ಅಷ್ಟಾವಕ್ರಗೀತಾ- ೬

ಯತಾರ್ಥ ಜ್ಞಾನೋಪದೇಶ

ಜನಕ ಉವಾಚ-

ಆಕಾಶವದನಂತೋಽಹಂ ಘಟವತ್ ಪ್ರಾಕೃತಂ ಜಗತ್ .
ಇತಿ ಜ್ಞಾನಂ ತಥೈತಸ್ಯ ನ ತ್ಯಾಗೋ ನ ಗ್ರಹೋ ಲಯಃ .. 6-1..

ನಾನು (ಆತ್ಮ) ಆಕಾಶದಂತೆ ಅನಂತನು. ಈ ಪ್ರಾಕೃತಿಕ ಜಗತ್ತಾದರೋ ಮಡಿಕೆಯಂತೆ. ಇದನ್ನು ಅರಿಯುವದೇ ಜ್ಞಾನ. (ಹಾಗಾಗಿ) ಈ ಇದನ್ನು(ಜಗತ್ತನ್ನು) ಗೃಹಿಸುವದು, ತ್ಯಜಿಸುವದು ಅಥವಾ ನಾಶ ಮಾಡುವ ಪ್ರಶ್ನೆಯೇ ಇಲ್ಲ.

ಮಹೋದಧಿರಿವಾಹಂ ಸ ಪ್ರಪಂಚೋ ವೀಚಿಸನ್ನಿಭಃ .
ಇತಿ ಜ್ಞಾನಂ ತಥೈತಸ್ಯ ನ ತ್ಯಾಗೋ ನ ಗ್ರಹೋ ಲಯಃ .. 6-2..

ನಾನು ಮಹಾಸಾಗರದಂತೆ ಅನಂತನು, ಪ್ರಪಂಚವೋ ಆ ಸಾಗರದ ಅಲೆಯಂತೆ ಕ್ಷಣಿಕ. ಇದೇ ಜ್ಞಾನ. ಹಾಗಾಗಿ ಈ ಆತ್ಮವನ್ನು ಗೃಹಿಸುವದೂ ಅಲ್ಲ, ತ್ಯಜಿಸುವದೂ ಅಲ್ಲ, ಬದಲಾಗಿ ಅದರಲ್ಲೇ ಲಯವಾಗುವದೇ ಸರಿ.

ಅಹಂ ಸ ಶುಕ್ತಿಸಂಕಾಶೋ ರೂಪ್ಯವದ್ ವಿಶ್ವಕಲ್ಪನಾ .
ಇತಿ ಜ್ಞಾನಂ ತಥೈತಸ್ಯ ನ ತ್ಯಾಗೋ ನ ಗ್ರಹೋ ಲಯಃ .. 6-3..

ಚಿಪ್ಪನ್ನು ನೋಡಿ ಬೆಳ್ಳಿಯೆಂದು ಭ್ರಮೆ ಹೊಂದುವಂತೆ, ಭ್ರಮೆಯಿಂದ ಆತ್ಮ ಬಾಹ್ಯ ಜಗತ್ತಿನಂತೆ ಕಂಡುಬರುತ್ತದೆ. ಇದನ್ನು ಅರಿತಮೇಲೆ ಈ ಆತ್ಮವನ್ನು ಗೃಹಿಸುವದು, ತ್ಯಜಿಸುವದು ಅಥವಾ ನಾಶ ಮಾಡಲು ಸಾಧ್ಯ ಇಲ್ಲ.

ಅಹಂ ವಾ ಸರ್ವಭೂತೇಷು ಸರ್ವಭೂತಾನ್ಯಥೋ ಮಯಿ .
ಇತಿ ಜ್ಞಾನಂ ತಥೈತಸ್ಯ ನ ತ್ಯಾಗೋ ನ ಗ್ರಹೋ ಲಯಃ .. 6-4..

ನಾನೇ ಸಕಲಭೂತಗಳಲ್ಲಿ ಇದ್ದೇನೆ. ನನ್ನಲ್ಲಿ ಸರ್ವಭೂತಗಳು ಇವೆ. ಈ ಜ್ಞಾನ ತಿಳಿದ ಮೇಲೆ ಆತ್ಮದ ತ್ಯಾಗ, ಗೃಹಣ ಅಥವಾ ಲಯದ ಪ್ರಶ್ನೆಯೇ ಇಲ್ಲ.
 

ಸಂಪೂರ್ಣ ಕೃತಿಯನ್ನು ಡೌನ್ ಲೋಡ್ ಮಾಡಿ. 

Comments

Popular posts from this blog

ಅಷ್ಟಾವಕ್ರಗೀತಾ - ೧

ಅಷ್ಟಾವಕ್ರಗೀತಾ - ೩

ಅಷ್ಟಾವಕ್ರಗೀತಾ - ೨