ಜ್ಞಾನ ಈ ಅಧ್ಯಾಯದಲ್ಲಿ ಅಷ್ಟಾವಕ್ರನು ಹೇಗೆ ಆತ್ಮಜ್ಞಾನ ಪಡೆದ ನಂತರ ಮನುಷ್ಯನು ಹೇಗೆ ಶಾಂತನು ಹಾಗೂ ಸುಖಿಯಾಗುತ್ತಾನೆ ಎಂದು ವಿವರಿಸುತ್ತಾನೆ. ಎಲ್ಲವನ್ನೂ ನಿರ್ಮಿಸಿದ ಆ ದೇವರು ಎಲ್ಲದರಲ್ಲೂ ಅಡಕವಾಗಿದ್ದಾನೆ. ಈ ಸತ್ಯವನ್ನು ಅರಿತಮೇಲೆ ಮನುಷ್ಯ ಎಲ್ಲಾ ಆಸೆಗಳನ್ನೂ ತೋರೆದು ಶಾಂತನಾಗುತ್ತಾನೆ. ವಸ್ತುಗಳ ಕ್ಷಣಿಕತೆಯನ್ನು ಅರಿತು ಅವುಗಳ ಮೇಲಿನ ಮೋಹವನ್ನು ತ್ಯಜಿಸುತ್ತಾನೆ. ಈ ಬಣ್ಣಬಣ್ಣದ ಪ್ರಪಂಚ ನಿಜವಾಗಿ ನೋಡಿದರೆ ಬರೀ ಶೂನ್ಯ ಎಂಬ ಸತ್ಯ ಅರಿತು ಸುಖಿಯಾಗುತ್ತಾನೆ. ಅಷ್ಟಾವಕ್ರ ಉವಾಚ .. ಭಾವಾಭಾವವಿಕಾರಶ್ಚ ಸ್ವಭಾವಾದಿತಿ ನಿಶ್ಚಯೀ . ನಿರ್ವಿಕಾರೋ ಗತಕ್ಲೇಶಃ ಸುಖೇನೈವೋಪಶಾಮ್ಯತಿ .. 11-1.. ಇರುವುದು, ಇಲ್ಲದಿರುವದು ಇತ್ಯಾದಿ ಬದಲಾವಣೆಗಳು ವಸ್ತುಗಳ ಸ್ವಭಾವ ಎಂದು ತಿಳಿದವನು, ನಿರ್ವಿಕಾರನಾಗಿ, ದುಃಖರಹಿತನಾಗಿ ಸುಖ-ಸಮಾಧಾನವನ್ನು ಹೊಂದುತ್ತಾನೆ. ಜಗತ್ತಿನ ಸರ್ವ ವಸ್ತುಗಳೂ ಅಶಾಶ್ವತ, ಕ್ಷಣಿಕ ಎಂದು ಮನನ ಮಾಡಿಕೊಂಡುವನು ಐಹಿಕ ವಸ್ತುಗಳ ಬಗ್ಗೆ ಆಸೆ ಪಡುವದಿಲ್ಲ - ಅವು ಸಿಗದಾಗ ದುಃಖ ಪಡುವದೂ ಇಲ್ಲ. ಸುಖ-ಶಾಂತಿ ಹೊಂದುತ್ತಾನೆ. ಈಶ್ವರಃ ಸರ್ವನಿರ್ಮಾತಾ ನೇಹಾನ್ಯ ಇತಿ ನಿಶ್ಚಯೀ . ಅಂತರ್ಗಲಿತಸರ್ವಾಶಃ ಶಾಂತಃ ಕ್ವಾಪಿ ನ ಸಜ್ಜತೇ .. 11-2.. ಈಶ್ವರನು ಸಕಲವನ್ನೂ ನಿರ್ಮಿಸಿದವನು. ಅವನ ಹೊರತು ಇಲ್ಲಿ ಏನೂ ಇಲ್ಲ ಎಂದು ನಿಶ್ಚಯವಾಗಿ ತಿಳಿದವನು, ಎಲ್ಲ ಆಸೆಗಳನ್ನು ತ್ಯಜಿಸಿ, ಯಾವುದಕ್ಕೂ ಅಂಟ...