Skip to main content

Posts

ಅಷ್ಟಾವಕ್ರಗೀತಾ - ೧

.. ಶ್ರೀ .. ಅಥ ಶ್ರೀಮದಷ್ಟಾವಕ್ರಗೀತಾ ಪ್ರಾರಭ್ಯತೇ . ಜನಕ ಉವಾಚ .. ಕಥಂ ಜ್ಞಾನಮವಾಪ್ನೋತಿ ಕಥಂ ಮುಕ್ತಿರ್ಭವಿಷ್ಯತಿ . ವೈರಾಗ್ಯಂ ಚ ಕಥಂ ಪ್ರಾಪ್ತಮೇತದ್ ಬ್ರೂಹಿ ಮಮ ಪ್ರಭೋ .. 1-1.. ಶಬ್ದಾರ್ಥ ಪ್ರಾರಭ್ಯತೇ = ಆರಂಭವಾಗುತ್ತದೆ ಜನಕ ಉವಾಚ = ಜನಕನು ಹೇಳಿದನು ಕಥಂ = ಹೇಗೆ ಜ್ಞಾನಮ್ + ಅವಾಪ್ನೋತಿ = ಜ್ಞಾನವನ್ನು ಪಡೆಯಬೇಕು ಮುಕ್ತಿ = ಮೋಕ್ಷ ಭವಿಷ್ಯತಿ = ಆಗುತ್ತದೆ ವೈರಾಗ್ಯ = ವೈರಾಗ್ಯ ಚ =ಮತ್ತು ಪ್ರಾಪ್ತಂ + ಏತತ್ = ಪಡೆಯತಕ್ಕದ್ದು , ಇದನ್ನು ಬ್ರೂಹಿ =ಹೇಳು ಮಮ =ನನ್ನ. ಪ್ರಭೋ = ಪ್ರಭುವೇ ಅನುವಾದ   ಜನಕ ಹೇಳಿದನು. ಜ್ಞಾನವನ್ನು ಹೇಗೆ ಸಂಪಾದಿಸಬೇಕು? ಮುಕ್ತಿಯನ್ನು ಹೇಗೆ ಪಡೆಯಬೇಕು? ವೈರಾಗ್ಯವನ್ನು ಪಡೆಯುವದು ಹೇಗೆ? ಪ್ರಭೂ, ಇದನ್ನು ನನಗೆ ತಿಳಿಸಿಕೊಡಿ. ಜನಕನು ನಮ್ಮೆಲ್ಲರ ಮನಸ್ಸಿನಲ್ಲಿರುವ ಪ್ರಶ್ನೆಯನ್ನೇ ಕೇಳುತ್ತಿದ್ದಾನೆ - ಜ್ಞಾನ ಪಡೆಯುವದು ಹೇಗೆ - ಅಧ್ಯಾತ್ಮ ಜ್ಞಾನ - ಕಬ್ಬಿಣದ ಕಡಲೆ - ಅದನ್ನು ತಿಳಿಯುವದು ಹೇಗೆ? ನಂತರ ಮೋಕ್ಷ ಪಡೆಯುವದು ಹೇಗೆ? ಈ ಸುಖ-ದುಃಖಗಳಿಂದ, ಹುಟ್ಟು-ಸಾವುಗಳಿಂದ, ಜರಾ-ಮೃತ್ಯುಗಳಿಂದ ಹೇಗೆ ಪಾರಾಗುವದು? ನಾನು-ನನ್ನದು ಎಂಬ ಆಶಾ-ಪಾಶದಿಂದ ಹೊರ ಬರುವದು ಹೇಗೆ? ಅಷ್ಟಾವಕ್ರ ಉವಾಚ .. ಮುಕ್ತಿಮಿಚ್ಛಸಿ ಚೇತ್ತಾತ ವಿಷಯಾನ್ ವಿಷವತ್ತ್ಯಜ . ಕ್ಷಮಾರ್ಜವದಯಾತೋಷಸತ್ಯಂ ಪೀಯೂಷವದ್ ಭಜ .. 1-2.. ಶಬ್ದಾರ್ಥ ಮುಕ್ತಿಂ = ಮು...

ಅಷ್ಟಾವಕ್ರಗೀತಾ - ೨

ಆತ್ಮಸಾಕ್ಷಾತ್ಕಾರದ ಆನಂದ ಅಷ್ಟಾವಕ್ರನಿಂದ ಆತ್ಮಜ್ಞಾನ ಪಡೆದ ಜನಕನು ತನ್ನ ಹರ್ಷವನ್ನು ಈ ಕೆಳಗಿನ ಸಾಲುಗಳಲ್ಲಿ ವ್ಯಕ್ತಪಡಿಸುತ್ತಾನೆ.  ಜನಕ ಉವಾಚ .. ಅಹೋ ನಿರಂಜನಃ ಶಾಂತೋ ಬೋಧೋಽಹಂ ಪ್ರಕೃತೇಃ ಪರಃ . ಏತಾವಂತಮಹಂ ಕಾಲಂ ಮೋಹೇನೈವ ವಿಡಂಬಿತಃ .. 2-1.. ಶಬ್ದಾರ್ಥ:  ಅಹೋ =ಓಹೋ    ನಿರಂಜನ =ನಿರ್ವಿಕಾರಿ    ಶಾಂತಃ =ಶಾಂತನು  ಬೋಧಃ + ಅಹಂ =ಪ್ರಜ್ಞೆ ನಾನು  ಪ್ರಕೃತೇಃ =ಪ್ರಕೃತಿಗಿಂತ  ಪರಃ =ಆಚೆ    ಏತಾವಂತಂ =ಇಷ್ಟು ಬಹಳ ಅಹಂ =ನಾನು ಕಾಲಂ =ಕಾಲ  ಮೋಹೇನ + ಏವ =ಮೋಹದಿಂದಲೇ  ವಿಡಂಬಿತಃ =ಮೋಸ ಹೋಗಿದ್ದೆ  ಅನುವಾದ: ಅಹೋ, ನಾನು ನಿಷ್ಕಳಂಕ, ಶಾಂತ ಮತ್ತು ಈ ಪ್ರಕೃತಿಯನ್ನು ಮೀರಿದ ಜ್ಞಾನವಾಗಿರುವೆ. (ಇದನ್ನು ತಿಳಿಯದೆ) ಇಷ್ಟು ದಿನ ಭ್ರಮೆಯಿಂದ ಮೋಸ ಹೋಗಿದ್ದೆ. ಯಥಾ ಪ್ರಕಾಶಯಾಮ್ಯೇಕೋ ದೇಹಮೇನಂ ತಥಾ ಜಗತ್ . ಅತೋ ಮಮ ಜಗತ್ಸರ್ವಮಥವಾ ನ ಚ ಕಿಂಚನ .. 2-2.. ಶಬ್ದಾರ್ಥ: ಯಥಾ =ಹೇಗೆ ಪ್ರಕಾಶಯಾಮಿ + ಏಕಃ =ಒಬ್ಬನೇ ಪ್ರಕಾಶಿಸುತ್ತೇನೆ  ದೇಹಮ್ + ಏನಂ =ಈ ದೇಹಮ್  ತಥಾ =ಹಾಗೇ ಜಗತ್ =ಜಗತ್ತನ್ನು ಅತಃ =ಹಾಗಾಗಿ ಮಮ =ನನ್ನ ಜಗತ್ + ಸರ್ವಂ =ಇಡೀ ಜಗತ್ತು  ನ =ಅಲ್ಲ  ಚ =ಹಾಗೂ ಕಿಂಚನ =ಯಾವದೂ ಅಲ್ಲ ಅನುವಾದ: ಹೇಗೆ ನಾನು ಈ ಶರೀರವನ್ನು ಪ್ರಕಾಶಿಸುತ್ತೇನೋ - ಹಾಗೆಯೆ ನಾನು ಈ ಜಗತ್ತನ್ನೂ ಪ್ರಕಾಶಿಸುತ್ತೇನೆ. ಹಾಗಾಗಿ ...

ಅಷ್ಟಾವಕ್ರಗೀತಾ - ೩

ಆತ್ಮಜ್ಞಾನದ ಅವಲೋಕನ ಅಷ್ಟಾವಕ್ರ ಉವಾಚ .. ಅವಿನಾಶಿನಮಾತ್ಮಾನಮೇಕಂ ವಿಜ್ಞಾಯ ತತ್ತ್ವತಃ . ತವಾತ್ಮಜ್ಞಾನಸ್ಯ ಧೀರಸ್ಯ ಕಥಮರ್ಥಾರ್ಜನೇ ರತಿಃ .. 3-1..  ಶಬ್ದಾರ್ಥ: ಅವಿನಾಶಿನಂ =ವಿನಾಶವಿಲ್ಲದವನನ್ನು;   ಆತ್ಮಾನಂ =ಆತ್ಮನನ್ನು;   ಏಕಂ =ಏಕೈಕನನ್ನು;  ವಿಜ್ಞಾಯ =ತಿಳಿದು;  ತತ್ತ್ವತಃ =ನಿಜ ಸ್ವರೂಪದಲ್ಲಿ;  ತವ =ನಿನ್ನ;  ಆತ್ಮಜ್ಞಾನಸ್ಯ =ಆತ್ಮಜ್ಞಾನಿಯ;  ಧೀರಸ್ಯ =ಧೀರನ;  ಕಥಂ =ಹೇಗೆ;  ಅರ್ಥಾರ್ಜನೇ =ಹಣದ(ಅರ್ಥ) ಗಳಿಕೆಯಲ್ಲಿ(ಅರ್ಜನೇ);  ರತಿಃ =ಮೋಹ ಅನುವಾದ: ಅವಿನಾಶಿಯಾದ, ಅದ್ವೈತವಾದ ಆತ್ಮವನ್ನು ಅರಿತುಕೊಂಡಮೇಲೆ ಆತ್ಮಜ್ಞಾನಿಯಾದ ಧೀರನು, ಸಂಪತ್ತನ್ನು ಗಳಿಸುವದಲ್ಲಿ ಆಸಕ್ತಿಯನ್ನು ಹೇಗೆ ಇರಿಸಿಕೊಳ್ಳುತ್ತಾನೆ? ವಿವರಣೆ: ಆತ್ಮಜ್ಞಾನವನ್ನು ಹುಡುಕುತ್ತ ಜನಕನು ಅದರ ಜೊತೆಗೇ ರಾಜ್ಯಭಾರವನ್ನೂ ಮಾಡುತ್ತಿದ್ದಾನೆ. ಅದಕ್ಕಾಗಿ ಅಷ್ಟಾವಕ್ರ ಮುನಿಯು ಅವನನ್ನು ಪರೀಕ್ಷಿಸುತ್ತ ಕೇಳುತ್ತಾನೆ - ಆತ್ಮಜ್ಞಾನವನ್ನು ಪಡೆದ ಮೇಲೆಯೂ ಹೇಗೆ ಧನಸಂಪಾದನೆಯಲ್ಲಿ ಆಸಕ್ತಿ ಇರುತ್ತದೆ.  ಆತ್ಮಾಜ್ಞಾನಾದಹೋ ಪ್ರೀತಿರ್ವಿಷಯಭ್ರಮಗೋಚರೇ . ಶುಕ್ತೇರಜ್ಞಾನತೋ ಲೋಭೋ ಯಥಾ ರಜತವಿಭ್ರಮೇ .. 3-2.. ಶಬ್ದಾರ್ಥ: ಆತ್ಮ + ಅಜ್ಞಾನಾತ್ =ಆತ್ಮದ ಅಜ್ಞಾನದಿಂದ; ಅಹೋ =ಅಹೋ; ಪ್ರೀತಿಃ =ಪ್ರೀತಿ; ವಿಷಯಭ್ರಮಗೋಚರೇ =ಭ್ರಮೆಯಾದ ವಿಷಯಗಳಲ್ಲಿ; ಶುಕ್ತೇ + ಅಜ್ಞಾನತಃ =ಚಿಪ್...

ಅಷ್ಟಾವಕ್ರಗೀತಾ - ೪

ಆತ್ಮಸಾಕ್ಷಾತ್ಕಾರದ ವೈಭವ  ಜನಕ ಉವಾಚ .. ಹಂತಾತ್ಮಜ್ಞಾನಸ್ಯ ಧೀರಸ್ಯ ಖೇಲತೋ ಭೋಗಲೀಲಯಾ . ನ ಹಿ ಸಂಸಾರವಾಹೀಕೈರ್ಮೂಢೈಃ ಸಹ ಸಮಾನತಾ .. 4-1.. ಓಹ್, ಆತ್ಮಜ್ಞಾನಿಯಾದ ಧೀರನು ಭೋಗಲೀಲೆಯಲ್ಲಿ ಕ್ರೀಡಿಸುವಂತೆ ಕಂಡರೂ ಸಂಸಾರದ ಭಾರವನ್ನು ಹೊರುವ ಮೂಢರ ಜೊತೆ ಅವನನ್ನು ಹೋಲಿಸಲಾಗುವದಿಲ್ಲ. (ಯಾಕೆಂದರೆ ಅವನು ಭೋಗದಿಂದ ಯಾವ ರೀತಿಯಲ್ಲೂ ಪರಿಣಾಮಿತನಾಗುವದಿಲ್ಲ) ಈ ಅಧ್ಯಾಯದಲ್ಲಿ ಜನಕನು ಅಷ್ಟಾವಕ್ರನ ಮಾತಿಗೆ ಉತ್ತರಿಸುತ್ತಿದ್ದಾನೆ  ಯತ್ ಪದಂ ಪ್ರೇಪ್ಸವೋ ದೀನಾಃ ಶಕ್ರಾದ್ಯಾಃ ಸರ್ವದೇವತಾಃ . ಅಹೋ ತತ್ರ ಸ್ಥಿತೋ ಯೋಗೀ ನ ಹರ್ಷಮುಪಗಚ್ಛತಿ .. 4-2.. ಯಾವ ಸ್ಥಿತಿಯನ್ನು ಹೊಂದಲು ಇಂದ್ರ(ಶಕ್ರ)ನನ್ನು ಒಳಗೊಂಡು ದೇವತೆಗಳೆಲ್ಲ ದೀನರಾಗಿ ಹಾತೊರೆಯುತ್ತಾರೋ, ಆ ಸ್ಥಿತಿಯನ್ನು ಹೊಂದಿಯೂ ಕೂಡ ಯೋಗಿಯು ಹರ್ಷವನ್ನು ಹೊಂದುವದಿಲ್ಲ.  ಆತ್ಮ ಸಾಕ್ಷಾತ್ಕಾರವನ್ನು ಪಡೆಯಲು ದೇವತೆಗಳು ಸಹ ಹಾತೊರೆಯುತ್ತಾರೆ ಹಾಗೂ ಅದು ದೊರೆಯದೇ ಅಸಂತುಷ್ಟರಾಗುತ್ತಾರೆ.  ತಜ್ಜ್ಞಸ್ಯ   ಪುಣ್ಯಪಾಪಾಭ್ಯಾಂ ಸ್ಪರ್ಶೋ ಹ್ಯಂತರ್ನ ಜಾಯತೇ . ನ ಹ್ಯಾಕಾಶಸ್ಯ ಧೂಮೇನ ದೃಶ್ಯಮಾನಾಪಿ ಸಂಗತಿಃ .. 4-3.. ಹೊಗೆಯು ಆಕಾಶವನ್ನು ಸ್ಪರ್ಶ್ರಿಸುತ್ತಿರುವಂತೆ ಕಂಡರೂ ಅದು ಆಕಾಶದಿಂದ ದೂರವೇ ಇರುವಂತೆ,  ಜ್ಞಾನಿಗೆ ಪಾಪ ಪುಣ್ಯಗಳಾವವವೂ ತಟ್ಟುವದಿಲ್ಲ.  ಆತ್ಮೈವೇದಂ ಜಗತ್ಸರ್ವಂ ಜ್ಞಾತಂ ಯೇನ ಮಹಾತ್ಮನಾ . ಯದೃಚ್ಛಯಾ ವರ್ತಮಾನಂ ತಂ ನಿಷೇದ್ಧುಂ ಕ್ಷ...

ಅಷ್ಟಾವಕ್ರ ಗೀತಾ - ೫

ಲಯದ ಉಪದೇಶ ಅಷ್ಟಾವಕ್ರ ಉವಾಚ .. ನ ತೇ ಸಂಗೋಽಸ್ತಿ ಕೇನಾಪಿ ಕಿಂ ಶುದ್ಧಸ್ತ್ಯಕ್ತುಮಿಚ್ಛಸಿ . ಸಂಘಾತವಿಲಯಂ ಕುರ್ವನ್ನೇವಮೇವ ಲಯಂ ವ್ರಜ .. 5-1.. ಅಷ್ಟಾವಕ್ರನು ಜನಕನಿಗೆ ಮೋಕ್ಷದ ಮಾರ್ಗವನ್ನು ತಿಳಿಸಿ ಹೇಳುತ್ತಾ ಹೀಗೆ ಹೇಳುತ್ತಾನೆ- ನೀನು ಶುದ್ಧನು, ನಿನಗೆ ಯಾವುದರ ಸಂಗವೂ ಇಲ್ಲ   ಹೀಗಿರುವಾಗ ಏನನ್ನು ತಾನೇ ತ್ಯಜಿಸಲು ಇಚ್ಛಿಸುವೆ? ನೀನು ಶರೀರ-ಮನ-ಅಹಂಕಾರಗಳ ಮೋಹವನ್ನು ನಾಶವಾಗಿಸಿ ಲಯವನ್ನು, ಮುಕ್ತಿಯನ್ನು ಹೊಂದು ಉದೇತಿ ಭವತೋ ವಿಶ್ವಂ ವಾರಿಧೇರಿವ ಬುದ್ಬುದಃ . ಇತಿ ಜ್ಞಾತ್ವೈಕಮಾತ್ಮಾನಮೇವಮೇವ ಲಯಂ ವ್ರಜ .. 5-2.. ಸಾಗರದಿಂದ ಅಲೆಗಳು ಉದಯಿಸಿದಂತೆ, ಈ ವಿಶ್ವವೆಲ್ಲ ನಿನ್ನಿಂದಲೇ ಉದ್ಭವವಾಗುತ್ತದೆ. ಇದನ್ನು ತಿಳಿದು, ನೀನೇ ಆತ್ಮನೆಂದು ತಿಳಿದು, ಲಯವನ್ನು (ಮೋಕ್ಷವನ್ನು) ಹೊಂದು. ಪ್ರತ್ಯಕ್ಷಮಪ್ಯವಸ್ತುತ್ವಾದ್ ವಿಶ್ವಂ ನಾಸ್ತ್ಯಮಲೇ ತ್ವಯಿ . ರಜ್ಜುಸರ್ಪ ಇವ ವ್ಯಕ್ತಮೇವಮೇವ ಲಯಂ ವ್ರಜ .. 5-3.. ಹಗ್ಗ ಸರ್ಪದಂತೆ ಕಾಣುವಂತೆ, ಪ್ರತ್ಯಕ್ಷವೆನಿಸಿದರೂ ಅವಸ್ತುವಾದದ್ದರಿಂದ (ಮಿಥ್ಯೆಯಾದದ್ದರಿಂದ) ಈ ವಿಶ್ವವು ಅಮಲನಾದ(ಶುದ್ಧನಾದ) ನಿನ್ನೊಳಗೆ ಇಲ್ಲ. ಇದನ್ನು ಅರಿತು ಲಯವನ್ನು ಹೊಂದು. ಸಮದುಃಖಸುಖಃ ಪೂರ್ಣ ಆಶಾನೈರಾಶ್ಯಯೋಃ ಸಮಃ . ಸಮಜೀವಿತಮೃತ್ಯುಃ ಸನ್ನೇವಮೇವ ಲಯಂ ವ್ರಜ .. 5-4.. ನೀನಗೆ ಸುಖ-ದುಃಖಗಳು ಸಮಾನ. ಆಶಾ-ನಿರಾಶೆಗಳು ಸಮಾನ. ಜೀವನ-ಮೃತ್ಯುಗಳು ಸಮಾನ. ಈ ರೀತಿಯವನಾಗಿರುವ ನೀನು ಆತ್ಮದಲ್ಲಿ ಲಯವನ್ನು ಹೊಂದು....

ಅಷ್ಟಾವಕ್ರಗೀತಾ- ೬

ಯತಾರ್ಥ ಜ್ಞಾನೋಪದೇಶ ಜನಕ ಉವಾಚ- ಆಕಾಶವದನಂತೋಽಹಂ ಘಟವತ್ ಪ್ರಾಕೃತಂ ಜಗತ್ . ಇತಿ ಜ್ಞಾನಂ ತಥೈತಸ್ಯ ನ ತ್ಯಾಗೋ ನ ಗ್ರಹೋ ಲಯಃ .. 6-1.. ಜನಕ ಹೇಳಿದನು : ನಾನು ಆಕಾಶದಂತೆ ಅನಂತನು. ಈ ಪ್ರಾಕೃತಿಕ ಜಗತ್ತಾದರೋ ಮಡಿಕೆಯಂತೆ. ಇದನ್ನು ಅರಿಯುವದೇ ಜ್ಞಾನ. (ಹಾಗಾಗಿ) ಈ ಜಗತ್ತನ್ನು ಗೃಹಿಸುವದು, ತ್ಯಜಿಸುವದು ಅಥವಾ ನಾಶ ಮಾಡುವ ಪ್ರಶ್ನೆಯೇ ಇಲ್ಲ. ಹಿಂದಿನ ಅಧ್ಯಾಯದಲ್ಲಿ ಅಷ್ಟಾವಕ್ರನು ಲಯವಾಗುವದರ ಬಗ್ಗೆ ಹೇಳಿದ್ದಕ್ಕೆ ಇದು ಜನಕರಾಜನ ಉತ್ತರ. ಮಹೋದಧಿರಿವಾಹಂ ಸ ಪ್ರಪಂಚೋ ವೀಚಿಸನ್ನಿಭಃ . ಇತಿ ಜ್ಞಾನಂ ತಥೈತಸ್ಯ ನ ತ್ಯಾಗೋ ನ ಗ್ರಹೋ ಲಯಃ .. 6-2.. ಮಹೋದಧಿ=ಮಹಾಸಾಗರ    ವೀಚಿಸನ್ನಿಭಃ=ಅಲೆಯಂತೆ  ನಾನು ಮಹಾಸಾಗರದಂತೆ ಅನಂತನು, ಪ್ರಪಂಚವೋ ಆ ಸಾಗರದ ಅಲೆಯಂತೆ ಕ್ಷಣಿಕ. ಇದೇ ಜ್ಞಾನ. ಹಾಗಾಗಿ ಈ ಆತ್ಮವನ್ನು ಗೃಹಿಸುವದೂ ಅಲ್ಲ, ತ್ಯಜಿಸುವದೂ ಅಲ್ಲ, ಬದಲಾಗಿ ಅದರಲ್ಲೇ ಲಯವಾಗುವದೇ ಸರಿ. ಸಾಗರವು ಚಿರ, ಶಾಶ್ವತ, ಅನಂತ. ಅದರಲ್ಲಿ ಅಲೆಗಳು ಎದ್ದು, ಚಲಿಸಿ, ಮಾಯವಾಗುತ್ತವೆ. ಹಾಗೆಯೇ ಆತ್ಮ ಶಾಶ್ವರ. ಈ ವಿಶ್ವದ ಸಂಗತಿಗಳು ಅದರಲ್ಲಿ ಬಂದು ನಂತರ ನಾಶವಾಗುತ್ತವೆ. ಹೀಗಿರುವಾಗ ಯಾವುದನ್ನು ಯಾಕೆ ತ್ಯಾಗ ಮಾಡಬೇಕು ಅಥವಾ ಗ್ರಹಿಸಬೇಕು ಅಥವಾ ಯಾವುದರಲ್ಲಿ ಲಯವಾಗಬೇಕು? ಅಹಂ ಸ ಶುಕ್ತಿಸಂಕಾಶೋ ರೂಪ್ಯವದ್ ವಿಶ್ವಕಲ್ಪನಾ . ಇತಿ ಜ್ಞಾನಂ ತಥೈತಸ್ಯ ನ ತ್ಯಾಗೋ ನ ಗ್ರಹೋ ಲಯಃ .. 6-3.. ನಾನು ಚಿಪ್ಪು, ಈ ವಿಶ್ವದ ಕಲ್ಪನೆ ಬೆಳ್ಳಿಯಂತೆ. ...

ಅಷ್ಟಾವಕ್ರಗೀತಾ-೭

 ಜನಕನ ಸಾಕ್ಷಾತ್ಕಾರ ಜನಕ ಉವಾಚ -  ಮಯ್ಯನಂತಮಹಾಂಭೋಧೌ ವಿಶ್ವಪೋತ ಇತಸ್ತತಃ . ಭ್ರಮತಿ ಸ್ವಾಂತವಾತೇನ ನ ಮಮಾಸ್ತ್ಯಸಹಿಷ್ಣುತಾ .. 7-1.. ನಾನೆು ಅನಂತ ಮಹಾಸಾಗರದಂತೆ ವಿಶ್ವವೆಂಬದು ಹಡಗಂತೆ. ಅದು ತನ್ನ ಗಾಳಿಯಿಂದ ಅಲ್ಲಿ ಇಲ್ಲಿ ಓಲಾಡುತ್ತದ್ದರೂ ಸಾಗರಕ್ಕೆ ಏನೂ ಆಗುವದಿಲ್ಲ. ಹಾಗೆಯೇ ವಿಶ್ವದ ಸಂಗತಿಗಳಿಂದ ನಾನು ವಿಚಲಿತನಾಗುವದಿಲ್ಲ.      ಮಯ್ಯನಂತಮಹಾಂಭೋಧೌ ಜಗದ್ವೀಚಿಃ ಸ್ವಭಾವತಃ . ಉದೇತು ವಾಸ್ತಮಾಯಾತು ನ ಮೇ ವೃದ್ಧಿರ್ನ ಚ ಕ್ಷತಿಃ .. 7-2.. ನಾನೆಂಬ ಅನಂತ ಮಹಾಸಾಗರದಲ್ಲಿ ಜಗತ್ತೆಂಬ ಅಲೆಗಳು ಉದಯಿಸಿ ಅಸ್ತವಾಗುತ್ತಲಿದ್ದರೂ ನನಗೆ ವೃದ್ಧಿ ಅಥವಾ ಕ್ಷಯವಿಲ್ಲ. ಸಾಗರದಲ್ಲಿ ಅಲೆಗಳು ಏಳುತ್ತವೆ ಹಾಗೂ ಮತ್ತೆ ನೀರಿನಲ್ಲಿ ಸೇರಿ ವಿಲೀನವಾಗುತ್ತವೆ. ಅದರಿಂದ ಸಾಗರದಲ್ಲಿ ಬದಲಾವಣೆಯಾಗುವದಿಲ್ಲ. ಹಾಗೆಯೇ ಜಗತ್ತಿನಲ್ಲಿ ಜೀವಿಗಳು ಅಲೆಯಂತೆ ಉದಯಿಸಿ ಬೆಳೆದು ನಾಶವಾದರೂ ಆತ್ಮಕ್ಕೆ ಯಾವುದೇ ರೀತಿಯ ಪರಿಣಾಮವಾಗುವದಿಲ್ಲ.  ಮಯ್ಯನಂತಮಹಾಂಭೋಧೌ ವಿಶ್ವಂ ನಾಮ ವಿಕಲ್ಪನಾ . ಅತಿಶಾಂತೋ ನಿರಾಕಾರ ಏತದೇವಾಹಮಾಸ್ಥಿತಃ .. 7-3.. ನಾನೆಂಬ ಮಹಾಸಾಗರದಲ್ಲಿ ವಿಶ್ವ ಎಂಬದು ಒಂದು ಕಲ್ಪನೆ. ಅತಿ ಶಾಂತನೂ ನಿರಾಕಾರನೂ ಆದ ನಾನು ಅದರಲ್ಲೇ(ಆ ಜ್ಞಾನದಲ್ಲೇ) ಇರುತ್ತೇನೆ. ನಾತ್ಮಾ ಭಾವೇಷು ನೋ ಭಾವಸ್ತತ್ರಾನಂತೇ ನಿರಂಜನೇ . ಇತ್ಯಸಕ್ತೋಽಸ್ಪೃಹಃ ಶಾಂತ ಏತದೇವಾಹಮಾಸ್ಥಿತಃ .. 7-4.. ನಾನು ಯಾವ ವಸ್ತುಗಳಲ್ಲೂ ಇಲ್ಲ ನ...