ಅಷ್ಟಾವಕ್ರನ ಕತೆ
ಒಂದಾನೊಂದು ಕಾಲದಲ್ಲಿ ಕಹೋಡ ಎಂಬ ಒಬ್ಬ ವ್ಯಕ್ತಿ ಧರ್ಮಗ್ರಂಥಗಳ ಅಧ್ಯಯನ ಮಾಡುತ್ತಿದ್ದನು. ಅವನು ಹೊಟ್ಟೆಪಾಡಿಗಾಗಿ ದಿನವಿಡೀ ಕಷ್ಟಪಟ್ಟು ಕೆಲಸ ಮಾಡುತ್ತಿದ್ದ, ನಂತರ ರಾತ್ರಿ ವೇದಾಧ್ಯಯನ ಮಾಡುತ್ತಿದ್ದ. ರಾತ್ರಿ ಬಹಳ ವೇಳೆಯವರೆಗೆ ಶ್ಲೋಕಗಳನ್ನು ಗಟ್ಟಿಯಾಗಿ ಓದುತ್ತ ಅಧ್ಯಯನ ಮಾಡುತ್ತಿದ್ದ. ಅವನ ಗರ್ಭಿಣಿ ಪತ್ನಿ ಸುಜಾತಾ, ಪಕ್ಕದಲ್ಲಿ ಕುಳಿತು, ತನ್ನ ಪತಿ ಶ್ಲೋಕಗಳನ್ನು ಹೇಳುತ್ತಿರುವುದನ್ನು ಕೇಳುತ್ತಿದ್ದಳು. ಸುಜಾತಾ ಎಂಟು ತಿಂಗಳ ಗರ್ಭಿಣಿಯಾಗಿದ್ದಾಗ, ಒಂದು ರಾತ್ರಿ ಅವಳ ಹೊಟ್ಟೆಯೊಳಗಿನಿಂದ ಒಂದು ಧ್ವನಿ ಕಹೋಡನಿಗೆ ಹೇಳಿತು: "ಅಪ್ಪಾ, ದಯವಿಟ್ಟು ಗಮನವಿರಲಿ - ನೀವು ಆ ಶ್ಲೋಕವನ್ನು ತಪ್ಪಾಗಿ ಉಚ್ಚರಿಸುತ್ತಿದ್ದೀರಾ." ಕಹೋಡನಿಗೆ ಸಿಟ್ಟು ನೆತ್ತಿಗೇರಿತು. ಹಿಂದೆ ಮುಂದೆ ಯೋಚಿಸದೆ, ಇನ್ನೂ ಹುಟ್ಟದ ಮಗುವಿನ ಮೇಲೆ ಯಾಕೆ ತಾನು ಇಷ್ಟು ಸಿಟ್ಟು ಮಾಡಿಕೊಳ್ಳಬೇಕು ಎಂದೂ ಯೋಚಿಸದೇ, ತನ್ನ ಮಗುವಿಗೇ ಶಾಪ ಕೊಟ್ಟನು "ನೀನು ಅಷ್ಟಾವಕ್ರನಾಗಿ ಜನಿಸು". ತಂದೆಯಿಂದ ಬಂದ ಶಾಪವಲ್ಲವೇ, ಸಫಲವಾಯಿತು: ಮಗುವು ವಿರೂಪಗೊಂಡು, ದೇಹದಲ್ಲಿ ಎಂಟು ವಕ್ರಗಳೊಂದಿಗೆ ಜನಿಸಿತು. ಮಗುವಿಗೆ ಅಷ್ಟಾವಕ್ರ ಎಂದು ಹೆಸರು ಇಡಲಾಯಿತು. ಅವನ ಬಾಲ್ಯದಲ್ಲಿ ಅವನನ್ನು ನೋಡಿದವರೆಲ್ಲರೂ ಅಪಹಾಸ್ಯದಿಂದ ನಗುತ್ತಿದ್ದರು. ಆದರೆ ಚಿಕ್ಕ ಅಷ್ಟಾವಕ್ರನಿಗೆ ಅದರಿಂದ ಯಾವ ಸಿಟ್ಟು ಸಿಡುಗೂ ಆಗುತ್ತುರಲಿಲ್ಲ....