾಚ - ತದಾ ಬಂಧೋ ಯದಾ ಚಿತ್ತಂ ಕಿಂಚಿದ್ ವಾಂಛತಿ ಶೋಚತಿ . ಕಿಂಚಿನ್ ಮುಂಚತಿ ಗೃಹ್ಣಾತಿ ಕಿಂಚಿದ್ ಹೃಷ್ಯತಿ ಕುಪ್ಯತಿ .. 8-1.. ಯಾವಾಗ ಮನಸ್ಸು ಏನನ್ನಾದರೂ ಆಸೆ ಪಡುವದೋ, ಏನನ್ನಾದರೂ ಕುರಿತು ಶೋಕ ಪಡುವದೋ , ಏನನ್ನಾದರೂ ಪಡೆಯುವದೋ, ಏನನ್ನಾದರೂ ತ್ಯಜಿಸಿವದೋ, ಏನನ್ನಾದರೂ ಕುರಿತು ಸಂತೋಷ ಪಡುವದೋ, ಏನನ್ನಾದರೂ ಕುರಿತು ದುಃಖಿಸುವದೋ, ಆಗ ಆತ್ಮಕ್ಕೆ ಬಂಧನ ಉಂಟಾಗುತ್ತದೆ . ತದಾ ಮುಕ್ತಿರ್ಯದಾ ಚಿತ್ತಂ ನ ವಾಂಛತಿ ನ ಶೋಚತಿ . ನ ಮುಂಚತಿ ನ ಗೃಹ್ಣಾತಿ ನ ಹೃಷ್ಯತಿ ನ ಕುಪ್ಯತಿ .. 8-2.. ಯಾವಾಗ ಮನಸ್ಸು ಏನನ್ನೂ ಆಸೆ ಪಡುವದಿಲ್ಲವೋ, ಏನನ್ನು ಕುರಿತೂ ಶೋಕ ಪಡುವದಿಲ್ಲವೋ , ಏನನ್ನೂ ಪಡೆಯುವದಿಲ್ಲವೋ, ಏನನ್ನೂ ತ್ಯಜಿಸಿವದಿಲ್ಲವೋ, ಏನನ್ನು ಕುರಿತು ಸಂತೋಷಪಡುವದಿಲ್ಲವೋ, ಏನನ್ನೂ ಕುರಿತು ದುಃಖಿಸುವದಿಲ್ಲವೋ, ಆಗ ಆತ್ಮಕ್ಕೆ ಮುಕ್ತಿ ದೊರೆಯುತ್ತದೆ. ತದಾ ಬಂಧೋ ಯದಾ ಚಿತ್ತಂ ಸಕ್ತಂ ಕಾಸ್ವಪಿ ದೃಷ್ಟಿಷು . ತದಾ ಮೋಕ್ಷೋ ಯದಾ ಚಿತ್ತಮಸಕ್ತಂ ಸರ್ವದೃಷ್ಟಿಷು .. 8-3.. ಯಾವಾಗ ಮನಸ್ಸು ಯಾವುದಾದರೂ ದೃಷ್ಟಿಯಲ್ಲಿ ಅಥವಾ ಜಡ ವಸ್ತುವಿನಲ್ಲಿ ಆಸಕ್ತನಾಗುವದೋ, ಆಗ ಆತ್ಮ ಬಂಧನಕ್ಕೊಳಗಾಗ...