ಅಷ್ಟಾವಕ್ರಗೀತಾ - ೧೧
ಜ್ಞಾನ
ಅಷ್ಟಾವಕ್ರ ಉವಾಚ ..
ಭಾವಾಭಾವವಿಕಾರಶ್ಚ ಸ್ವಭಾವಾದಿತಿ ನಿಶ್ಚಯೀ .
ನಿರ್ವಿಕಾರೋ ಗತಕ್ಲೇಶಃ ಸುಖೇನೈವೋಪಶಾಮ್ಯತಿ .. 11-1..
ಇರುವುದು, ಇಲ್ಲದಿರುವದು ಇತ್ಯಾದಿ ಬದಲಾವಣೆಗಳು ವಸ್ತುಗಳ ಸ್ವಭಾವ ಎಂದು ತಿಳಿದವನು, ನಿರ್ವಿಕಾರನಾಗಿ, ದುಃಖರಹಿತನಾಗಿ ಸುಖ-ಸಮಾಧಾನವನ್ನು ಹೊಂದುತ್ತಾನೆ.
ಈಶ್ವರಃ ಸರ್ವನಿರ್ಮಾತಾ ನೇಹಾನ್ಯ ಇತಿ ನಿಶ್ಚಯೀ .
ಅಂತರ್ಗಲಿತಸರ್ವಾಶಃ ಶಾಂತಃ ಕ್ವಾಪಿ ನ ಸಜ್ಜತೇ .. 11-2..
ಈಶ್ವರನು ಸಕಲವನ್ನೂ ನಿರ್ಮಿಸಿದವನು. ಅವನ ಹೊರತು ಇಲ್ಲಿ ಏನೂ ಇಲ್ಲ ಎಂದು ನಿಶ್ಚಯವಾಗಿ ತಿಳಿದವನು, ಎಲ್ಲ ಆಸೆಗಳನ್ನು ತ್ಯಜಿಸಿ, ಯಾವುದಕ್ಕೂ ಅಂಟಿಕೊಳ್ಳವದೆ ಶಾಂತನಾಗಿರುತ್ತಾನೆ.
ಆಪದಃ ಸಂಪದಃ ಕಾಲೇ ದೈವಾದೇವೇತಿ ನಿಶ್ಚಯೀ .
ತೃಪ್ತಃ ಸ್ವಸ್ಥೇಂದ್ರಿಯೋ ನಿತ್ಯಂ ನ ವಾಂಛತಿ ನ ಶೋಚತಿ .. 11-3..
ಆಪತ್ತುಗಳು ಮತ್ತು ಸುಖ-ಸಂತೋಷಗಳು ತನಗೆ ಬರುವದು ವಿಧಿಯ ಮಾಯೆಯಿಂದಲೇ ಎಂದು ದೃಢವಾಗಿ ಅರಿತವನು, ತೃಪ್ತನಾಗಿ, ಇಂದ್ರಿಯ ನಿಗ್ರಹನಾಗಿ ಇರುತ್ತಾನೆ. ಅವನು ಏನನ್ನೂ ವಾಂಛಿಸುವದೂ ಇಲ್ಲ, ಏನನ್ನೂ ಶೋಕಿಸುವದೂ ಇಲ್ಲ.
ಸುಖದುಃಖೇ ಜನ್ಮಮೃತ್ಯೂ ದೈವಾದೇವೇತಿ ನಿಶ್ಚಯೀ .
ಸಾಧ್ಯಾದರ್ಶೀ ನಿರಾಯಾಸಃ ಕುರ್ವನ್ನಪಿ ನ ಲಿಪ್ಯತೇ .. 11-4..
ಸುಖದುಃಖಗಳು, ಜನ್ಮ ಮೃತ್ಯು ಇತ್ಯಾದಿಗಳು ವಿಧಿಯ ಮಾಯೆ ಎಂದು ನಿಶ್ಚಯವಾಗಿ ತಿಳಿದವನು, ಬೇಕೆಂಬುದೆಲ್ಲಾ ಅಸಾಧ್ಯವೆಂದು ತಿಳಿದು, ನಿರಾಯಾಸನಾಗುತ್ತಾನೆ. ಮತ್ತು ಕರ್ಮಗಳನ್ನು ಮಾಡುತ್ತಿದ್ದರೂ ಅವುಗಳಿಗೆ ಅಂಟಿಕೊಳ್ಳುವದಿಲ್ಲ.
ಚಿಂತಯಾ ಜಾಯತೇ ದುಃಖಂ ನಾನ್ಯಥೇಹೇತಿ ನಿಶ್ಚಯೀ .
ತಯಾ ಹೀನಃ ಸುಖೀ ಶಾಂತಃ ಸರ್ವತ್ರ ಗಲಿತಸ್ಪೃಹಃ .. 11-5..
ಚಿಂತೆಯಿಂದ ದುಃಖ ಉಂಟಾಗುವುದೇ ವಿನಾ ಇನ್ನೇನೂ ಸಿಗುವದಿಲ್ಲ ಎಂಬುದನ್ನು ನಿಶ್ಚಯವಾಗಿ ತಿಳಿದವನು, ಚಿಂತಾಹೀನನಾಗಿ, ಸುಖಿಯಾಗಿ, ಶಾಂತನಾಗಿ, ನಿಸ್ಪೃಹನಾಗುತ್ತಾನೆ. (ಆಸೆಯಿಲ್ಲದವನಾಗುತ್ತಾನೆ)
ನಾಹಂ ದೇಹೋ ನ ಮೇ ದೇಹೋ ಬೋಧೋಽಹಮಿತಿ ನಿಶ್ಚಯೀ .
ಕೈವಲ್ಯಮಿವ ಸಂಪ್ರಾಪ್ತೋ ನ ಸ್ಮರತ್ಯಕೃತಂ ಕೃತಂ .. 11-6..
ನಾನು ದೇಹವಲ್ಲ. ದೇಹ ನನ್ನದು ಅಲ್ಲ ಎಂದು ದೃಢವಾಗಿ ತಿಳಿದವನು, ಕೃತಾಕೃತಗಳ ಸ್ಮರಣೆ ಮಾಡದೇ, ಕೈವಲ್ಯಪ್ರಾಪ್ತನಾಗುತ್ತಾನೆ.
ಆಬ್ರಹ್ಮಸ್ತಂಬಪರ್ಯಂತಮಹಮೇವೇತಿ ನಿಶ್ಚಯೀ .
ನಿರ್ವಿಕಲ್ಪಃ ಶುಚಿಃ ಶಾಂತಃ ಪ್ರಾಪ್ತಾಪ್ರಾಪ್ತವಿನಿರ್ವೃತಃ .. 11-7..
ಬ್ರಹ್ಮನಿಂದ ಆರಂಭವಾಗಿ ಹುಲ್ಲಿನ ಪೊದೆಯತನಕ ಇವೆಲ್ಲವೂ ತಾನೇ ಎಂದು ನಿಶ್ಚಯವಾಗಿ ತಿಳಿದವನು, ನಿರ್ವಿಕಲ್ಪನಾಗಿ, ಶುದ್ಧನಾಗಿ, ಶಾಂತನಾಗಿ, ಪ್ರಾಪ್ತ-ಅಪ್ರಾಪ್ತಗಳ ಚಿಂತೆಯಿಂದ ದೂರನಾಗುತ್ತಾನೆ.
ನಾನಾಶ್ಚರ್ಯಮಿದಂ ವಿಶ್ವಂ ನ ಕಿಂಚಿದಿತಿ ನಿಶ್ಚಯೀ .
ನಿರ್ವಾಸನಃ ಸ್ಫೂರ್ತಿಮಾತ್ರೋ ನ ಕಿಂಚಿದಿವ ಶಾಮ್ಯತಿ .. 11-8..
ನಾನಾ ಆಶ್ಚರ್ಯಗಳ ಈ ವಿಶ್ವ ಏನೂ ಅಲ್ಲ ಎಂಬುದನ್ನು ನಿಶ್ಚಯವಾಗಿ ತಿಳಿದವನು, ವಾಸನಾರಹಿತನಾಗಿ ಜ್ಞಾನಮಾತ್ರನಾಗಿ ಶಾಂತನಾಗುತ್ತಾನೆ.
Comments
Post a Comment