ಯತಾರ್ಥ ಜ್ಞಾನೋಪದೇಶ ಜನಕ ಉವಾಚ- ಆಕಾಶವದನಂತೋಽಹಂ ಘಟವತ್ ಪ್ರಾಕೃತಂ ಜಗತ್ . ಇತಿ ಜ್ಞಾನಂ ತಥೈತಸ್ಯ ನ ತ್ಯಾಗೋ ನ ಗ್ರಹೋ ಲಯಃ .. 6-1.. ಜನಕ ಹೇಳಿದನು : ನಾನು ಆಕಾಶದಂತೆ ಅನಂತನು. ಈ ಪ್ರಾಕೃತಿಕ ಜಗತ್ತಾದರೋ ಮಡಿಕೆಯಂತೆ. ಇದನ್ನು ಅರಿಯುವದೇ ಜ್ಞಾನ. (ಹಾಗಾಗಿ) ಈ ಜಗತ್ತನ್ನು ಗೃಹಿಸುವದು, ತ್ಯಜಿಸುವದು ಅಥವಾ ನಾಶ ಮಾಡುವ ಪ್ರಶ್ನೆಯೇ ಇಲ್ಲ. ಹಿಂದಿನ ಅಧ್ಯಾಯದಲ್ಲಿ ಅಷ್ಟಾವಕ್ರನು ಲಯವಾಗುವದರ ಬಗ್ಗೆ ಹೇಳಿದ್ದಕ್ಕೆ ಇದು ಜನಕರಾಜನ ಉತ್ತರ. ಮಹೋದಧಿರಿವಾಹಂ ಸ ಪ್ರಪಂಚೋ ವೀಚಿಸನ್ನಿಭಃ . ಇತಿ ಜ್ಞಾನಂ ತಥೈತಸ್ಯ ನ ತ್ಯಾಗೋ ನ ಗ್ರಹೋ ಲಯಃ .. 6-2.. ಮಹೋದಧಿ=ಮಹಾಸಾಗರ ವೀಚಿಸನ್ನಿಭಃ=ಅಲೆಯಂತೆ ನಾನು ಮಹಾಸಾಗರದಂತೆ ಅನಂತನು, ಪ್ರಪಂಚವೋ ಆ ಸಾಗರದ ಅಲೆಯಂತೆ ಕ್ಷಣಿಕ. ಇದೇ ಜ್ಞಾನ. ಹಾಗಾಗಿ ಈ ಆತ್ಮವನ್ನು ಗೃಹಿಸುವದೂ ಅಲ್ಲ, ತ್ಯಜಿಸುವದೂ ಅಲ್ಲ, ಬದಲಾಗಿ ಅದರಲ್ಲೇ ಲಯವಾಗುವದೇ ಸರಿ. ಸಾಗರವು ಚಿರ, ಶಾಶ್ವತ, ಅನಂತ. ಅದರಲ್ಲಿ ಅಲೆಗಳು ಎದ್ದು, ಚಲಿಸಿ, ಮಾಯವಾಗುತ್ತವೆ. ಹಾಗೆಯೇ ಆತ್ಮ ಶಾಶ್ವರ. ಈ ವಿಶ್ವದ ಸಂಗತಿಗಳು ಅದರಲ್ಲಿ ಬಂದು ನಂತರ ನಾಶವಾಗುತ್ತವೆ. ಹೀಗಿರುವಾಗ ಯಾವುದನ್ನು ಯಾಕೆ ತ್ಯಾಗ ಮಾಡಬೇಕು ಅಥವಾ ಗ್ರಹಿಸಬೇಕು ಅಥವಾ ಯಾವುದರಲ್ಲಿ ಲಯವಾಗಬೇಕು? ಅಹಂ ಸ ಶುಕ್ತಿಸಂಕಾಶೋ ರೂಪ್ಯವದ್ ವಿಶ್ವಕಲ್ಪನಾ . ಇತಿ ಜ್ಞಾನಂ ತಥೈತಸ್ಯ ನ ತ್ಯಾಗೋ ನ ಗ್ರಹೋ ಲಯಃ .. 6-3.. ನಾನು ಚಿಪ್ಪು, ಈ ವಿಶ್ವದ ಕಲ್ಪನೆ ಬೆಳ್ಳಿಯಂತೆ. ...