ಶಾಂತಿ ಜನಕ ಉವಾಚ- ಪ್ರಕೃತ್ಯಾ ಶೂನ್ಯಚಿತ್ತೋ ಯಃ ಪ್ರಮಾದಾದ್ ಭಾವಭಾವನಃ . ನಿದ್ರಿತೋ ಬೋಧಿತ ಇವ ಕ್ಷೀಣಸಂಸ್ಮರಣೋ ಹಿ ಸಃ .. ೧೪-೧.. ಯಾರು ವಿಷಯಗಳಲ್ಲಿ ಸ್ವಭಾವತಃ ಶೂನ್ಯಚಿತ್ತನಾಗಿ, ರಾಗ-ದ್ವೇಷಗಳಿಂದ ಮುಕ್ತನಾಗಿರುತ್ತಾನೋ, ಅವನು ಪ್ರಮಾದವಶಾತ್ ವಿಷಯ ರಾಗ ದ್ವೇಷಗಳ ಬಗ್ಗೆ ಯೋಚಿಸಿದರೂ, ನಿದ್ರಿತನಾದವನಾದರೂ ಜಾಗೃತನಂತೆ ಅವನು ಆ ರಾಗ-ದ್ವೇಷಗಳಿಂದ ಪರಿಣಾಮಿತನಾಗುವದಿಲ್ಲ. ಕ್ವ ಧನಾನಿ ಕ್ವ ಮಿತ್ರಾಣಿ ಕ್ವ ಮೇ ವಿಷಯದಸ್ಯವಃ . ಕ್ವ ಶಾಸ್ತ್ರಂ ಕ್ವ ಚ ವಿಜ್ಞಾನಂ ಯದಾ ಮೇ ಗಲಿತಾ ಸ್ಪೃಹಾ .. ೧೪-೨.. ನನ್ನಲ್ಲಿ ಆಸೆಗಳು ನಾಶವಾಗಿ ಹೋದ ಮೇಲೆ, ಧನವೆಲ್ಲಿ, ಮಿತ್ರರೆಲ್ಲಿ, ಲೌಕಿಕ ಆಸೆಗಳ ರೂಪದ ಕಳ್ಳರೆಲ್ಲಿ, ಶಾಸ್ತ್ರವೆಲ್ಲಿ, ಜ್ಞಾನ-ವಿಜ್ಞಾನವೆಲ್ಲಿ? (ಆತ್ಮಸಾಕ್ಷಾತ್ಕಾರವಾದ ಮೇಲೆ ನನಗೆ ಇವು ಯಾವುದರಲ್ಲೂ ಆಸಕ್ತಿಯೇ ಉಳಿದಿಲ್ಲ.) ವಿಜ್ಞಾತೇ ಸಾಕ್ಷಿಪುರುಷೇ ಪರಮಾತ್ಮನಿ ಚೇಶ್ವರೇ . ನೈರಾಶ್ಯೇ ಬಂಧಮೋಕ್ಷೇ ಚ ನ ಚಿಂತಾ ಮುಕ್ತಯೇ ಮಮ .. ೧೪-೩.. ಸಾಕ್ಷಿಪುರುಷನಾದ, ಪರಮಾತ್ಮನಾದ ಈಶ್ವರನನ್ನು ಅರಿತ ಮೇಲೆ, ನನಗೆ ಮೋಕ್ಷದಲ್ಲಿ ಆಸಕ್ತಿಯಿಲ್ಲ. ಮುಕ್ತಿ ದೊರಕಬೇಕೆಂಬ ಚಿಂತೆ ಕೂಡ ಇಲ್ಲ. ಎಲ್ಲಾ ಆಸೆಗಳಂತೆ ಮುಕ್ತಿ ದೊರಕಬೇಕೆಂಬುದೂ ಆಸೆಯೇ. ಆದರೆ ಪರಮಾತ್ಮನನ್ನು ಅರಿತಮೇಲೆ ನನಗೆ ಮುಕ್ತಿಯ ಬಯಕೆಯೂ ಇಲ್ಲ. ಅಂತರ್ವಿಕಲ್ಪಶೂನ್ಯಸ್ಯ ಬಹಿಃ ಸ್ವಚ್ಛಂದಚಾರಿಣಃ . ಭ್ರಾಂತಸ್ಯೇವ ದಶಾಸ್ತಾಸ್ತಾಸ್ತಾದೃಶಾ ಏವ ...