Skip to main content

Posts

ಅಷ್ಟಾವಕ್ರಗೀತಾ - ೧೭

 ಅಷ್ಟಾವಕ್ರ ಉವಾಚ .. ತೇನ ಜ್ಞಾನಫಲಂ ಪ್ರಾಪ್ತಂ ಯೋಗಾಭ್ಯಾಸಫಲಂ ತಥಾ . ತೃಪ್ತಃ ಸ್ವಚ್ಛೇಂದ್ರಿಯೋ ನಿತ್ಯಮೇಕಾಕೀ ರಮತೇ ತು ಯಃ .. ೧೭-೧.. ಯಾರು ಸ್ವಚ್ಛೇಂದ್ರಿಯನೋ, ನಿತ್ಯ ತೃಪ್ತನೋ, ನಿತ್ಯ ಏಕಾಕಿಯಾಗಿ ಸಂತೋಷದಲ್ಲಿರುವನೋ, ಅವನು  ತನ್ನ ಯೋಗಾಭ್ಯಾಸಫಲವನ್ನೂ ಹಾಗೂ ಜ್ಞಾನವನ್ನೂ ಪಡೆಯುತ್ತಾನೆ. ನ ಕದಾಚಿಜ್ಜಗತ್ಯಸ್ಮಿನ್ ತತ್ತ್ವಜ್ಞೋ ಹಂತ ಖಿದ್ಯತಿ . ಯತ ಏಕೇನ ತೇನೇದಂ ಪೂರ್ಣಂ ಬ್ರಹ್ಮಾಂಡಮಂಡಲಂ .. ೧೭-೨.. ಆಹಾ, ತತ್ವಜ್ಞನಾದವನು ಎಂದೂ ದುಃಖಿಸುವದಿಲ್ಲ ಯಾಕೆಂದರೆ ಈ ಪ್ರಪಂಚವೆಲ್ಲಾ 'ಅವನಿಂದ' ಆವೃತವಾಗಿದೆ . ನ ಜಾತು ವಿಷಯಾಃ ಕೇಽಪಿ ಸ್ವಾರಾಮಂ ಹರ್ಷಯಂತ್ಯಮೀ . ಸಲ್ಲಕೀಪಲ್ಲವಪ್ರೀತಮಿವೇಭಂ ನಿಂಬಪಲ್ಲವಾಃ .. ೧೭-೩.. ಸಲ್ಲಕಿ ಗಿಡದ ಎಲೆಗಳನ್ನು ಪ್ರಿತಿಸುವ ಆನೆ ಬೇವಿನ ಎಲೆಯನ್ನು ಇಷ್ಟಪಡದೆ ಇರುವಂತೆ, ಸ್ವಯಂ ಸಂತುಷ್ಟನಾದವನಿಗೆ ವಿಷಯ ಸುಖಗಳು ಹರ್ಷ ತರುವದಿಲ್ಲ. ಯಸ್ತು ಭೋಗೇಷು ಭುಕ್ತೇಷು ನ ಭವತ್ಯಧಿವಾಸಿತಃ . ಅಭುಕ್ತೇಷು ನಿರಾಕಾಂಕ್ಷೀ ತಾದೃಶೋ ಭವದುರ್ಲಭಃ .. ೧೭-೪.. ಯಾರು ಭೋಗಿಸಿಯೂ ಅದರಲ್ಲಿ ನಿರ್ಲಿಪ್ತನೋ, ತಾನು ಭೋಗಿಸದ ವಸ್ತುಗಳಲ್ಲಿ ನಿರಾಸಕ್ತನೋ, ಅಂತಹ ಮನುಷ್ಯನು ಸಿಗುವದು ದುರ್ಲಭ. ಬುಭುಕ್ಷುರಿಹ ಸಂಸಾರೇ ಮುಮುಕ್ಷುರಪಿ ದೃಶ್ಯತೇ . ಭೋಗಮೋಕ್ಷನಿರಾಕಾಂಕ್ಷೀ ವಿರಲೋ ಹಿ ಮಹಾಶಯಃ .. ೧೭-೫.. ಈ ಜಗದಲ್ಲಿ ಭುಭುಕ್ಷಗಳೂ ಸಿಗುತ್ತಾರೆ, ಮುಮುಕ್ಷುಗಳೂ ಸಿಗುತ್ತಾರೆ. ಆದರೆ ಯಾರಿಗೆ ಭೋಗದಲ್ಲೂ ನಿರಾಸಕ್ತಿ,...

ಅಷ್ಟಾವಕ್ರಗೀತಾ - ೧೮

 ಅಷ್ಟಾವಕ್ರ ಉವಾಚ .. ಯಸ್ಯ ಬೋಧೋದಯೇ ತಾವತ್ಸ್ವಪ್ನವದ್ ಭವತಿ ಭ್ರಮಃ . ತಸ್ಮೈ ಸುಖೈಕರೂಪಾಯ ನಮಃ ಶಾಂತಾಯ ತೇಜಸೇ .. ೧೮-೧.. ಯಾರಿಗೆ ಜ್ಞಾನೋದಯದಿಂದ ಮಾಯಾ-ಮೋಹಗಳು ಸ್ವಪ್ನದಂತಾಗುವವೋ (ಸ್ವಪ್ನದಂತೆ ಮಿಥ್ಯೆಯಾಗುವವೋ), ಅಂತಹ ಸುಖ ಏಕರೂಪಿ, ಶಾಂತರೂಪಿ ತೇಜಸ್ವಿಗೆ ನಮಸ್ಕಾರಗಳು. ಅರ್ಜಯಿತ್ವಾಖಿಲಾನ್ ಅರ್ಥಾನ್ ಭೋಗಾನಾಪ್ನೋತಿ ಪುಷ್ಕಲಾನ್ . ನ ಹಿ ಸರ್ವಪರಿತ್ಯಾಗಮಂತರೇಣ ಸುಖೀ ಭವೇತ್ .. ೧೮-೨.. ಮನುಷ್ಯನು ಅಖಿಲ ಧನ-ಸಂಪತ್ತುಗಳನ್ನು ಗಳಿಸಿದಾಗ ಪುಷ್ಕಳ ಭೋಗವನ್ನು ಅನುಭವಿಸುತ್ತಾನೆ. ಆದರೆ ಸರ್ವವನ್ನೂ ತ್ಯಾಗ ಮಾಡುವತನಕ ಅವನು ಸುಖಿಯಾಗುವದಿಲ್ಲ. (ಭರ್ತ್ರಹರಿಯ ಒಂದು ಶ್ಲೋಕ ಹೀಗೆ ಹೇಳುತ್ತದೆ " ಸುಖದಲ್ಲಿ ರೋಗದ ಭಯವಿದೆ;  ಗೌರವಾನ್ವಿತ ಸಾಮಾಜಿಕ ಸ್ಥಾನದಲ್ಲಿ, ಅದನ್ನು ಕಳೆದುಕೊಳ್ಳುವ ಭಯವಿದೆ; ಸಂಪತ್ತಿನಲ್ಲಿ  ರಾಜರ (ತೆರಿಗೆಯ) ಭಯವಿದೆ; ಗೌರವದಲ್ಲಿ ಅವಮಾನದ ಭಯವಿದೆ; ಅಧಿಕಾರದಲ್ಲಿ, ಶತ್ರುಗಳ ಭಯವಿದೆ; ಸೌಂದರ್ಯದಲ್ಲಿ ವೃದ್ಧಾಪ್ಯದ ಭಯವಿದೆ; ಪಾಂಡಿತ್ಯದಲ್ಲಿ, ವಿರೋಧಿಗಳ ಭಯವಿದೆ; ದೇಹದಲ್ಲಿ, ಮರಣದ ಭಯವಿದೆ. ಮನುಷ್ಯರಿಗೆ ಸಂಬಂಧಿಸಿದ ಎಲ್ಲಾ ಐಹಿಕ ವಿಷಯಗಳು ಭಯದಿಂದ ಕೂಡಿರುತ್ತವೆ; ಸರ್ವ ಪರಿತ್ಯಾಗ ಮಾತ್ರ ಎಲ್ಲಾ ಭಯವನ್ನು ನಾಶ ಮಾಡುತ್ತದೆ.") ಕರ್ತವ್ಯದುಃಖಮಾರ್ತಂಡಜ್ವಾಲಾದಗ್ಧಾಂತರಾತ್ಮನಃ . ಕುತಃ ಪ್ರಶಮಪೀಯೂಷಧಾರಾಸಾರಮೃತೇ ಸುಖಂ .. ೧೮-೩.. ಅಂತರಾತ್ಮನು ಕರ್ತವ್ಯ ಮತ್ತು ದುಃಖಗಳ ಸೂರ್ಯಸಮಾನ ಜ್ವಾ...

ಅಷ್ಟಾವಕ್ರಗೀತೆ - ೧೯

 ಜನಕ ಉವಾಚ .. ತತ್ತ್ವವಿಜ್ಞಾನಸಂದಂಶಮಾದಾಯ ಹೃದಯೋದರಾತ್ . ನಾನಾವಿಧಪರಾಮರ್ಶಶಲ್ಯೋದ್ಧಾರಃ ಕೃತೋ ಮಯಾ .. ೧೯-೧.. ಜನಕ ಹೇಳಿದನು: ನೈಜ ಜ್ಞಾನದ ಚಿಮುಟಗಳನ್ನು ಬಳಸಿಕೊಂಡು, ನನ್ನ ಹೃದಯದಾಳದಿಂದ,  ವಿವಿಧ ಅನುಮಾನಗಳ ಮುಳ್ಳುಗಳನ್ನು ತೆಗೆದುಹಾಕಿದ್ದೇನೆ. ಕ್ವ ಧರ್ಮಃ ಕ್ವ ಚ ವಾ ಕಾಮಃ ಕ್ವ ಚಾರ್ಥಃ ಕ್ವ ವಿವೇಕಿತಾ . ಕ್ವ ದ್ವೈತಂ ಕ್ವ ಚ ವಾಽದ್ವೈತಂ ಸ್ವಮಹಿಮ್ನಿ ಸ್ಥಿತಸ್ಯ ಮೇ .. ೧೯-೨.. ಧರ್ಮ ಎಲ್ಲಿದೆ, ಕಾಮ  ಎಲ್ಲಿದೆ, ಸಂಪತ್ತು ಎಲ್ಲಿದೆ ಅಥವಾ ವಿವೇಚನೆ ಎಲ್ಲಿದೆ? ನನ್ನ ಸ್ವಂತ ವೈಭವದಲ್ಲಿ ಸ್ಥಾಪಿತವಾದ ನನಗೆ ದ್ವೈತ ಎಲ್ಲಿದೆ ಅಥವಾ ಅದ್ವೈತ ಎಲ್ಲಿದೆ? ಕ್ವ ಭೂತಂ ಕ್ವ ಭವಿಷ್ಯದ್ ವಾ ವರ್ತಮಾನಮಪಿ ಕ್ವ ವಾ . ಕ್ವ ದೇಶಃ ಕ್ವ ಚ ವಾ ನಿತ್ಯಂ ಸ್ವಮಹಿಮ್ನಿ ಸ್ಥಿತಸ್ಯ ಮೇ .. ೧೯-೩.. ನನ್ನ ಸ್ವಂತ ವೈಭವದಲ್ಲಿ ನೆಲೆಸಿರುವ ನನಗೆ, ಭೂತ ಎಲ್ಲಿದೆ, ಭವಿಷ್ಯ ಎಲ್ಲಿದೆ, ವರ್ತಮಾನ ಎಲ್ಲಿದೆ, ಸ್ಥಳ ಎಲ್ಲಿದೆ, ಶಾಶ್ವತತೆ ಎಲ್ಲಿದೆ? ಕ್ವ ಚಾತ್ಮಾ ಕ್ವ ಚ ವಾನಾತ್ಮಾ ಕ್ವ ಶುಭಂ ಕ್ವಾಶುಭಂ ಯಥಾ . ಕ್ವ ಚಿಂತಾ ಕ್ವ ಚ ವಾಚಿಂತಾ ಸ್ವಮಹಿಮ್ನಿ ಸ್ಥಿತಸ್ಯ ಮೇ .. ೧೯-೪.. ನನ್ನ ಸ್ವಂತ ವೈಭವದಲ್ಲಿ ನೆಲೆಸಿರುವ ನನಗೆ, ಆತ್ಮ ಎಲ್ಲಿದೆ, ಅನಾತ್ಮ ಎಲ್ಲಿದೆ, ಶುಭ ಎಲ್ಲಿದೆ, ಅಶುಭ ಎಲ್ಲಿದೆ, ಚಿಂತೆ ಎಲ್ಲಿದೆ, ನಿಶ್ಚಿಂತೆ ಎಲ್ಲಿದೆ? ಕ್ವ ಸ್ವಪ್ನಃ ಕ್ವ ಸುಷುಪ್ತಿರ್ವಾ ಕ್ವ ಚ ಜಾಗರಣಂ ತಥಾ . ಕ್ವ ತುರೀಯಂ ಭಯಂ ವಾಪಿ ...

ಅಷ್ಟಾವಕ್ರಗೀತೆ - ೨೦

   ಜನಕ ಉವಾಚ .. ಕ್ವ ಭೂತಾನಿ ಕ್ವ ದೇಹೋ ವಾ ಕ್ವೇಂದ್ರಿಯಾಣಿ ಕ್ವ ವಾ ಮನಃ . ಕ್ವ ಶೂನ್ಯಂ ಕ್ವ ಚ ನೈರಾಶ್ಯಂ ಮತ್ಸ್ವರೂಪೇ ನಿರಂಜನೇ .. ೨೦-೧.. ಪಂಚಭೂತಗಳೆಲ್ಲಿ? ದೇಹ, ಇಂದ್ರಿಯಗಳು, ಮನಸ್ಸು ಎಲ್ಲಿ? ಶೂನ್ಯತೆ ಅಥವಾ ನಿರಾಶೆ ಎಲ್ಲಿದೆ? ಶುದ್ಧ ಮತ್ತು ನಿರ್ಮಲವಾದ ನನ್ನ ನೈಜ ಸ್ವರೂಪದಲ್ಲಿ ಇವು ಯಾವವೂ ಅಸ್ತಿತ್ವದಲ್ಲಿಲ್ಲ. ಕ್ವ ಶಾಸ್ತ್ರಂ ಕ್ವಾತ್ಮವಿಜ್ಞಾನಂ ಕ್ವ ವಾ ನಿರ್ವಿಷಯಂ ಮನಃ . ಕ್ವ ತೃಪ್ತಿಃ ಕ್ವ ವಿತೃಷ್ಣಾತ್ವಂ ಗತದ್ವಂದ್ವಸ್ಯ ಮೇ ಸದಾ .. ೨೦-೨.. ಸದಾ ದ್ವಂದ್ವಮುಕ್ತನಾದ ನನಗೆ ಶಾಸ್ತ್ರಗಳು ಎಲ್ಲಿ, ಆತ್ಮವಿಜ್ಞಾನವೆಲ್ಲಿ, ವಿಷಯದಿಂದ ಮುಕ್ತವಾದ ಮನಸ್ಸೆಲ್ಲಿದೆ? ತೃಪ್ತಿ ಎಲ್ಲಿ, ಆಸೆರಹಿತತೆ ಎಲ್ಲಿ? ಕ್ವ ವಿದ್ಯಾ ಕ್ವ ಚ ವಾವಿದ್ಯಾ ಕ್ವಾಹಂ ಕ್ವೇದಂ ಮಮ ಕ್ವ ವಾ . ಕ್ವ ಬಂಧ ಕ್ವ ಚ ವಾ ಮೋಕ್ಷಃ ಸ್ವರೂಪಸ್ಯ ಕ್ವ ರೂಪಿತಾ .. ೨೦-೩.. ವಿದ್ಯೆ ಎಲ್ಲಿ, ಅವಿದ್ಯೆ ಎಲ್ಲಿ, ನಾನು ಎಲ್ಲಿ, ನನ್ನದು ಎಲ್ಲಿ, ಬಂಧನ ಎಲ್ಲಿ, ಮೋಕ್ಷ ಎಲ್ಲಿ, ನನ್ನ ನೈಜವಾದ ಆತ್ಮದ ರೂಪ ಎಲ್ಲಿ? ಕ್ವ ಪ್ರಾರಬ್ಧಾನಿ ಕರ್ಮಾಣಿ ಜೀವನ್ಮುಕ್ತಿರಪಿ ಕ್ವ ವಾ . ಕ್ವ ತದ್ ವಿದೇಹಕೈವಲ್ಯಂ ನಿರ್ವಿಶೇಷಸ್ಯ ಸರ್ವದಾ .. ೨೦-೪.. ಸರ್ವದಾ ನಿರ್ವಿಶೇಷನಾದವನಿಗೆ ಪ್ರಾರಬ್ಧ ಕರ್ಮಗಳೆಲ್ಲಿ, ಜೀವನ್ಮುಕ್ತಿ ಎಲ್ಲಿ, ಮರಣದ ನಂತರದ ಮುಕ್ತಿ ಎಲ್ಲಿ? ಕ್ವ ಕರ್ತಾ ಕ್ವ ಚ ವಾ ಭೋಕ್ತಾ ನಿಷ್ಕ್ರಿಯಂ ಸ್ಫುರಣಂ ಕ್ವ ವಾ . ಕ್ವಾಪರೋಕ್ಷಂ ಫಲಂ ವಾ ಕ್ವ ನಿಃಸ್ವ...