Skip to main content

Posts

Showing posts with the label 12

ಅಷ್ಟಾವಕ್ರಗೀತಾ-೧೨

 ಜನಕನ ಸ್ಥಿತಿ  ಜನಕ ಉವಾಚ ..  ಕಾಯಕೃತ್ಯಾಸಹಃ ಪೂರ್ವಂ ತತೋ ವಾಗ್ವಿಸ್ತರಾಸಹಃ . ಅಥ ಚಿಂತಾಸಹಸ್ತಸ್ಮಾದ್ ಏವಮೇವಾಹಮಾಸ್ಥಿತಃ .. 12-1.. ಜನಕನು ಆತ್ಮಜ್ಞಾನದ ನಂತರದ ತನ್ನ ಅನುಭೂತಿಗಳನ್ನು ವರ್ಣಿಸುತ್ತ ಹೀಗೆ ಹೇಳುತ್ತಾನೆ- ಮೊದಲು ನಾನು ಕಾರ್ಯಕೃತ್ಯಗಳ ಬಗ್ಗೆ ನಿರಾಸಕ್ತನಾದೆ. ನಂತರ ಅತಿ ಮಾತುಕತೆಯ ಬಗ್ಗೆ ನಿರಾಸಕ್ತನಾದೆ. ನಂತರ ಯೋಚನೆ ಬಗ್ಗೆ ನಿರಾಸಕ್ತನಾದೆ. ಈಗ ನಾನು ಈ ಸ್ಥಿತಿಯಲ್ಲಿ ಇದ್ದೇನೆ. (ಮಾತು, ಕೃತಿ, ಚಿಂತೆ ಇವಲ್ಲವುಗಳಿಂದ ನಿರ್ಲಿಪ್ತನಾಗಿದ್ದೇನೆ) ಪ್ರೀತ್ಯಭಾವೇನ ಶಬ್ದಾದೇರದೃಶ್ಯತ್ವೇನ ಚಾತ್ಮನಃ . ವಿಕ್ಷೇಪೈಕಾಗ್ರಹೃದಯ ಏವಮೇವಾಹಮಾಸ್ಥಿತಃ .. 12-2.. ಶಬ್ದ ಇತ್ಯಾದಿ ಬಾಹ್ಯ ವಿಷಯಗಳಿಗೇ ಪ್ರೀತಿಯ ಅಭಾವದಿಂದ, ಆತ್ಮವು ಅನುಭವಕ್ಕೆ ಸಿಗದು ಎಂಬ ಸತ್ಯವನ್ನು ಅರಿತು, ಮನಸ್ಸನ್ನು ಏಕಾಗ್ರವಾಗಿಸಿ ನಾನು ಈ ಸ್ಥಿತಿಯಲ್ಲಿ ಇದ್ದೇನೆ.  ಸಮಾಧ್ಯಾಸಾದಿವಿಕ್ಷಿಪ್ತೌ ವ್ಯವಹಾರಃ ಸಮಾಧಯೇ . ಏವಂ ವಿಲೋಕ್ಯ ನಿಯಮಮೇವಮೇವಾಹಮಾಸ್ಥಿತಃ .. 12-3.. . ಸಮಾಧಿ ಸ್ಥಿತಿ ಪಡೆಯಲು ಪ್ರಯತ್ನ ಪಡಬೇಕು ಯಾಕೆಂದರೆ ಬೇರೆ, ಬೇರೆ ಕವಚಗಳು ಮನಸ್ಸನ್ನು ಗೊಂದಲಗೊಳಿಸುತ್ತವೆ . (ನಾನು ಈ ಶರೀರ, ನಾನು ಈ ಮನಸ್ಸು ಇತ್ಯಾದಿ ಮಿಥ್ಯಾಕವಚಗಳು ಸಮಾಧಿ ಪಡೆಯಲು ಅಡ್ಡಿ ಉಂಟುಮಾಡುತ್ತವೆ). ಈ ನಿಯಮವನ್ನು ನೋಡಿ, ಅರಿತು, ನಾನು ಈ ಸ್ಥಿತಿಯಲ್ಲಿ ಇದ್ದೇನೆ.  ಹೇಯೋಪಾದೇಯವಿರಹಾದ್ ಏವಂ ಹರ್ಷವಿಷಾದಯೋಃ . ಅಭಾವಾ...